ಕರ್ನಾಟಕ

ನಮ್ಮ ದೇಶದಲ್ಲಿ ಚೀನದ ಶಿಯೋಮಿ ಮೊಬೈಲ್‌ 5 ವರ್ಷಗಳಲ್ಲಿ 10 ಕೋಟಿ ಮಾರಾಟ

Pinterest LinkedIn Tumblr


ಬೆಂಗಳೂರು: ಕಳೆದ 5 ವರ್ಷಗಳಲ್ಲಿ ಭಾರತದಲ್ಲಿ 10 ಕೋಟಿ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಿರುವುದಾಗಿ ಚೀನ ಮೂಲದ ಸ್ಮಾರ್ಟ್‌ಫೋನ್‌ ತಯಾರಿಕೆ ಕಂಪೆನಿ, ಶಿಯೋಮಿ ಹೇಳಿದೆ. ಶಿಯೋಮಿ ಮೊಬೈಲ್‌ಗ‌ಳು ದೇಶದಲ್ಲೇ ಅತಿ ಹೆಚ್ಚು ಫೋನ್‌ಗಳನ್ನು ಮಾರಾಟ ಮಾಡುವ ಹೆಗ್ಗಳಿಕೆಯನ್ನು ಹೊಂದಿದೆ.

ಹಲವು ಕಂಪೆನಿಗಳು ನಮಗಿಂತ ಮೊದಲೇ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಿದ್ದರೂ, ನಾವು ಹೆಚ್ಚು ಫೋನ್‌ ಮಾರಾಟ ಮಾಡಿದ್ದೇವೆ ಎಂದು ಶೀಯೋಮಿ ಇಂಡಿಯಾದ ಉಪಾಧ್ಯಕ್ಷ ಕುಮಾರ್‌ ಜೈನ್‌ ಹೇಳಿದ್ದಾರೆ.

ದೇಶದಲ್ಲಿ ರೆಡ್‌ಮಿ ಎ ಮತ್ತು ರೆಡ್‌ಮಿ ನೋಟ್‌ ಅತಿ ಹೆಚ್ಚು ಜನಪ್ರಿಯವಾದ ಮೊಬೈಲ್‌ ಮಾದರಿಗಳಾಗಿವೆ. ಸದ್ಯ ಈ ಕಂಪೆನಿ 2019ರ ಎರಡನೇ ತ್ತೈಮಾಸಿಕದಲ್ಲಿ ದೇಶದಲ್ಲಿ ಒಟ್ಟಾರೆ ಮಾರಾಟವಾಗುವ ಮೊಬೈಲ್‌ಗ‌ಳಲ್ಲಿ ಶೇ.28.3ರಷ್ಟು ಪಾಲನ್ನು ಹೊಂದಿದೆ. ಇದೇ ಅವಧಿಯಲ್ಲಿ ರೆಡ್‌ಮಿ ನೋಟ್‌ 7 ಪ್ರೊ ಮತ್ತು ರೆಡ್‌ಮಿ 6 ಎ ಅತಿ ಹೆಚ್ಚು ಮಾರಾಟವಾಗಿವೆ.

Comments are closed.