ಕರಾವಳಿ

ಉಡುಪಿ ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷರಾಗಿ ಸುರೇಶ್ ನಾಯಕ್ ಕುಯಿಲಾಡಿ ಆಯ್ಕೆ

Pinterest LinkedIn Tumblr

ಉಡುಪಿ: ರಾಜ್ಯದ 12 ಜಿಲ್ಲೆಗಳಿಗೆ ಬಿಜೆಪಿ ಪಕ್ಷದ ನೂತನ ಜಿಲ್ಲಾಧ್ಯಕ್ಷರ ಆಯ್ಕೆ ಮಾಡಿ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರಕಟನೆ ನೀಡಿದ್ದಾರೆ. ಅದರಂತೆಯೇ ಉಡುಪಿ ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷರಾಗಿ ಕುಯಿಲಾಡಿ ಸುರೇಶ್ ನಾಯಕ್ ಆಯ್ಕೆಯಾಗಿದ್ದಾರೆ. ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದ ಕುಯಿಲಾಡಿ ಸುರೇಶ್‌ ನಾಯಕ್ ಅವರು ಸದ್ಯ ಕಮಲಪಕ್ಷದ ಜಿಲ್ಲಾ ಸಾರಥಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ಜನವರಿ ಎರಡನೇ ವಾರದಲ್ಲಿ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗೆ ಬಿಜೆಪಿ ಅಧ್ಯಕ್ಷರ ಆಯ್ಕೆ ನಡೆದಿದ್ದರೂ ಉಡುಪಿ ಜಿಲ್ಲಾಧ್ಯಕ್ಷ ಸ್ಥಾನ ಘೋಷಣೆಯಾಗಿರಲಿಲ್ಲ. ಜಿಲ್ಲೆಯಲ್ಲಿ ಆಕಾಂಕ್ಷಿಗಳ ಒಂದಷ್ಟು ಹೆಸರನ್ನು ಕೋರ್‌ ಕಮಿಟಿ ಶಿಫಾರಸು ಮಾಡಿ ರಾಜ್ಯ ಸಮಿತಿಗೆ ಕಳುಹಿಸಿತ್ತು ಎನ್ನಲಾಗಿದೆ. ಆ ಪಟ್ಟಿಯಲ್ಲಿ ಕುಯಿಲಾಡಿ ಸುರೇಶ ನಾಯಕ್‌, ಕುತ್ಯಾರು ನವೀನ್‌ ಶೆಟ್ಟಿ, ಹೆರ್ಗ ದಿನಕರ ಶೆಟ್ಟಿ, ಬೈಕಾಡಿ ಸುಪ್ರಸಾದ ಶೆಟ್ಟಿ ಶೆಟ್ಟಿ ಮೊದಲಾದವರ ಹೆಸರು ಇತ್ತು ಎಂಬುದನ್ನು ಪಕ್ಷ ಮೂಲಗಳು ತಿಳಿಸಿದೆ.

Comments are closed.