ಕರಾವಳಿ

ಲೇಡಿಸ್ ಬಾರ್ ಮಾಲೀಕನ ಕೊಲೆ; ಉಡುಪಿಯ ಮೂವರು ಬಸ್ ಉದ್ಯೋಗಿಗಳ ಸಹಿತ ನಾಲ್ವರು ಸೆರೆ

Pinterest LinkedIn Tumblr

ಉಡುಪಿ: ಮುಂಬಯಿ ಮೂಲದ ಲೇಡಿಸ್ ಬಾರ್ ಹೊಂದಿದ್ದ ಉದ್ಯಮಿಯನ್ನು ಕೊಂದ ನಾಲ್ವರು ಆರೋಪಿಗಳನ್ನು ಒಂದೇ ದಿನದಲ್ಲಿ ಉಡುಪಿ ಪೊಲೀಸರು ಬಂಧಿಸಿದ್ದಾರೆ. ನವಿ ಮುಂಬಯಿ ಹೋಟೆಲ್ ಉದ್ಯಮಿ ಮಾಯಾ ಬಾರನ ಮಾಲೀಕ ವಶಿಷ್ಟ ಸತ್ಯನಾರಾಯಣ ಯಾದವ್ ಕೊಲೆಯಾದವರು. ಹಿರಿಯಡ್ಕ ಪೋಲಿಸ್ ಠಾಣೆಯ ಬೆಳ್ಳಂಪಳ್ಳಿ ದೊಡ್ಡಣಗುಡ್ಡೆಯಲ್ಲಿ ಫೆ,೧೦ ಕೊಲೆಯಾದ ಸ್ಥಿತಿಯಲ್ಲಿ ವಶಿಷ್ಟ ಶವ ಪತ್ತೆಯಾಗಿತ್ತು.

 

ಮೂವರು ಉಡುಪಿಯವರು..ಒಬ್ಬ ದೆಹಲಿ!
ಕೊಲೆಯ ಪ್ರಮುಖ ಆರೋಪಿ ದೆಹಲಿ ಜಗಜಿತ್ ನಗರ ನ್ಯೂಸ್ ಹುಸಮನ್ ಪುರ ನಿವಾಸಿ ಸುಮಿತ್ ಮಿಶ್ರ್ (23)-ಈತ ಮಾಯ ಬಾರನ ಉದ್ಯೋಗಿಯಾಗಿದ್ದು. ಮೂರು ತಿಂಗಳು ಹಿಂದೆ ಕೊಲೆಯಾದ ವಶಿಷ್ಟರೊಂದಿಗೆ ಜಗಳವಾಡಿ ಕೆಲಸ ಬಿಟ್ಟಿದ್ದ. ಸುರತ್ಕಲ್ ಚೋಕ್ಕಬೆಟ್ಟು ನಿವಾಸಿ ಅಬ್ದುಲ್ ಶುಕೂರ್ @ ಅದ್ದು (35), ಮಂಗಳೂರು ತೆಂಕಮಿಜಾರು ಕಂದಾಲಬೆಟ್ಟು ನಿವಾಸಿ ಅವಿನಾಶ್ ಕರ್ಕೆರಾ ( 25), ಉಡುಪಿ ಶಿವಳ್ಳಿ ಕುಂಜಿಬೆಟ್ಟು ನಿವಾಸಿ ಮೊಹಮ್ಮದ್ ಶರೀಪ್ (32)- ಈ ಮೂವರು ಆರೋಪಿಗಳು ಉಡುಪಿ ಮೂಲದ ಎ.ಕೆ.ಎಮ್.ಎಸ್ ಬಸ್ ನಲ್ಲಿ ಉದ್ಯೋಗಿಗಳು.

ಒಂದೇ ದಿನದಲ್ಲಿ ಆರೋಪಿಗಳು ಅಂದರ್!
ಮೊದಲಿಗೆ ಅಪರಿಚಿತ ವ್ಯಕ್ತಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾದ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಹಿರಿಯಡಕ ಪೊಲೀಸರು ತನಿಖೆ ಚುರುಕು ಮಾಡಿದ್ದರು. ಮೊದಲಿಗೆ ಕೊಲೆಯಾದ ವ್ಯಕ್ತಿ ನವಿ ಮುಂಬಯಿ ಹೋಟೆಲ್ ಉದ್ಯಮಿ ಮಾಯಾ ಬಾರನ ಮಾಲೀಕ ವಶಿಷ್ಟ ಸತ್ಯನಾರಾಯಣ ಯಾದವ್ ಎಂದು ಗುರುತು ಹಚ್ಚಿದ್ದು ಈ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸಲು ಉಡುಪಿ ಪೊಲೀಸ್ ಅಧಿಕ್ಷಕ ವಿಷ್ಣುವರ್ಧನ್ ಮಾರ್ಗದರ್ಶನದಲ್ಲಿ ತಂಡವನ್ನು ರಚಿಸಲಾಗಿತ್ತು. ಆ ತಂದದ ಮುಂಚೂಣಿಯಲ್ಲಿದ್ದ ಬ್ರಹ್ಮಾವರ ಸರ್ಕಲ್ ಇನ್ಸ್‌ಪೆಕ್ಟರ್ ಹಾಗೂ ಹಿರಿಯಡ್ಕ ಪಿಎಸ್ಐ ರವರ ತಂಡ ಕೊಲೆ ಪ್ರಕರಣದಲ್ಲಿ ಉಪಯೋಗಿಸಿದ ಕಾರು ಸಮೇತ ನಾಲ್ವರು ಆರೋಪಿಗಳನ್ನು ಉಡುಪಿಯಲ್ಲಿ ಬಂಧಿಸಿದ್ದಾರೆ.

(ಉಡುಪಿ ಎಸ್ಪಿ ವಿಷ್ಣುವರ್ಧನ)

ಕಾರ್ಯಾಚರಣೆ ತಂಡ…
ಉಡುಪಿ ಎಸ್ಪಿ ವಿಷ್ಣುವರ್ಧನ, ಹೆಚ್ಚುವರಿ ಎಸ್ಪಿ ಕುಮಾರ ಚಂದ್ರ ಮತ್ತು ಉಡುಪಿ ಡಿವೈಎಸ್ಪಿ ಟಿ. ಜೈ ಶಂಕರ್ ಮಾರ್ಗದರ್ಶದಲ್ಲಿ ಬ್ರಹ್ಮಾವರ ಸಿಪಿಐ ಅನಂತ ಪದ್ಮನಾಭ ಮತ್ತು ಹಿರಿಯಡ್ಕ ಪೊಲೀಸ್ ಠಾಣೆ ಉಪ ನಿರೀಕ್ಷಕ ಸುಧಾಕರ ತೋನ್ಸೆ, ಸಿಬ್ಬಂದಿಗಳಾದ ಎಎಸ್ಐ ಗಂಗಪ್ಪ, ಎಎಸ್ಐ ಜಯಂತ, ಸಿಬ್ಬಂದಿಗಳಾದ ಯಶವಂತ್ ,ಸದಾಶಿವ, ರಘು , ದಿನೇಶ್, ಇಂದ್ರೇಶ್, ಬಸವರಾಜ್, ನಿತೀನ್, ರಾಕೇಶ್ ಶೆಟ್ಟಿ, ಭೀಮಪ್ಪ , ಆನಂದ್ ಮೊದಲಾದವರು ಈ ಮಿಂಚಿನ ಕಾರ್ಯದಲ್ಲಿ ಇದ್ದರು.

(ವರದಿ- ಯೋಗೀಶ್ ಕುಂಭಾಸಿ)

ಇದನ್ನೂ ಓದಿರಿ-

ಉಡುಪಿಯ ಬೆಳ್ಳಂಪಳ್ಳಿಯಲ್ಲಿ ಹೊಟೇಲ್ ಉದ್ಯಮಿಯ ಕಡಿದು ಕೊಲೆ

Comments are closed.