ಕರಾವಳಿ

ಸುರತ್ಕಲ್ ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬ್ರಹ್ಮಕಲಶ : ಫೆ.2ರಂದು ಹೊರೆಕಾಣಿಕೆ

Pinterest LinkedIn Tumblr

ಸುರತ್ಕಲ್: ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಅಷ್ಟಬಂಧ ಬ್ರಹ್ಮಕಲಶೋತ್ಸವ, ಅಷ್ಟಪವಿತ್ರ ನಾಗಮಂಡಲೋತ್ಸವ , ಧರ್ಮ ನೇಮ ಪ್ರಯುಕ್ತ ಫೆ.2ರಂದು ಸಂಜೆ ಬೃಹತ್ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ.

ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಮಹಾಬಲ ಪೂಜಾರಿ ಕಡಂಬೋಡಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಯಿತು.

ಆಸುಪಾಸಿನ ಭಕ್ತರಿಂದ ಕ್ಷೇತ್ರಕ್ಕೆ ಹೊರೆಕಾಣಿಕೆ ತರಲು ಉಪಸಮಿತಿ ರಚಿಸಲು ನಿರ್ಧರಿಸಲಾಯಿತು. ಹೊರೆಕಾಣಿಕೆ ಸಮಿತಿ ಪ್ರಧಾನ ಸಂಚಾಲಕ ಸುಧಾಕರ್ ಎಸ್. ಪೂಂಜಾ ಆಸುಪಾಸಿನ ಭಕ್ತರ ಸಹಕಾರ ಕೋರಿದರು.

ಕಾರ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಾಧ್ಯಕ್ಷ ಟಿ.ಎನ್. ರಮೇಶ್ , ಸಂತೋಷ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಐ. ಉದಯ ಶಂಕರ್ ಭಟ್, ಸಂಚಾಲಕ ನಾಗರಾಜ ಕಡಂಬೋಡಿ, ಸಮಿತಿ ಸಂಚಾಲಕ ಅಣ್ಣಪ್ಪ ದೇವಾಡಿಗ, ಪ್ರಧಾನ ಕಾರ್ಯದರ್ಶಿ ಕೃಷ್ಣಕುಮಾರ್ ಇಡ್ಯಾ, ಗೌರವಾಧ್ಯಕ್ಷ ಡಾ. ಮಂಜಯ್ಯ ಶೆಟ್ಟಿ ಕಡಂಬೋಡಿ, ದೊಂಬಯ್ಯ ಪೂಜಾರಿ ಇಡ್ಯಾ, ಸಮಿತಿ ಕಾರ್ಯದರ್ಶಿ ಹರೀಶ್ ಬಂಗೇರ ಕಡಂಬೋಡಿ, ಹೊರೆಕಾಣಿಕೆ ಸಮಿತಿಯ ಕೈಲಾಸ್ ತಡಂಬೈಲ್, ಸುರೇಂದ್ರ ಆಚಾರ್ಯ, ಗಣೇಶ್ ಆಚಾರ್ಯ, ಗುಣಶೇಖರ್ ಶೆಟ್ಟಿ, ವಿಜಯ ಎಚ್ ಎಸ್., ಬೇಬಿ ಎನ್ ಶೆಟ್ಟಿ, ಸಂಜೀವ ಅಮೀನ್, ಈಶ್ವರ ಕಚೇರಿಸಾನ, ಸತೀಶ್ ಮುಂಚೂರು, ಜಗನ್ನಾಥ ಶೆಟ್ಟಿ ಬಾಳ, ಗಿರಿಯಪ್ಪ ಇಡ್ಯಾ, ಮಾಧವ ಶೆಟ್ಟಿ, ಲೀಲಾಧರ್ ಶೆಟ್ಟಿ ಕಟ್ಲ, ರಾಘವೇಂದ್ರ ಶೆಟ್ಟಿ, ಪುಷ್ಪರಾಜ್ ಶೆಟ್ಟಿ ಕುಡುಂಬೂರು, ದೇವಿದಾಸ್ ಶೆಟ್ಟಿ, ಯಶವಂತ್ ಶೆಟ್ಟಿ, ಕಿರಣ್ ಪ್ರಸಾದ್ ರೈ, ಬೇಬಿ ಶೆಟ್ಟಿ, ಚಿತ್ರಾಜೆ ಶೆಟ್ಟಿ , ಸುಜಾತ ಶೆಟ್ಟಿ ಹೊಸಬೆಟ್ಟು, ಅಶೋಕ ರೈ, ಜಯಂತಿ ಟಿ. ರೈ, ರಾಘವೇಂದ್ರ ಎಚ್. ಯು. , ಯಶ್‌ಪಾಲ್ ಶೆಟ್ಟಿ ತಡಂಬೈಲ್, ಜಯಂತ್ ಬಂಗೇರ, ಗಂಗಾಧರ್ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.

Comments are closed.