ರಾಷ್ಟ್ರೀಯ

ಹೊಡೆದ 55 ವರ್ಷದ ಮಾಲಕಿಯ ಮೇಲೆ 24ರ ಯುವಕನಿಂದ ಅತ್ಯಾಚಾರ ಎಸಗಿ ಕೊಲೆ

Pinterest LinkedIn Tumblr


ನವದೆಹಲಿ: 55 ವರ್ಷದ ಮಹಿಳೆಯ ಮೇಲೆ 24ರ ಯುವಕನೊಬ್ಬ ಅತ್ಯಾಚಾರ ಎಸಗಿ, ಕೊಲೆಗೈದ ಅಮಾನವೀಯ ಘಟನೆ ಉತ್ತರ ದೆಹಲಿಯಲ್ಲಿ ನಡೆದಿದೆ.

ದೆಹಲಿಯ ನಿವಾಸಿ ಧರಮ್‍ರಾಜ್ ಅತ್ಯಾಚಾರ ಎಸಗಿ, ಕೊಲೆಗೈದ ಆರೋಪಿ. ಕೊಲೆಯಾದ ಮಹಿಳೆಯು ಗುಲಾಬಿ ಬಾಗ್ ನಿವಾಸಿಯಾಗಿದ್ದು, ಮನೆಯಲ್ಲಿ ಟೀ ಅಂಗಡಿ ನಡೆಸುತ್ತಿದ್ದಳು. ಶುಕ್ರವಾರ ರಾತ್ರಿ ಘಟನೆ ನಡೆದಿದ್ದು, ಆರೋಪಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಮಹಿಳೆಯು ಗುಲಾಬಿ ನಗರದಲ್ಲಿ ಟೀ ಅಂಗಡಿ ನಡೆಸುತ್ತಿದ್ದಳು. ಆದರೆ ಶುಕ್ರವಾರ ಅಂಗಡಿಯ ಬಾಗಿಲು ತರೆದಿರಲಿಲ್ಲ. ಹೀಗಾಗಿ ನಿತ್ಯವೂ ಟೀ ಕುಡಿಯಲು ಬರುತ್ತಿದ್ದ ಕೆಲ ಗ್ರಾಹಕರು ಅಂಗಡಿ ಬಾಗಿಲು ಬಡಿದಾಗ ಯಾರು ಕಾಣಲಿಲ್ಲ. ಸ್ವಲ್ಪ ಬಾಗಿಲು ದೂಡುತ್ತಿದ್ದಂತೆ ಮಹಿಳೆಯ ಶವ ಕಂಡು ಗಾಬರಿಗೊಂಡ ಗ್ರಾಹಕರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದಾಗ ಅತ್ಯಾಚಾರ ಎಸಗಿರುವುದು ಖಚಿತವಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು. ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ಮಾಡಿದಾಗ ಆರೋಪಿಯ ಕೃತ್ಯ ಬೆಳಕಿಗೆ ಬಂದಿದ್ದು, ತಕ್ಷಣವೇ ಆತನಿಗೆ ಬಲೆ ಬೀಸಿದ್ದರು.

ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ನಾನು ಕಳೆದ ಎರಡು ವರ್ಷಗಳಿಂದ ಮಹಿಳೆಯ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದೆ. ಆದರೆ ಶುಕ್ರವಾರ ಹಣಕಾಸಿನ ವಿಚಾರವಾಗಿ ಮಾಲಕಿ ನನ್ನ ಜೊತೆ ಜಗಳ ಮಾಡಿದರು. ಅಷ್ಟೇ ಅಲ್ಲದೆ ನನ್ನ ಕೆನ್ನೆಗೆ ಹೊಡೆದರು. ಇದರಿಂದ ಕೋಪಗೊಂಡ ನಾನು ಅಂದು ರಾತ್ರಿ ಮಾಲಕಿಯ ಮನೆಗೆ ನುಗ್ಗಿ ಆಕೆಯ ಮೇಲೆ ಅತ್ಯಾವಾರ ಎಸಗಿ ಕೊಲೆ ಮಾಡಿದ್ದೇನೆ ಎಂದು ಧರಮ್‍ರಾಜ್ ಸತ್ಯ ಬಾಯಿಬಿಟ್ಟಿದ್ದಾನೆ.

Comments are closed.