ಕರಾವಳಿ

ಸುವರ್ಣ ತ್ರಿಭುಜ ಪ್ರಕರಣ- ಮೀನುಗಾರರ ಕುಟುಂಬಕ್ಕೆ ಗರಿಷ್ಟ ಪರಿಹಾರಕ್ಕೆ ರಕ್ಷಣಾ ಸಚಿವರಿಗೆ ಮನವಿ

Pinterest LinkedIn Tumblr

ಉಡುಪಿ: ವರ್ಷದ ಹಿಂದೆ ಮೀನುಗಾರಿಕೆಗೆಂದು ಆಳಸಮುದ್ರಕ್ಕೆ ತೆರಳಿದ್ದ ಸುವರ್ಣ ತ್ರಿಭುಜ ಬೋಟ್ ನಾಪತ್ತೆಯಾಗಿದ್ದು ಅದರಲ್ಲಿ ಇದ್ದ ಮೀನುಗಾರರ ಕುಟುಂಬಕ್ಕೆ ಹೆಚ್ಚಿನ ಮೊತ್ತದ ಪರಿಹಾರ ಒದಗಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು ಮತ್ತು ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಇವರ ನೇತೃತ್ವದಲ್ಲಿ ಉಡುಪಿ ಶಾಸಕ ಕೆ ರಘುಪತಿ ಭಟ್ ಇವರ ಮೀನುಗಾರರ ನಿಯೋಗವು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಿಗೆ ಮನವಿ ಸಲ್ಲಿಸಿತು.

ಮಂಗಳೂರಿನಲ್ಲಿ ನಡೆದ ಸಿಎಎ ಸಮರ್ಥನಾ ಸಮಾವೇಶದಲ್ಲಿ ಈ‌ ಬಗ್ಗೆ ಮನವಿ ಮಾಡಲಾಗಿದ್ದು ಈ ಸಂದರ್ಭದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಮೀನುಗಾರಿಕಾ ಫೆಡರೇಷನ್ ಇದರ ಅಧ್ಯಕ್ಷ ಯಶ್ಪಾಲ್ ಸುವರ್ಣ, ಹಾಗೂ ಮೀನುಗಾರ ಮುಖಂಡರಾದ ಸತೀಶ್ ಕುಂದರ್, ರವಿರಾಜ್ ಸುವರ್ಣ, ಹರೀಶ್ ಕುಂದರ್, ಪಾಂಡುರಂಗ ಕೋಟ್ಯಾನ್, ಗೋಪಾಲ್ ಆರ್,ಕೆ, ಹಾಗೂ ಸಂತ್ರಸ್ತ ಮೀನುಗಾರ ಕುಟುಂಬಿಕರು ಉಪಸ್ಥಿತರಿದ್ದರು. ಮನವಿಗೆ ಸ್ಪಂದಿಸಿದ ಸಚಿವರು ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು

Comments are closed.