ಕರ್ನಾಟಕ

ಸಬ್ಸಿಡಿ ರಹಿತ,ಸಹಿತ ಎಲ್ ಪಿಜಿಯ ನೂತನ ದರ ಇಂದಿನಿಂದ ಜಾರಿಗೆ

Pinterest LinkedIn Tumblr

ಸಬ್ಸಿಡಿ ರಹಿತ ಹಾಗೂ ಸಹಿತ ಅಡುಗೆ ಅನಿಲ (ಎಲ್ ಪಿಜಿ) ದರಗಳಲ್ಲಿ ಹೆಚ್ಚಳವಾಗಿದೆ. ನೂತನ ದರಗಳು ಇಂದಿನಿಂದಲೇ ಜಾರಿಗೆ ಬರಲಿವೆ. ಡಿಸೆಂಬರ್‌ ತಿಂಗಳಿನಲ್ಲಿ ಅನ್ವಯವಾಗುವಂತೆ ಮೆಟ್ರೋ ನಗರದಲ್ಲಿ ಇಂಡೇನ್‌ನ ಸಬ್ಸಿಡಿ ರಹಿತ ಬೆಲೆಗಳು (ರೂ. / 14.2 ಕೆಜಿ ಸಿಲಿಂಡರ್)
ದೆಹಲಿ 695.00ರೂ (681.50ರೂ ನವೆಂಬರ್‌ ತಿಂಗಳಿನಲ್ಲಿ )
ಕೋಲ್ಕತಾ 725.50ರೂ (706.00 ರೂನವೆಂಬರ್‌ ತಿಂಗಳಿನಲ್ಲಿ )
ಮುಂಬೈ 665.00ರೂ (651.00ರೂ ನವೆಂಬರ್‌ ತಿಂಗಳಿನಲ್ಲಿ
ಚೆನ್ನೈ 714.00ರೂ (696.00ರೂ ನವೆಂಬರ್‌ ತಿಂಗಳಿನಲ್ಲಿ)

ಮೆಟ್ರೋ ನಗರದಲ್ಲಿ (ರೂ .19 ಕೆಜಿ ಸಿಲಿಂಡರ್) ಬೆಲೆ
ದೆಹಲಿ 1211.50ರೂ (1204.00ರೂ ನವೆಂಬರ್‌ ತಿಂಗಳಿನಲ್ಲಿ )
ಕೋಲ್ಕತಾ 1275.50ರೂ (1258.0ರೂ0 ನವೆಂಬರ್‌ ತಿಂಗಳಿನಲ್ಲಿ )
ಮುಂಬೈ 1160.50ರೂ (1151.50ರೂ ನವೆಂಬರ್‌ ತಿಂಗಳಿನಲ್ಲಿ )
ಚೆನ್ನೈ 1333.00ರೂ (1319.00ರೂ ನವೆಂಬರ್‌ ತಿಂಗಳಿನಲ್ಲಿ )

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಿಲ ದರಗಳು ಗಣನೀಯವಾಗಿ ಹೆಚ್ಚಳ ಈ ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ (ಐಒಸಿ), ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಅನಿಲ ದರಗಳು ಅಗ್ಗವಾಗಿರುವುದರಿಂದ ಬೆಲೆ ಹೆಚ್ಚಳ ಮಾಡಲಾಗಿದೆ ಎನ್ನಲಾಗಿದೆ. ಪ್ರತಿ ತಿಂಗಳ ಮೊದಲ ದಿನ ಅಡುಗೆ ಅನಿಲ ಸಿಲೆಂಡರ್‌ ಬೆಲೆಯನ್ನು ಹೊಸದಾಗಿ ನಿಗದಿ ಮಾಡಲಾಗುತ್ತದೆ.

Comments are closed.