ಚೆನ್ನೈ: ದಕ್ಷಿಣ ಭಾರತದಲ್ಲಿ ಒಂದು ಕಾಲದಲ್ಲಿ ಪಡ್ಡೆಗಳ ನಿದ್ದೆಗೆಡೆಸಿದ್ದ ಗ್ಲಾಮರ್ ಬೊಂಬೆ ನಮಿತಾ ಅವರು ಭಾರತೀಯ ಜನತಾ ಪಕ್ಷ(ಬಿಜೆಪಿ)ವನ್ನು ಅಧಿಕೃತವಾಗಿ ಸೇರಿಕೊಂಡಿದ್ದಾರೆ.
ಬಿಜೆಪಿ ಕಾರ್ಯಾಧ್ಯಕ್ಷ ಜೆಪಿ ನಡ್ಡಾ ಅವರ ಸಮ್ಮುಖದಲ್ಲಿ ನಮಿತಾ ಅವರು ಪಕ್ಷಕ್ಕೆ ಸೇರ್ಪಡೆಗೊಂಡರು. ಅವರಿಗೆ ಬಿಜೆಪಿ ಬಾವುಟ ನೀಡಿ, ಪಕ್ಷದ ಪ್ರಾಥಮಿಕ ಸದಸ್ಯತ್ವ ನೀಡಲಾಯಿತು. ಇದಕ್ಕೂ ಮುನ್ನ ಹಿರಿಯ ನಟ ರಾಧಾರವಿ ಕೂಡಾ ಬಿಜೆಪಿ ಸೇರಿಕೊಂಡಿದ್ದಾರೆ. ಜೆಪಿ ನಡ್ಡಾ ಅವರು ಸದ್ಯ ಚೆನ್ನೈ ಪ್ರವಾಸದಲ್ಲಿದ್ದು, ತಮಿಳುನಾಡಿನಲ್ಲಿ ಬಿಜೆಪಿ ಬೆಳವಣಿಗೆಗೆ ಬೇಕಾದ ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ.
ನಮಿತಾ ಅವರು ರಾಜಕೀಯ ಸೇರುವ ಸುದ್ದಿ ಎರಡು ಮೂರು ವರ್ಷಗಳಿಂದ ಗಿರಕಿ ಹೊಡೆಯುತ್ತಲೇ ಇತ್ತು. ಕೈಲಿ ಸಿನಿಮಾ ಇಲ್ಲ, ರಾಜಕೀಯಕ್ಕೆ ಸೇರದೆ ಏನು ಮಾಡುತ್ತಾರೆ ಬಿಡಿ ಎಂದು ಎಲ್ಲರೂ ಹೇಳುತ್ತಿದ್ದರು. ಆದರೆ, ಸೂಕ್ತ ಕಾಲಕ್ಕೆ ಕಾಯುತ್ತಿದ್ದ ನಮಿತಾ ಅವರಿಗೆ ‘ಅಮ್ಮ’ ಪಕ್ಷದಿಂದ ರೆಡ್ ಕಾರ್ಪೆಟ್ ಸ್ವಾಗತ ಸಿಕ್ಕಿತ್ತು. ತಮಿಳುನಾಡು ವಿಧಾನಸಭೆ ಚುನಾವಣೆ 2016ರಲ್ಲಿ ಸ್ಟಾರ್ ಪ್ರಚಾರಕಿಯಾಗಿ ಸೀರೆಯುಟ್ಟು ಪ್ರಚಾರಕ್ಕಿಳಿದಿದ್ದರು.
ಹೌದು, ನಮಿತಾ ಅಧಿಕೃತವಾಗಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಆಡಳಿತಾರೂಢ ಎಐಎಡಿಎಂಕೆ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಖುದ್ದು ಮುಖ್ಯಮಂತ್ರಿ ಜಯಲಲಿತಾ ಅವರು ನಮಿತಾ ಅವರನ್ನು ರಾಜಕೀಯವೆಂಬ ಹೊಸ ಗ್ಲಾಮರ್ ಲೋಕಕ್ಕೆ ಬರಮಾಡಿಕೊಂಡಿದ್ದರು.
ಹಿಂದೊಮ್ಮೆ ಸಿನಿಮಾ ಶೂಟಿಂಗ್ ಬೋರ್ ಎನಿಸಿ ತನ್ನ ಆಪ್ತ ಸಹಾಯಕಿ ಜೊತೆಗೂಡಿ ತಮಿಳುನಾಡಿನ ಹಳ್ಳಿಗಳಲ್ಲಿ ಸುತ್ತಾಡುತ್ತಿದ್ದ ಸಂದರ್ಭದಲ್ಲಿ ಸ್ಥೂಲ ಸುಂದರಿ ನಮಿತಾಳಿಗೆ ಎಲ್ಲೆಡೆ ‘ಅಮ್ಮ’ನ ದರ್ಶನವಾಗಿದೆ. ಭಕ್ತಿ ಭಾವದಿಂದ ಅಮ್ಮನ ಬಗ್ಗೆ ಕೇಳಿ ತಿಳಿದುಕೊಂಡ ನಮಿತಾ ಮನದಲ್ಲಿ ರಾಜಕೀಯದಲ್ಲಿ ಬೆಳೆ ಬಿತ್ತುವ ಬಗ್ಗೆ ಆಸಕ್ತಿ ಬೆಳೆದಿದೆ. ಜಯಲಲಿತಾ ಅವರ ಕಾರ್ಯ ವೈಖರಿ ಬಗ್ಗೆ ನಾನು ಇಂಪ್ರೆಸ್ ಅಗಿದ್ದೇನೆ,

Comments are closed.