ರಾಷ್ಟ್ರೀಯ

14 ವರ್ಷಗಳಿಂದ ಮುಚ್ಚಲ್ಪಟ್ಟಿದ 26 ಶಾಲೆಗಳನ್ನು ಪುನರಾರಂಭಿಸಿದ ಛತ್ತೀಸ್‌ಗಢ ಸರಕಾರ

Pinterest LinkedIn Tumblr

ಛತ್ತೀಸ್‌ಗಢ: ರಾಜ್ಯ ಬೆಂಬಲಿತ ಸಲ್ವಾ ಜುದಮ್‌ ಮಿಲಿಷಿಯಾ ಮತ್ತು ಮಾವೋದಿಗಳ ನಡುವಿನ ಹಿಂಸಾಚಾರ ತೀವ್ರ ರೂಪ ಪಡೆದುಕೊಂಡಿದ್ದರ ಪರಿಣಾಮ ಬಸ್ತಾರ್‌ ಪ್ರದೇಶದಲ್ಲಿ ಸರಕಾರ ಆಡಳಿತವನ್ನು ಸ್ಥಗಿತಗೊಳಿಸುವುದರೊಂದಿಗೆ 2011 ರಲ್ಲಿ ಸುಪ್ರೀಂ ಕೋರ್ಟ್‌ ಆದೇಶದ ಮೇರೆಗೆ 300 ಶಾಲೆಗಳನ್ನು ಮುಚ್ಚಿತ್ತು. ಇದೀಗ ರಾಜ್ಯದಲ್ಲಿ ಗಲಭೆ ತೀವ್ರತೆ ಕಡಿಮೆಯಾಗಿದ್ದು, ಸ್ಥಳೀಯ ಆಡಳಿತ ಸ್ಥಳೀಯ ಬುಡಕಟ್ಟು ಜನಾಂಗದವರೊಂದಿಗೆ ಸೇರಿ 14 ವರ್ಷಗಳಿಂದ ಮುಚ್ಚಲ್ಪಟ್ಟಿದ 26 ಶಾಲೆಗಳನ್ನು ಛತ್ತೀಸ್‌ಗಢ ಸರಕಾರ ಪುನರಾರಂಭಿಸಿದೆ. ಈ ಶಾಲೆಗಳಿಗೆ 700 ವಿದ್ಯಾರ್ಥಿಗಳು ದಾಖಲಾಗಿದ್ದಾರೆ.ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಿಕ್ಷಣದ ಮೂಲಕ ಮುಖ್ಯವಾಹಿನಿಗೆ:
ಅತ್ಯಂತ ಸೂಕ್ಷ್ಮಮತ್ತು ದೂರದ ಹಳ್ಳಿಗಳ ಮಕ್ಕಳನ್ನು ಶಿಕ್ಷಣ ಮೂಲಕ ಮುಖ್ಯವಾಹಿಗೆ ತರಲು ಈ ನಿರ್ಧಾರವನ್ನು ತೆಗೆದುಕೊಂಡಿದ್ದು, ಗ್ರಾಮಸ್ಥರ ಬೆಂಬಲದೊಂದಿಗೆ ಮಕ್ಕಳಿಗೆ ಸರಿಯಾದ ಶಿಕ್ಷಣ ಸೌಲಭ್ಯಗಳನ್ನು ಒದಗಿಸುತ್ತೇವೆ ಎಂದು ಬಿಜಾಪುರ ಜಿಲ್ಲಾಧಿಕಾರಿ ಕೆ ಡಿ ಕುಂಜಮ್‌ ಹೇಳಿದ್ದಾರೆ.

ಬಿಸಿಯೂಟದ ಸೌಲಭ್ಯ:
ಈ ಶಾಲೆಗಳಲ್ಲಿ ವಿದ್ಯಾಭ್ಯಾಸಕ್ಕೆ ಅಗತ್ಯವಿರುವ ಸ್ಲೇಟ್‌ಗಳು, ಪಠ್ಯಪುಸ್ತಕಗಳು, ನೋಟ್‌ಬುಕ್‌ಗಳನ್ನು ಒದಗಿಸಸಲಾಗುತ್ತಿದೆ. ಮಧ್ಯಾಹ್ನದ ಬಿಸಿಯೂಟವನ್ನೂ ನೀಡಲಾಗುತ್ತಿದೆ.

ಶಿಕ್ಷಾ ಡೂಟ್ಸ್‌:
ಜಿಲ್ಲಾಡಳಿತವು ಸ್ಥಳೀಯ ನಿರುದ್ಯೋಗಿ ನಿವಾಸಿಗಳನ್ನು ಶಿಕ್ಷಾ ಡೂಟ್ಸ್‌ (ಶಿಕ್ಷಕರು) ಎಂದು ನೇಮಕ ಮಾಡಿದ್ದು, ಅವರಿಗೆ ಜಿಲ್ಲಾ ಖನಿಜ ನಿಧಿಯಿಂದ ಮಾಸಿಕ ಗೌರವ ಮೊತ್ತವನ್ನು ನೀಡಲಾಗುತ್ತಿದೆ.

Comments are closed.