ಕರಾವಳಿ

ಕುಂದಾಪುರ ಮಹಿಳಾ ಸಾಂತ್ವಾನ ಕೇಂದ್ರದಲ್ಲಿ 130ನೇ ಮದುವೆ- ವಿವಾಹವಾದ್ರು ಪ್ರೇಮಿಗಳು!

Pinterest LinkedIn Tumblr

ಕುಂದಾಪುರ: ಕುಂದಾಪುರ ಮಹಿಳಾ ಸಾಂತ್ವಾನ ಕೇಂದ್ರದಲ್ಲಿ ಸಾಂತ್ವಾನ ಕೇಂದ್ರದ ಅಧ್ಯಕ್ಷೆ ರಾಧಾದಾಸ್ ನೇತೃತ್ವದಲ್ಲಿ 130 ನೇ ಮದುವೆ ನಡೆಸಲಾಯಿತು.

ಪರಸ್ಪರ ಪ್ರೀತಿಸುತ್ತಿದ್ದ ಸಾಗರ ಯಡಹಳ್ಳಿ ಆನಂದಪುರದ ನಿವಾಸಿಗಳಾದ ರಹಮತ್ ಬೇಗ್ ಮತ್ತು ಸುಮಯಾ ಬಾನು ಎನ್ನುವ ಜೋಡಿಗಳಿಗೆ ಸಾಂತ್ವಾನ ಕೇಂದ್ರದಲ್ಲಿ ಮದುವೆ ಮಾಡಿಸಲಾಯಿತು. ಒಂದು ವರ್ಷದಿಂದ ಪ್ರೀತಿಸುತ್ತಿದ್ದ ಜೋಡಿಗೆ ಮದುವೆಯಾಗಲು ಮನೆಯವರ ವಿರೋಧವಿದ್ದು ನಾಲ್ಕು ದಿನಗಳ ಹಿಂದೆ ಮನೆ ಬಿಟ್ಟು ಬಂದಿದ್ದರು. ತಮಗೆ ಮದುವೆ ಮಾಡಿಸುವಂತೆ ಸಾಂತ್ವಾನ ಕೇಂದ್ರದ ಮೊರೆಗೆ ಬರುತ್ತಾರೆ.

ರಾಧಾದಾಸ್, ಇಬ್ಬರ ಮನೆಯ ಹಿರಿಯರಿಗೆ ಕರೆ ಮಾಡಿ ಜೋಡಿಗಳ ವಿಚಾರ ತಿಳಿಸಿ ಮದುವೆ ಬಗ್ಗೆ ಮಾತುಕತೆ ನಡೆಸಿದರು. ಅಂತೆಯೇ ಜೋಡಿಗಳ ಪೋಷಕರು, ಯಡಹಳ್ಳಿ ಜಮಾತ್ ಮುಖಂಡರು ಕುಂದಾಪುರಕ್ಕೆ ಆಗಮಿಸಿದ್ದು ಮಂಗಳವಾರ ಮದುವೆ ಕಾರ್ಯ ನಡೆಯಿತು.

Comments are closed.