ಮನೋರಂಜನೆ

ನಟ ವಿಜಯ್ ದೇವರಕೊಂಡರಿಂದ 15 ಕೋಟಿ ರೂ. ಮೌಲ್ಯದ ಮನೆ ಖರೀದಿ

Pinterest LinkedIn Tumblr


ಹೈದರಾಬಾದ್: ಟಾಲಿವುಡ್ ಅರ್ಜುನ್ ರೆಡ್ಡಿ ನಟ ವಿಜಯ್ ದೇವರಕೊಂಡ ಅವರು 15 ಕೋಟಿ ರೂ. ಮೌಲ್ಯದ ಮನೆ ಖರೀದಿಸಿದ್ದಾರೆ.

ಇತ್ತೀಚೆಗೆ ವಿಜಯ್ ಅವರು ಹೈದರಾಬಾದ್‍ನ ಜುಬ್ಲಿ ಹಿಲ್ಸ್ ನಲ್ಲಿ ಇರುವ ತಮ್ಮ ಹೊಸ ಮನೆಯ ಗೃಹ ಪ್ರವೇಶವನ್ನು ಮಾಡಿದ್ದರು. ಈ ಕಾರ್ಯಕ್ರಮದಲ್ಲಿ ಹತ್ತಿರದ ಸಂಬಂಧಿಕರು ಹಾಗೂ ಆತ್ಮೀಯ ಸ್ನೇಹಿತರು ಭಾಗವಹಿಸಿದ್ದರು. ವಿಜಯ್ ಗೃಹ ಪ್ರವೇಶದ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ವಿಜಯ್ ಸಾಂಪ್ರದಾಯಿಕ ಉಡುಗೆ ತೊಟ್ಟು ತನ್ನ ಕುಟುಂಬಸ್ಥರ ಜೊತೆ ಹೊಸ ಮನೆಯಲ್ಲಿ ಕುಳತುಕೊಂಡಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಅದಕ್ಕೆ ಅವರು, “ಅಮ್ಮನ ಖುಷಿ, ಅಪ್ಪನ ಹೆಮ್ಮೆ ಹಾಗೂ ನಮ್ಮ ಹೊಸ ಮನೆ. ನಾವು ನಾಲ್ವರು ನಿಮ್ಮನ್ನು ತುಂಬಾ ಪ್ರೀತಿಸುತ್ತೇವೆ. ನೀವೆಲ್ಲರೂ ನನ್ನ ಜೀವನದ ಒಂದು ಭಾಗ” ಎಂದು ಪೋಸ್ಟ್ ಮಾಡಿದ್ದಾರೆ.

ಮತ್ತೊಂದು ಪೋಸ್ಟ್ ನಲ್ಲಿ ವಿಜಯ್, “ನಾನು ಇಷ್ಟು ದೊಡ್ಡ ಮನೆಯನ್ನು ಖರೀದಿಸಿದ್ದು, ನನಗೆ ಇದು ಭಯಪಡಿಸುತ್ತೆ. ನಾನು ಸುರಕ್ಷಿತವಾಗಿರಬೇಕು ಎಂದರೆ ಅಮ್ಮ ಏನಾದರೂ ಮಾಡಬೇಕು. ಇದು ಮನೆಯನ್ನು ಮಾಡಿ” ಎಂದು ಫನ್ನಿಯಾಗಿ ಬರೆದುಕೊಂಡಿದ್ದಾರೆ.

ವಿಜಯ್ ನಿರ್ದೇಶಕ ಕ್ರಾಂತಿ ಮಾದವ್ ನಿರ್ದೇಶನದ ‘ವಲ್ಡ್ ಫೇಮಸ್ ಲವರ್’ ಚಿತ್ರದಲ್ಲಿ ನಟಿಸಿದ್ದು, ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಇದಾದ ಬಳಿಕ ಅವರು ನಿರ್ದೇಶಕ ಆನಂದ್ ಅಣ್ಣಾಮಲೈ ನಿರ್ದೇಶನದ ‘ಹೀರೋ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ತೆಲುಗು ಹಾಗೂ ತಮಿಳಿನಲ್ಲಿ ಬಿಡುಗಡೆ ಆಗಲಿದೆ.

Comments are closed.