ಮನೋರಂಜನೆ

ಬಾಲಿವುಡ್ ನಟಿ ಮಲೈಕಾ ಅರೋರಾ ತನ್ನ ಇನ್‍ಸ್ಟಾಗ್ರಾಂನಲ್ಲಿ ಹಾಕಿದ ಫೋಟೋ ಟ್ರೋಲ್

Pinterest LinkedIn Tumblr


ಮುಂಬೈ: ಬಾಲಿವುಡ್ ನಟಿ ಮಲೈಕಾ ಅರೋರಾ ತನ್ನ ಇನ್‍ಸ್ಟಾಗ್ರಾಂನಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಈ ಫೋಟೋ ಹಾಕಿದ ಕೆಲವೇ ಗಂಟೆಗಳಲ್ಲಿ ಮಲೈಕಾ ಸಾಕಷ್ಟು ಟ್ರೋಲ್ ಆಗುತ್ತಿದ್ದಾರೆ.

ಪೋಸ್ಟ್ ಮಾಡಿರುವ ಫೋಟೋದಲ್ಲಿ ಮಲೈಕಾ ಹೆಚ್ಚು ಮೇಕಪ್ ಮಾಡಿಕೊಂಡಿದ್ದಾರೆ. ಇದು ಕೆಲವರಿಗೆ ಇಷ್ಟವಾದರೆ ಮತ್ತೆ ಕೆಲವರಿಗೆ ಅವರ ಮೇಕಪ್ ಇಷ್ಟವಾಗಿಲ್ಲ. ಹಾಗಾಗಿ ಅವರು ಮಲೈಕಾರನ್ನು ಸಾಕಷ್ಟು ಟ್ರೋಲ್ ಮಾಡುತ್ತಿದ್ದಾರೆ.

ಮಲೈಕಾ ಅವರ ಪೋಸ್ಟ್ ನೋಡಿ ಕೆಲವರು, ನಿಮ್ಮ ಮುಖದ ಮೇಲೆ ಮೇಕಪ್ ಇದೆಯಾ ಅಥವಾ ನೀವು ಮೇಕಪ್ ಮೇಲೆ ಇದ್ದೀರಾ? ಎಂದು ಪ್ರಶ್ನಿಸಿದ್ದಾರೆ. ಮತ್ತೆ ಕೆಲವರು ಮೇಕಪ್ ಫೌಂಡೇಶನ್ ಹೆಚ್ಚಾಗಿದೆ ಎಂದು ಕಾಲೆಳೆದಿದ್ದಾರೆ. ಇನ್ನೂ ಕೆಲವರು ನೀವು ಮೇಕಪ್ ಇಲ್ಲದೆಯೇ ಸುಂದರವಾಗಿ ಕಾಣುತ್ತೀರಾ ಎಂದು ಕಮೆಂಟ್ ಮಾಡಿದ್ದಾರೆ.

ಇತ್ತೀಚೆಗೆ ಮಲೈಕಾ ಅವರು ಬಾಲಿವುಡ್ ಬಾದ್‍ಶಾ ಶಾರೂಕ್ ಖಾನ್ ಅವರ ಪತ್ನಿ ಗೌರಿ ಖಾನ್ ಕಾಸ್ಟ್ಯೂಮ್ ಡಿಸೈನ್ ಮಾಡಿರುವ ಶಾಪ್ ಲಾಂಚ್ ಕಾರ್ಯಕ್ರಮಕ್ಕೆ ಹೋಗಿದ್ದರು. ಈ ವೇಳೆ ಅವರು ಡೀಪ್ ನೆಕ್ ಡ್ರೆಸ್ ಧರಿಸಿದ್ದರು. ಬಳಿಕ ಕ್ಯಾಮೆರಾ ಮುಂದೆ ನಿಂತು ಫೋಟೋಗೆ ಪೋಸ್ ಕೊಡುವಾಗ ಅವರು ಧರಿಸಿದ್ದ ಡ್ರೆಸ್ ಮತ್ತಷ್ಟು ಕೆಳಗೆ ಜಾರಿದೆ.

ಈ ನಡುವೆ ಮಲೈಕಾ ಸಾಕಷ್ಟು ಸುದ್ದಿ ಆಗುತ್ತಿದ್ದಾರೆ. ಕೆಲವೊಮ್ಮೆ ಫಿಟ್ನೆಸ್ ವಿಷಯಕ್ಕಾಗಿ ಸುದ್ದಿಯಾದರೆ, ಕೆಲವು ಬಾರಿ ತಮ್ಮ ಪ್ರೀತಿ ವಿಷಯದಿಂದ ಸುದ್ದಿ ಆಗಿರುತ್ತಾರೆ. ಮಲೈಕಾ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯರಾಗಿರುತ್ತಾರೆ. ಅಲ್ಲದೆ ತಮ್ಮ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

Comments are closed.