ರಾಷ್ಟ್ರೀಯ

ತೆಲಂಗಾಣ ಎನ್ ಕೌಂಟರ್; ಡಿ. 13ರವರೆಗೂ ಆರೋಪಿಗಳ ಶವ ರಕ್ಷಿಸಿಡಿ

Pinterest LinkedIn Tumblr


ತೆಲಂಗಾಣ/ಹೈದರಾಬಾದ್: ತೆಲಂಗಾಣ ದಿಶಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಪೊಲೀಸ್ ಎನ್ ಕೌಂಟರ್ ಗೆ ಬಲಿಯಾಗಿದ್ದ ನಾಲ್ವರು ಆರೋಪಿಗಳ ಶವಗಳನ್ನು ಡಿಸೆಂಬರ್ 13ರವರೆಗೂ ರಕ್ಷಿಸಿ ಇಡುವಂತೆ ತೆಲಂಗಾಣ ಹೈಕೋರ್ಟ್ ಸೋಮವಾರ ಆದೇಶ ನೀಡಿದ್ದು, ಪ್ರಕರಣದ ವಿಚಾರಣೆಯನ್ನು ಡಿಸೆಂಬರ್ 12ಕ್ಕೆ ಮುಂದೂಡಿದೆ.

ದಿಶಾ ಅತ್ಯಾಚಾರ, ಕೊಲೆ ನಡೆದ ಸ್ಥಳದ ಮಹಜರು ನಡೆಸಲು ನಾಲ್ವರು ಆರೋಪಿಗಳನ್ನು ಕಳೆದ ಶುಕ್ರವಾರ ಮುಂಜಾನೆ ಸೈಬರಾಬಾದ್ ಪೊಲೀಸರು ಕರೆದೊಯ್ದಿದ್ದ ವೇಳೆ ಪರಾರಿಯಾಗಲು ಯತ್ನಿಸಿದ್ದ ವೇಳೆ ಪೊಲೀಸರ ಎನ್ ಕೌಂಟರ್ ಗೆ ಬಲಿಯಾಗಿದ್ದರು. ಆರೋಪಿಗಳು ತಮ್ಮ ರಿವಾಲ್ವರ್ ಅನ್ನು ಕಸಿದುಕೊಂಡು, ಗುಂಡಿನ ದಾಳಿ ನಡೆಸಿರುವುದಾಗಿ ಪೊಲೀಸರು ಆರೋಪಿಸಿದ್ದರು. ತಮ್ಮ ಪ್ರಾಣರಕ್ಷಣೆಗಾಗಿ ನಡೆಸಿದ ಪ್ರತಿದಾಳಿಗೆ ನಾಲ್ವರು ಬಲಿಯಾಗಿದ್ದರೆಂದು ಪೊಲೀಸ್ ವರಿಷ್ಠಾಧಿಕಾರಿ ಸಜ್ಜನರ್ ತಿಳಿಸಿದ್ದರು.

ದಿಶಾ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಕಳೆದ ವಾರ ಪೊಲೀಸರು ಎನ್ ಕೌಂಟರ್ ನಲ್ಲಿ ನಾಲ್ವರು ಆರೋಪಿಗಳನ್ನು ಹತ್ಯೆಗೈದ ಪ್ರಕರಣದ ತನಿಖೆ ನಡೆಸಲು ತೆಲಂಗಾಣ ಸರ್ಕಾರ ವಿಶೇಷ ತನಿಖಾ ತಂಡ(ಎಸ್ ಐಟಿ)ವನ್ನು ರಚಿಸಿದ್ದು, ಈ ಬಗ್ಗೆ ಭಾನುವಾರ ಆದೇಶ ಹೊರಡಿಸಿದೆ.

ನಾಲ್ವರು ಆರೋಪಿಗಳನ್ನು ಹತ್ಯೆಗೈಯಲು ಕಾರಣ ಮತ್ತು ಸನ್ನಿವೇಶದ ಬಗ್ಗೆ ದೃಢಪಡಿಸಬೇಕು. ಅಲ್ಲದೇ ಸತ್ಯವನ್ನು ಬಹಿರಂಗಗೊಳಸಲು ತನಿಖೆಗೆ ಬೇಕಾದ ಕಾರಣದ ಬಗ್ಗೆ ತಿಳಿಯಲು ಎಸ್ ಐಟಿಯನ್ನು ರಚಿಸಲಾಗಿದೆ ಎಂದು ಆದೇಶದಲ್ಲಿ ವಿವರಿಸಲಾಗಿತ್ತು.

ರಾಚಕೊಂಡಾ ಪೊಲೀಸ್ ಕಮಿಷನರ್ ಮಹೇಶ್ ಎಂ ಭಾಗ್ವತ್ ನೇತೃತ್ವದ ಎಂಟು ಮಂದಿ ಸದಸ್ಯರನ್ನೊಳಗೊಂಡ ಎಸ್ಐಟಿಯನ್ನು ರಚಿಸಲಾಗಿದೆ. ಅಲ್ಲದೇ ಸುಪ್ರೀಂಕೋರ್ಟ್ ನಿಯಮಾನುಸಾರ ಪ್ರಕರಣಕ್ಕೆ ಸಂಬಂಧಸಿದಂತೆ ತನಿಖೆ ನಡೆಸಬೇಕು ಎಂದು ತಿಳಿಸಿದೆ.

ಎಸ್ ಐಟಿ ತನಿಖೆಯನ್ನು ಪೂರ್ಣಗೊಳಿಸಿ, ವರದಿಯನ್ನು ಸಂಬಂಧಿದ ಕೋರ್ಟ್ ಗೆ ಸಲ್ಲಿಸಬೇಕು. ಹೈದರಾಬಾದ್ ಎನ್ ಕೌಂಟರ್ ಪ್ರಶ್ನಿಸಿ ಸುಪ್ರೀಂಕೋರ್ಟ್ ನಲ್ಲಿ ಈಗಾಗಲೇ ದೂರು ದಾಖಲಾಗಿದೆ.

Comments are closed.