ಕರ್ನಾಟಕ

ತುರ್ತು ಸಂಖ್ಯೆ 100ಕ್ಕೆ ಕರೆ ಮಾಡಿದ 9 ನಿಮಿಷದಲ್ಲಿ ಹೊಯ್ಸಳ ವಾಹನ ಸ್ಥಳಕ್ಕೆ ಹಾಜರು

Pinterest LinkedIn Tumblr

ಬೆಂಗಳೂರು : ನಗರದ ಅಪರಾಧ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಹೊಸ ಹೊಸ ಕ್ರಮ ಕೈಗೊಳ್ಳುತ್ತಿರುವ ಬೆಂಗಳೂರು ಪೊಲೀಸ್ ಆಯುಕ್ತರು, ಇದೀಗ ಮತ್ತೊಂದು ಹೊಸ ಹೆಜ್ಜೆಯನ್ನು ಇರಿಸಿದ್ದಾರೆ. ಅದೇ ಇನ್ಮುಂದೆ ನಗರದ ಸಾರ್ವಜನಿಕರು ಘಟನೆಯೊಂದರ ಸಂದರ್ಭದಲ್ಲಿ ತುರ್ತು ಸಂಖ್ಯೆ 100ಕ್ಕೆ ಕರೆ ಮಾಡಿದ 9 ನಿಮಿಷದಲ್ಲಿ ಹೊಯ್ಸಳ ವಾಹನ ಬರಲಿದೆ. ಬೇಕಾದ್ರೇ ಚೆಕ್ ಮಾಡಿ ಎಂಬುದಾಗಿ ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದ್ದಾರೆ.

ಈ ಕುರಿತಂತೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ತೆಲಂಗಾಣದ ಪಶುವೈದ್ಯೆ ಮೇಲೆ ನಡೆದಿರುವ ಅತ್ಯಾಚಾರ ಘಟನೆ ದೇಶವನ್ನೇ ಬೆಚ್ಚಿ ಬೀಳಿಸಿದ್ದು, ಈ ರೀತಿಯ ಘಟನೆ ಬೆಂಗಳೂರನಲ್ಲಿ ನಡೆಯುವ ಆಂತಕವಿಲ್ಲ ಎಂದು ಅವರು ಭರವಸೆ ನೀಡಿದ್ದಾರೆ.

ಇನ್ನೂ ಮುಂದುವರೆದು ಮಾತನಾಡಿ ಅವರು, ಬೆಂಗಳೂರಿನಲ್ಲಿ ಇನ್ಮುಂದೆ ಯಾವುದೇ ಘಟನೆ ನಡೆದಂತ ಸಂದರ್ಭದಲ್ಲಿ ತುರ್ತು ಸಂಖ್ಯೆ 100ಕ್ಕೆ ಸಾರ್ವಜನಿಕರು ಕರೆ ಮಾಡಿದ್ರೇ, ಒಂಭತ್ತೇ ನಿಮಿಷದ ಒಳಗಾಗಿ ಹೊಯ್ಸಳ ವಾಹನ ಸ್ಥಳಕ್ಕೆ ಆಗಮಿಸಲಿದೆ. ಬೇಕಾದರೇ ಸಾರ್ವಜನಿಕರು ಕರೆ ಮಾಡಿ ಪರೀಕ್ಷೆ ಸಹ ಮಾಡಬಹುದು ಎಂದು ತಿಳಿಸಿದರು.

Comments are closed.