
ಲುಧಿಯಾನ: ಪಂಜಾಬ್‌ನಲ್ಲಿ ಹೆಣ್ಣು ಸಂತತಿ ರಾಸುಗಳು ಮಾತ್ರ ಸೃಷ್ಟಿಸುವಂತೆ ಪ್ರಪ್ರಥಮ ಬಾರಿಗೆ ‘ವೀರ್ಯಾಣು ವಂಶಾಭಿವೃದ್ಧಿ’ ಘಟಕ ಸ್ಥಾಪಿಸಲಾಗುತ್ತಿದೆ. ಕೃಷಿ ಪ್ರಧಾನವಾಗಿರುವ ಪಂಜಾಬ್‌ನಲ್ಲಿ ರೈತರಿಗೆ ಹೊರೆ ತಪ್ಪಿಸಲು ನಭಾದಲ್ಲಿ ರಾಷ್ಟ್ರೀಯ ಗೋಕುಲ ಮಿಷನ್‌ನಡಿ ಅಮೆರಿಕ ತಂತ್ರಜ್ಞಾನದೊಂದಿಗೆ 47 ಲಕ್ಷ ರೂ. ವೆಚ್ಚದಲ್ಲಿ ಘಟಕ ತೆರೆಯಲಾಗುತ್ತಿದೆ.
ಉತ್ಕೃಷ್ಟ ತಳಿಗಳ ಗುಣಮಟ್ಟದ ವೀರ್ಯಾಣುಗಳನ್ನು ಸೃಷ್ಟಿಸಿ, ಇದನ್ನು ಕೊಳವೆ ಪೈಪ್‌ಗಳಲ್ಲಿ (ಸ್ಟ್ರೇ) ತುಂಬಿ ರೈತರಿಗೆ ವಿತರಿಸಲು ಉದ್ದೇಶಿಸಲಾಗಿದೆ. ಈ ಘಟಕದಿಂದ ವರ್ಷಕ್ಕೆ ಕನಿಷ್ಠ 2 ಲಕ್ಷ ವೀರ್ಯಾಣು ಸ್ಟ್ರೇ ತಯಾರಿಸಲಾಗುವುದು. ಒಂದು ಸ್ಟ್ರೇಗೆ ಕನಿಷ್ಠ 750 ರೂ. ಖರ್ಚಾಗಲಿದೆ. ಆದರೆ, ರೈತರಿಗೆ ಎಷ್ಟು ದರದಲ್ಲಿ ವಿತರಿಸಲಾಗುವುದು ಎಂಬುದನ್ನು ಇನ್ನೂ ನಿರ್ಧರಿಸಿಲ್ಲ.
Comments are closed.