ಕರಾವಳಿ

ಅಮಾಸೆಬೈಲು: ಕಾಡುಕೋಣ ತಿವಿದು ಭತ್ತದ ಗದ್ದೆ ಕಾಯಲು ಹೋದ ಕೃಷಿಕ ದಾರುಣ ಸಾವು

Pinterest LinkedIn Tumblr

ಕುಂದಾಪುರ: ಕೃಷಿ ಗದ್ದೆಯನ್ನು ಕಾಯಲು ಹೋದ ವೇಳೆ ಒಂಟಿಯಾಗಿ ಬಂದ ಕಾಡುಕೋಣವೊಂದು ದಾಳಿ ನಡೆಸಿ ಕೃಷಿಕ ದಾರುಣವಾಗಿ ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆಯ ಅಮಾಸೆಬೈಲಿನಲ್ಲಿ ನಡೆದಿದೆ.

ಅಮಾಸೆಬೈಲು ರಟ್ಟಾಡಿ ಗ್ರಾಮದ ನಡಂಬೂರು ಹುಣ್ಸೇಡಿ ಮನೆ ನಿವಾಸಿ ಗೋಪಾಲ ಪೂಜಾರಿ ಯಾನೆ ಗೋಪು ಪೂಜಾರಿ (68) ಮೃತ ದುರ್ದೈವಿ.

ಗೋಪು ಪೂಜಾರಿ ಕೃಷಿ ಕೆಲಸ ಮಾಡಿಕೊಂಡಿದ್ದು ಮನೆಯ ಸಮೀಪದ ಭತ್ತದ ಕೃಷಿ ಗದ್ದೆಯಲ್ಲಿ ಕಾಡು ಪ್ರಾಣಿಗಳ ಹಾವಳಿ ತಡೆಯಲು ಹಳ್ಳಿ ಮನೆ ನಿರ್ಮಿಸಿ ಕಾಡು ಪ್ರಾಣಿಗಳನ್ನು ಕಾಯಲು ಹೋಗುತ್ತಿದ್ದರು. ನಿತ್ಯದಂತೆ ಸೋಮವಾರ ರಾತ್ರಿಯೂ ಕೂಡ ನೆರೆಕರೆಯವರ ಜೊತೆ ಭತ್ತದ ಗದ್ದೆ ಕಾಯಲು ಹೋಗಿದ್ದ ಸಮಯ ಕೃಷಿ ಭೂಮಿಗೆ ಕಾಡು ಕೋಣ ಬಂದು ಬೆಳೆ ನಾಶ ಮಾಡುವುದನ್ನು ಕಂಡಿದ್ದಾರೆ. ಎಲ್ಲರೂ ಕಾಡು ಕೋಣವನ್ನು ಓಡಿಸಲು ಹೋದಾಗ ಕಾಡು ಕೋಣವು ಇವರ ಮೇಲೆ ಪ್ರತಿದಾಳಿಗೆ ಮುಂದಾಗಿದ್ದು ಎಲ್ಲರೂ ಓಡಿದ್ದು ದುರದ್ರಷ್ಟವಶಾತ್ ಕಾಡುಕೋಣವು ಗೋಪಾಲ ಪೂಜಾರಿಯ ಎದೆಯ ಭಾಗಕ್ಕೆ ಕೊಂಬಿನಿಂದ ತಿವಿದ ಪರಿಣಾಮ ತೀವೃ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಚಿಕಿತ್ಸೆ ಸಲುವಾಗಿ ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಲಾಯಿತಾದರೂ ಕೂಡ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ.

ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.