ಮದುವೆ ನಂತ್ರ ಹೊಸ ಜವಾಬ್ದಾರಿಗಳನ್ನು ನಿಭಾಯಿಸಬೇಕಾಗುತ್ತದೆ. ಅನೇಕರು ಇದಕ್ಕೆ ಹೆದರುತ್ತಾರೆ. ಮದುವೆ ನಂತ್ರದ ದಿನಗಳು ಹೇಗಿರಬಹುದು ಎಂಬ ಭಯ ಅವ್ರನ್ನು ಕಾಡುತ್ತದೆ. ಆದ್ರೆ ಇಂಡೋನೇಷ್ಯಾ ಜನರು ಇನ್ಮುಂದೆ ಮದುವೆ ಬಗ್ಗೆ ಹೆದರಬೇಕಾಗಿಲ್ಲ. ಇಂಡೋನೇಷ್ಯಾ ಶೀಘ್ರದಲ್ಲೇ ಮೂರು ತಿಂಗಳ ಮದುವೆ ಕೋರ್ಸ್ ಪರಿಚಯಿಸಲಿದೆ. ಈ ಕೋರ್ಸ್ ಪೂರ್ಣಗೊಳಿಸಿದವರು ಮದುವೆಯಾಗಲು ಸಿದ್ಧವಾದಂತೆ.
ಈ ಕೋರ್ಸ್ ಪೂರ್ಣಗೊಳಿಸುವಂತೆ ಇಂಡೋನೇಷ್ಯಾ ಸರ್ಕಾರ ಕಡ್ಡಾಯ ನಿಯಮ ಜಾರಿಗೆ ತರುವ ಸಾಧ್ಯತೆಯಿದೆ. ಉಚಿತ ಕೋರ್ಸ್ ನಲ್ಲಿ ಸಂತಾನೋತ್ಪತ್ತಿ ಆರೋಗ್ಯ, ರೋಗ ತಡೆಗಟ್ಟುವಿಕೆ ಮತ್ತು ಶಿಶುಪಾಲನಾ ಸಲಹೆಗಳ ಕುರಿತು ತರಬೇತಿ ನೀಡಲಾಗುವುದು.
ಈ ಕಾರ್ಯಕ್ರಮವನ್ನು ಮಾನವ ಅಭಿವೃದ್ಧಿ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಸಮನ್ವಯ ಸಚಿವರು ಹಿಂದಿನ ವಾರ ಘೋಷಿಸಿದ್ದರು. 2020ರಲ್ಲಿ ಇದು ಜಾರಿಗೆ ಬರಲಿದೆ. ಕೋರ್ಸ್ನ ತರಗತಿಗಳನ್ನು ಪಿಎಂಕೆ, ಧಾರ್ಮಿಕ ವ್ಯವಹಾರಗಳ ಸಚಿವಾಲಯ ಮತ್ತು ಆರೋಗ್ಯ ಸಚಿವಾಲಯ ವಿನ್ಯಾಸಗೊಳಿಸಲಿದೆ.

Comments are closed.