
ಬೆಂಗಳೂರು: ನಗರದ ಇಟ್ಟಮಡುವಿನಲ್ಲಿರುವ ಬಾರ್ವೊಂದರ ಕ್ಯಾಷಿಯರ್ನನ್ನು ದುಷ್ಕರ್ಮಿಗಳು ಬುಧವಾರ ತಡರಾತ್ರಿ ರಸ್ತೆ ತುಂಬಾ ಅಟ್ಟಾಡಿಸಿ ಚೂರಿಯಿಂದ ಇರಿದು ಕೊಂದಿದ್ದಾರೆ.
ಕುಣಿಗಲ್ನ ಮನವಳ್ಳಿ ಗ್ರಾಮದ ವೆಂಕಟೇಶ್ (35) ಹತ್ಯೆಯಾದವ. ಇಟ್ಟಮಡುವಿನ ಮಂಜುನಾಥ್ ಬಾರ್ಗೆ ಬಂದಿದ್ದ ದುಷ್ಕರ್ಮಿಗಳು ಕಂಠಮಟ್ಟ ಕುಡಿದು, ಹೊಟ್ಟೆ ತುಂಬಾ ತಿಂದು ಬಿಲ್ ಕೊಡದೆ ಹೊರನಡೆದಿದ್ದರು. ತಕ್ಷಣವೇ ಅವರನ್ನು ತಡೆದ ವೆಂಕಟೇಶ್ ಬಿಲ್ ಕೊಡುವಂತೆ ಒತ್ತಾಯಿಸಿದ್ದ. ಇದಕ್ಕೆ ದುಷ್ಕರ್ಮಿಗಳು ಆಕ್ಷೇಪಿಸಿದ್ದಲ್ಲದೆ, ಆತನೊಂದಿಗೆ ಜಗಳ ತೆಗೆದಿದ್ದರು.
ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸುವ ಹಂತ ತಲುಪಿತ್ತು. ರಸ್ತೆ ತುಂಬಾ ವೆಂಕಟೇಶನನ್ನು ಅಟ್ಟಾಡಿಸಿದ ದುಷ್ಕರ್ಮಿಗಳು ಕೆಳಬಿದ್ದವನನ್ನು ಮನಬಂದಂತೆ ಚೂರಿಯಿಂದ ಇರಿದು ಕೊಂದು ಪರಾರಿಯಾಗಿದ್ದಾರೆ. ಚೆನ್ನಮ್ಮಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Comments are closed.