ಮುಂಬೈ: ದೇಶದ ಮಕ್ಕಳಿಗೆ ಮೂಲಭೂತ ಶಿಕ್ಷಣ ನೀಡುವತ್ತ ನಾವು ಗಮನಹರಿಸುತ್ತಿದ್ದರೆ, ಮಹಾರಾಷ್ಟ್ರ ಮೂಲದ ಶಾಲೆಯೊಂದು ವೃದ್ಧ ಮಹಿಳೆಯರಿಗೆ ಶಿಕ್ಷಣ ಮತ್ತು ಸಬಲೀಕರಣ ನೀಡುವತ್ತ ಹೆಜ್ಜೆ ಇಟ್ಟಿದೆ.
ಕೈಯಲ್ಲಿ ನೋಟ್ಬುಕ್ ಮತ್ತು ಸ್ಲೇಟ್ ಬೋರ್ಡ್ ಹಿಡಿದ ಈ ಹಳ್ಳಿಯ ವೃದ್ಧ ಮಹಿಳೆಯರು ಎಲ್ಲರಿಗೂ ಮಾದರಿಯಾಗಿದ್ದಾರೆ.
ಈ ಶಾಲೆಯ ಹೆಸರು ಆಜಿಬೈಚಿ. ವೃದ್ಧ ಮಹಿಳೆಯರು ಕಲಿಯುವ ದೇಶದ ಏಕೈಕ ಶಾಲೆ. 2016ರಲ್ಲಿ ಅಂತಾರಾಷ್ಟೀಯ ಮಹಿಳಾ ದಿನದಂದು ಥಾಣೆ ಜಿಲ್ಲೆಯ ಫಂಗಾನೆ ಗ್ರಾಮದಲ್ಲಿ ಸ್ಥಾಪನೆಗೊಂಡ ಈ ಶಾಲೆಯಲ್ಲಿ 35 ವಿದ್ಯಾರ್ಥಿಗಳಿದ್ದು, ಪ್ರತಿ ದಿನ ಮಧ್ಯಾಹ್ನ 2ರಿಂದ ಸಾಯಂಕಾಲ 4ರವರೆಗೆ ಕೇವಲ 2 ಗಂಟೆ ಶಾಲೆ ತೆರೆದಿರುತ್ತದೆ. 60 ರಿಂದ 90 ವರ್ಷದವರೆಗಿನ ವೃದ್ಧೆಯರು ಸಮವಸ್ತ್ರ ಸೀರೆ ಧರಿಸಿ, ಬ್ಯಾಗ್ನೊಂದಿಗೆ ಪ್ರತಿ ದಿನ ಶಾಲೆಗೆ ಹೋಗುವುದನ್ನು ಕಾಣಬಹುದು.

Comments are closed.