ಅಂತರಾಷ್ಟ್ರೀಯ

ಅಕ್ರಮ ವಲಸಿಗರು ಯಾರೆಂದು ಪಟ್ಟಿ ಕೊಡಿ: ಬಾಂಗ್ಲಾದಿಂದ ಮನವಿ

Pinterest LinkedIn Tumblr


ಢಾಕಾ: ಭಾರತವು ದೇಶಾದ್ಯಂತ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಜಾರಿಗೆ ಸಿದ್ಧತೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಅಕ್ರಮ ಬಾಂಗ್ಲಾವಲಸಿಗರ ಪಟ್ಟಿ ನೀಡುವಂತೆ ಮನವಿ ಮಾಡಿದ್ದೇವೆ ಎಂದು ಬಾಂಗ್ಲಾದೇಶ ವಿದೇಶಾಂಗ ಸಚಿವ ಎ.ಕೆ. ಅಬ್ದುಲ್‌ ಮೊಮೆನ್‌ ಹೇಳಿದ್ದಾರೆ.

ಒಂದು ವೇಳೆ ಭಾರತ ಅಂಥ ಪಟ್ಟಿ ನೀಡಿದಲ್ಲಿ ಬಾಂಗ್ಲಾಪ್ರಜೆಗಳು ತಮ್ಮ ದೇಶಕ್ಕೆ ಹಿಂದಿರುಗಲು ವ್ಯವಸ್ಥೆ ಮಾಡುತ್ತೇವೆ ಎಂದು ಕೂಡ ಮೊಮೆನ್‌ ಸುದ್ದಿಗಾರರಿಗೆ ತಿಳಿಸಿದರು. ಬಾಂಗ್ಲಾದೇಶಕ್ಕೆ ಅಕ್ರಮವಾಗಿ ಭಾರತೀಯರ ಪ್ರವೇಶದ ಬಗ್ಗೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ನಮ್ಮ ಪ್ರಜೆಗಳ ಹೊರತಾಗಿ ಯಾರೇ ಅಕ್ರಮವಾಗಿ ನಮ್ಮ ನೆಲದಲ್ಲಿ ಸಿಕ್ಕರೆ ಅವರನ್ನು ಅವರ ದೇಶಕ್ಕೆ ಕಳಿಸುತ್ತೇವೆ ಎಂದು ತಿಳಿಸಿದರು. ಎನ್‌ಆರ್‌ಸಿ ಭಾರತ ಸರಕಾರ ಆಂತರಿಕ ಪ್ರಕ್ರಿಯೆ ಎಂದು ನಮ್ಮ ನಿಲುವನ್ನು ಈಗಾಗಲೇ ಸ್ಪಷ್ಟಪಡಿಸಿದ್ದೇವೆ. ಇದರಿಂದ ಭಾರತ-ಬಾಂಗ್ಲಾದೇಶದ ನಡುವಿನ ಸಂಬಂಧದ ಮೇಲೆ ಪರಿಣಾಮ ಆಗಲ್ಲಎಂದು ಹೇಳಿದರು.

ಭಾರತ ಭೇಟಿ ರದ್ದತಿಗೆ ಸ್ಪಷ್ಟನೆ: ”ಪೌರತ್ವ ತಿದ್ದುಪಡಿ ಮಸೂದೆ ಕುರಿತು ಸಂಸತ್ತಿನಲ್ಲಿ ಭಾರಿ ಗದ್ದಲ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಪ್ರತಿಭಟನೆ ತೀವ್ರಗೊಂಡಿದ್ದರಿಂದ ತಾವು ಭಾರತ ಭೇಟಿಯನ್ನು ರದ್ದುಗೊಳಿಸಲಿಲ್ಲ. ಬದಲಿಗೆ ಭಾರತ ಭೇಟಿ ದಿನದಂದೇ ಬಾಂಗ್ಲಾ ದೇಶದಲ್ಲಿ ಹುತಾತ್ಮರ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ಹೀಗಾಗಿ ಅನಿವಾರ್ಯವಾಗಿ ಭೇಟಿ ರದ್ದುಗೊಳಿಸಬೇಕಾಯಿತು,” ಎಂದರು.

Comments are closed.