ಮುಂಬೈ

30 ಲಕ್ಷ ಗ್ರಾಹಕರನ್ನು ಕಳೆದುಕೊಂಡ ಏರ್‌ಟೆಲ್‌

Pinterest LinkedIn Tumblr


ಮುಂಬಯಿ: ಜಿಯೋ ಟೆಲಿಫೋನ್‌ ಕ್ಷೇತ್ರದಲ್ಲಿ ತನ್ನ ಅಧಿಪತ್ಯ ಸಾಧಿಸುತ್ತಿದ್ದು, ಇತರೆ ನೆಟ್‌ವರ್ಕ್‌ಗಳು ಕಂಗಾಲಾಗಿವೆ. ಮಾರುಕಟ್ಟೆಯ ಮೇಲೆ ಜಿಯೋ ಬಿಗಿಹಿಡಿತ ಸಾಧಿಸುತ್ತಿರುವ ನಡುವೆಯೇ ಟೆಲಿಫೋನ್‌ ಕ್ಷೇತ್ರದಲ್ಲಿ ಹಲವಾರು ಏರಿಳಿತಗಳು ನಡೆಯುತ್ತಿದ್ದು, ಏರ್‌ಟೆಲ್‌ಗೆ ಜಮ್ಮು ಕಾಶ್ಮೀರದ ಬೆಳವಣಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿ ವೇಳೆ ಮೊಬೈಲ್‌ ನೆಟ್‌ವರ್ಕ್‌ ಮೇಲೆ ನಿರ್ಬಂಧ ಹೇರಿದ್ದ ಪರಿಣಾಮ ಏರ್‌ಟೆಲ್‌ಗೆ ಭಾರಿ ನಷ್ಟ ಆಗಿದೆ. ಒಂದೆಡೆ ಜಿಯೋ ಪ್ರತಿಸ್ಪರ್ಧೆ ನೀಡುವ ಮೂಲಕ ಸಂಕಷ್ಟಕ್ಕೆ ದಾರಿ ಮಾಡಿಕೊಡುತ್ತಿದ್ದರೆ, ಅತ್ತ ಮಾರುಕಟ್ಟೆಯಲ್ಲಿನ ಬದಲಾವಣೆಗಳಿಂದ ಕಂಗಾಲಾಗಿರುವ ಏರ್‌ಟೆಲ್‌ಗೆ ಜಮ್ಮು ಕಾಶ್ಮೀರದಲ್ಲಿನ ಬೆಳವಣಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ತಿಂಗಳುಗಳ ಕಾಲ ಮೊಬೈಲ್‌ ನೆಟ್‌ವರ್ಕ್‌ ಮೇಲೆ ನಿರ್ಬಂಧದಿಂದ ಏರ್‌ಟೆಲ್‌ ಬರೋಬ್ಬರಿ 30 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದೆ.

ಇನ್ನೂ ಗ್ರಾಹಕರನ್ನು ಕಳೆದುಕೊಂಡ ವಿಚಾರದಲ್ಲಿ ವೊಡಾಫೋನ್‌ – ಐಡಿಯಾ ಸಹ ಪಾಲುದಾರರಾಗಿದ್ದು, ಏರ್‌ಟೆಲ್‌ ಅಗ್ರಸ್ಥಾನದಲ್ಲಿದೆ. ನೆಟ್‌ವರ್ಕ್‌ ನಿರ್ಬಂಧದ ಬಗ್ಗೆ ಕೆಲ ದಿನಗಳ ಹಿಂದೆ ರಾಜ್ಯಸಭೆಯಲ್ಲಿ ಗೃಹ ಸಚಿವ ಅಮಿತ್‌ ಶಾ ಸ್ಪಷ್ಟನೆ ನೀಡಿದ್ದು, ನೂತನ ಕೇಂದ್ರಾಡಳಿತ ಪ್ರದೇಶದ ಆಡಳಿತವರ್ಗದಿಂದ ಶಿಫಾರಸು ಬಂದ ತಕ್ಷಣವೇ ನಿರ್ಬಂಧವನ್ನು ಸಂಪೂರ್ಣವಾಗಿ ಹಿಂಪಡೆಯಲಾಗುವುದು ಎಂದಿ¨ªಾರೆ.

Comments are closed.