ರಾಷ್ಟ್ರೀಯ

9 ನವಿಲುಗಳ ಮೃತದೇಹ ಪತ್ತೆ.- ಪರಿಸರ ತಜ್ಞರಲ್ಲಿ ಆತಂಕ

Pinterest LinkedIn Tumblr

ಬಿಜ್ನೋರ್​: ಜೈಪುರದ ಉಪ್ಪುನೀರಿನ ಸರೋವರದ ಬಳಿ 10,000ಕ್ಕೂ ಅಧಿಕ ವಲಸೆ ಹಕ್ಕಿಗಳು ಸತ್ತುಬಿದ್ದಿರುವುದು ಈಗಾಗಲೇ ವರದಿಯಾಗಿದೆ. ಅಲ್ಲದೆ ಉತ್ತರಪ್ರದೇಶದ ಬಿಜ್ನೋರ್​​​ನ ಕಬ್ಬಿನಗದ್ದೆಯಲ್ಲಿ ಎಂಟು ನವಿಲುಗಳ ಮೃತದೇಹ ಸಿಕ್ಕಿತ್ತು. ಇದರ ಬೆನ್ನಲ್ಲೇ ಮತ್ತೆ 9 ನವಿಲುಗಳ ಮೃತದೇಹ ರಾಜಸ್ಥಾನದ ಅಲ್ವಾರ್​ ಜಿಲ್ಲೆಯಲ್ಲಿ ಗುರುವಾರ ಪತ್ತೆಯಾಗಿದೆ. ಇದು ಪರಿಸರ ತಜ್ಞರಲ್ಲಿ ಆತಂಕ ಮೂಡಿಸಿದೆ.

ಇಲ್ಲಿ 9 ನವಿಲುಗಳ ಮೃತದೇಹದೊಂದಿಗೆ ಮತ್ತೆ ಐದು ಪ್ರಜ್ಞೆಯಿಲ್ಲದೆ ಮಲಗಿದ್ದ ನವಿಲುಗಳೂ ಇದ್ದವು. ಅವುಗಳನ್ನು ಹತ್ತಿರದ ಪಶುವೈದ್ಯಕೀಯ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗಿದೆ. ಅಲ್ಲದೆ, ಇಷ್ಟು ನವಿಲುಗಳು ಏಕಾಏಕಿ ಸಾಯುತ್ತಿರಲು ಕಾರಣವನ್ನೂ ವೈದ್ಯರು ಪತ್ತೆಹಚ್ಚುತ್ತಿದ್ದಾರೆ.

ಪಕ್ಷಿಗಳು ಯಾವುದಾದರೂ ವಿಷಪೂರಿತ ಆಹಾರ ಸೇವಿಸಿ ಸಾವನ್ನಪ್ಪಿವೆಯಾ ಅಥವಾ ಬೇರೇನಾದರೂ ಕಾಯಿಲೆ ಬಂದಿತ್ತಾ ಎಂಬ ಬಗ್ಗೆ ತಜ್ಞರು ಅಧ್ಯಯನ ನಡೆಸುತ್ತಿದ್ದಾರೆ. ಕಬ್ಬಿನಗದ್ದೆಗೆ ಸಿಂಪಡಿಸುವ ಕೀಟನಾಶಕಗಳೇ ನವಿಲುಗಳು ಸಾಯಲು ಕಾರಣ. ಹೀಗೆ ರಾಸಾಯನಿಕಗಳ ಸಿಂಪಡಣೆ ಮುಂದುವರಿದರೆ ಮತ್ತಷ್ಟು ಪಕ್ಷಿಗಳು ಸಾಯುತ್ತವೆ ಎಂದು ಪರಿಸರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Comments are closed.