ಉಡುಪಿ: ಸಾವಿರಾರು ಜನರು ಸೇರಿದ್ದ ಮಕರ ಸಂಕ್ರಮಣ ಜಾತ್ರೆಯಲ್ಲಿ ಒಂದಷ್ಟು ಮುಸ್ಲೀಂ ಬಂಧುಗಳು ಕಾಣಿಸಿಕೊಂಡರು. ಪೇಜಾವರ ಮಠ ಮುಂಭಾಗದಲ್ಲಿ ಗುಂಪು ಸೇರಿದರು. ಜನರ ಗುಸು ಗುಸು ಆರಂಭವಾಯ್ತು. ಪೇಜಾವರ ಮಠದ ಅಧಿಕಾರಿಗಳು ಬಂದು ವಿಚಾರಿಸಿದರು. ಇವರೆಲ್ಲಾ ಭಟ್ಕಳದಿಂದ ಬಂದ ಮುಸ್ಲಿಂ ಸಮುದಾಯದ ಪ್ರಮುಖರಾಗಿದ್ದರು.

ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿಗಳ ಬಗ್ಗೆ ಅಪಾರ ಪ್ರೇಮ ಹೊಂದಿದ್ದ ಇವರುಗಳು ಅಗಲಿಕೆಯಿಂದ ದುಖಿತರಾಗಿದ್ದ ಇವರು ಭಟ್ಕಳದಿಂದ ಪೇಜಾವರ ಮಠದಲ್ಲಿ ಶೃದ್ದಾಂಜಲಿ ಸಲ್ಲಿಸಲೆಂದೇ ಬಂದಿದ್ದರು.
ವಿಷಯ ತಿಳಿದ ಮಠದ ಅಧಿಕಾರಿಗಳು ಒಳಗೆ ಆಹ್ವಾನಿಸಿ, ವಿಚಾರ ವಿನಿಮಯ ಮಾಡಿದರು. ಬಂದವರು ಸ್ವಾಮಿಗಳ ಸ್ಮರಣೆ ಮಾಡಿದರು. ಭಟ್ಕಳಕ್ಕೆ ಬಂದಾಗಿನ ಸ್ವಾಮೀಜಿಯ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಸ್ವಾಮಿಗಳ ಭಾವಚಿತ್ರಕ್ಕೆ ಭಕ್ತಿಯಿಂದ ಕೈ ಮುಗಿದು ಶೃದ್ದೆ ಪ್ರಕಟಿಸಿದರು.
Comments are closed.