ಕರ್ನಾಟಕ

ಅಪ್ರಾಪ್ತೆ ಮೇಲೆ ಅತ್ಯಾಚಾರ ಮಾಡಿ ಆಕೆಯೊಂದಿಗೆ ಮದುವೆಯಾದ- ಇನ್ನೊಬ್ಬ ಅಪ್ರಾಪ್ತೆಗೂ ತಾಳಿಕಟ್ಟಿದ

Pinterest LinkedIn Tumblr


ತುಮಕೂರು: ಆತ ಈಗಿನ್ನೂ 21 ವರ್ಷದ ಚಿಗುರು ಮೀಸೆಯ ಯುವಕ. ಆತನ ವಯಸ್ಸು ಚಿಕ್ಕದಾದರೂ ಚಪಲತನಕ್ಕೇನು ಕಡಿಮೆ ಇಲ್ಲ. ಅಪ್ರಾಪ್ತೆ ಮೇಲೆ ಅತ್ಯಾಚಾರ ಮಾಡಿದ ತಪ್ಪಿಗೆ ಆಕೆಯೊಂದಿಗೆ ಮದುವೆಯಾದ. ಒಂದಿಷ್ಟು ದಿನ ಕಳೆದ ಬಳಿಕ ಇನ್ನೊಬ್ಬಳು ಅಪ್ರಾಪ್ತೆಯೊಂದಿಗೆ ಲವ್ವಿಡವ್ವಿ ಶುರುವಿಟ್ಟುಕೊಂಡು ಆಕೆಗೂ ತಾಳಿಕಟ್ಟಿದ್ದಾನೆ.

ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ನಾಗಲಾಪುರದ ಮಂಜುನಾಥ್ ಅಪ್ರಾಪ್ತೆಯರೊಂದಿಗೆ ಮನಸ್ಸೋ ಇಚ್ಛೆ ವರ್ತಿಸುತ್ತಿದ್ದನು. ಒಂದಲ್ಲಾ, ಇಬ್ಬರು ಅಪ್ರಾಪ್ತೆಯರನ್ನು ಮದುವೆಯಾಗಿ ಈಗ ಜೈಲು ಕಂಬಿ ಎಣಿಸುತ್ತಿದ್ದಾನೆ.

ಇದೇ ತಾಲೂಕಿನ ದೊಡ್ಡಹಳ್ಳಿಯ ಅಪ್ರಾಪ್ತೆಯ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಆಕೆ ಮೇಲೆ ನಿರಂತರ ಅತ್ಯಾಚಾರ ನಡೆಸಿದ್ದಾನೆ. ಬಾಲಕಿ ಮನೆಯವರಿಗೆ ಈ ವಿಚಾರ ಗೊತ್ತಾದಾಗ ಆಕೆಯೊಂದಿಗೆ ಮದುವೆಯಾಗುತ್ತೇನೆ ಎಂದು ಅಪ್ರಾಪ್ತೆಯೊಂದಿಗೆ ಮದುವೆಯೂ ಆದ. 2018ರ ಡಿಸೆಂಬರ್ 27 ರಂದು ಶಾಸ್ತ್ರೋಕ್ತವಾಗಿ ಬಾಲಕಿಗೆ ತಾಳಿಕಟ್ಟಿದ್ದಾನೆ. ಸಾಲದ್ದಕ್ಕೆ 1 ಲಕ್ಷ ರೂ. ಪಲ್ಸರ್ ಬೈಕನ್ನೂ ವರದಕ್ಷಿಣೆಯಾಗಿ ತೆಗೆದುಕೊಂಡಿದ್ದಾನೆ. ಮದುವೆಯಾದ 8 ತಿಂಗಳ ಬಳಿಕ ರಾಗ ಬದಲಿಸಿದ ಈ ಚಪಲಚನ್ನಿಗರಾಯ ಮತ್ತೊಬ್ಬಳು ಅಪ್ರಾಪ್ತೆಯನ್ನು ತನ್ನ ಪ್ರೇಮಪಾಶಕ್ಕೆ ಬೀಳಿಸಿಕೊಂಡಿದ್ದಾನೆ.

ದೊಡ್ಡಹಳ್ಳಿಯ ಬಾಲಕಿಯೊಂದಿಗೆ ಮದುವೆಯಾದ ಈ ಭೂಪ ಗೊತ್ತಿಲ್ಲದೇ ನಾಗಲಾಪುರದ ಬಾಲಕಿಯೊಂದಿಗೆ ಲವ್ವಿಡವ್ವಿ ಶುರುವಿಟ್ಟುಕೊಂಡಿದ್ದ. ತಾನು ಮದುವೆಯಾಗಿದ್ದೇನೆ ಅನ್ನೋದನ್ನು ಮರೆತ ಈ ಕಾಮಾಂಧ ಆ ಬಾಲಕಿಯೊಂದಿಗೂ ಸಂಬಂಧವಿಟ್ಟುಕೊಂಡ. ಸಿನಿಮಾ, ಪಾರ್ಕ್ ಸುತ್ತಾಡಿ ಜೊತೆಯಲ್ಲಿ ಪಾನಿಪೂರಿನೂ ತಿಂದಿದ್ದಾರೆ. ಅಲ್ಲದೆ ಆ ಬಾಲಕಿಯೊಂದಿಗೆ ಅಶ್ಲೀಲ ಎನ್ನುವ ರೀತಿ ಸೆಲ್ಫಿ ತೆಗೆಸಿಕೊಂಡಿದ್ದಾನೆ. ಮಂಜುನಾಥನ ಈ ಮಹಿಮೆ ಯಾರಿಗೂ ತಿಳಿದಿರಲಿಲ್ಲ. ಕೊನೆಗೊಂದು ದಿನ ಬಾಲಕಿಯೊಂದಿಗೆ ಓಡಿ ಮದುವೆಯಾಗಿದ್ದಾಗಲೇ ಗೊತ್ತಾಗಿದ್ದು. ಈಗ ಮೊದಲ ಪತ್ನಿಯನ್ನು ತನ್ನ ಮನೆಯಿಂದ ಹೊರಹಾಕಿದ್ದಾನೆ. ಎರಡನೇ ಪತ್ನಿಯೊಂದಿಗೆ ಮನೆಯಲ್ಲಿ ಸಂಸಾರ ಹೂಡಿದ್ದಾನಂತೆ. ಆರೋಪಿ ಮಂಜುನಾಥ್‍ನ ಬೆಂಬಲಕ್ಕೆ ಮಾಜಿ ಸಚಿವ ಹಾಲಿ ಶಾಸಕ ವೆಂಕಟರಮಣಪ್ಪ ನಿಂತಿದ್ದಾರೆ ಎಂದು ಬಾಲಕಿ ಪೋಷಕರು ಆರೋಪಿಸುತ್ತಾರೆ.

ಮೊದಲ ಬಾಲಕಿ ಪೋಷಕರು ವೈ.ಎನ್ ಹೊಸಕೋಟೆ ಪೊಲೀಸರಿಗೆ ದೂರುಕೊಟ್ಟಿದ್ದರಿಂದ ಮಂಜುನಾಥ್ ಅರೆಸ್ಟ್ ಆಗಿದ್ದಾನೆ. ತನ್ನ ಗಂಡ ತನ್ನೊಂದಿಗೆ ಸಂಸಾರ ಮಾಡೋದಾದ್ರೆ ಜೈಲಿನಿಂದ ಹೊರಕ್ಕೆ ಬರಲಿ, ಇಲ್ಲಾಂದ್ರೆ ಜೈಲಿನಲ್ಲಿಯೇ ಕೊಳೆಯಲಿ ಎನ್ನುತ್ತಾಳೆ. ಈತನ ಮಹಿಮೆ ಇಷ್ಟಕ್ಕೆ ಮುಗಿಯುವುದಿಲ್ಲ. ಆಂಧ್ರದಲ್ಲೂ ಎರಡು ಅತ್ಯಾಚಾರ ಕೇಸ್ ಇವನ ಮೇಲಿದೆಯಂತೆ ಅಷ್ಟರ ಮಟ್ಟಿಗೆ ಈತ ಚಿಕ್ಕವಯಸ್ಸಿನಲ್ಲೇ ದಾರಿತಪ್ಪಿದ್ದಾನೆ.

Comments are closed.