
ಕೊಚ್ಚಿ: ಮಹಿಳಾ ಹಕ್ಕುಗಳ ಕಾರ್ಯಕರ್ತೆ ತೃಪ್ತಿ ದೇಸಾಯಿ ಕೊಚ್ಚಿಗೆ ಬಂದಿದ್ದು, ಇಂದು ಶಬರಿ ಮಲೆಗೆ ಏರುವ ಇಂಗಿತ ವ್ಯಕ್ತಪಡಿಸಿದ್ದಾರೆ.
ದೇವಸ್ಥಾನಕ್ಕೆ ಭೇಟಿ ನೀಡುವುದು ನನ್ನ ಹಕ್ಕು. ಸಂವಿಧಾನದ ದಿನವಾದ ಇಂದೇ ನಾನು ಶಬರಿಮಲೆಗೆ ಹೋಗುತ್ತೇನೆ ಎಂದಿದ್ದಾರೆ.
ಸಂವಿಧಾನದಲ್ಲಿ ಎಲ್ಲರೂ ಸಮಾನರು. ಎಲ್ಲರಿಗೂ ದೇವರಿಗೆ ಪ್ರಾರ್ಥಿಸುವ, ಪೂಜಿಸುವ ಹಕ್ಕಿದೆ. ಹಾಗಾಗಿ ನಾನು ನನ್ನ ಹಕ್ಕಿನ ಪ್ರಕಾರವೇ ಶಬರಿಮಲೆಗೆ ಭೇಟಿ ನೀಡುತ್ತೇನೆ ಎಂದಿದ್ದಾರೆ.
ಯಾರೂ ನನ್ನನ್ನು ತಡೆಯಲಾಗುವುದಿಲ್ಲ. ಒಂದು ವೇಳೆ ಸರಕಾರ ಅಥವಾ ಸ್ಥಳೀಯ ಪೊಲೀಸರು ನನ್ನನ್ನು ತಡೆದರೆ ಅದು ಕಾನೂನು ಉಲ್ಲಂಘನೆಯಾಗುತ್ತದೆ ಎಂದಿದ್ದಾರೆ.
Comments are closed.