ಕರ್ನಾಟಕ

ಕೆ.ಜಿ.ಎಫ್​-2 ತಡೆಯಾಜ್ಞೆ; ಸೆ. 5ಕ್ಕೆ ವಿಚಾರಣೆ ಮುಂದೂಡಿಕೆ

Pinterest LinkedIn Tumblr


ಕೋಲಾರ(ಸೆ.01): ಪರಿಸರ ಹಾನಿಯುಂಟು ಮಾಡಿದ ಆರೋಪದಡಿ ‘ಕೆ.ಜಿ.ಎಫ್​ ಚಾಪ್ಟರ್​-2‘ ಚಿತ್ರಿಕರಣಕ್ಕೆ ಸಿವಿಲ್​ ಕೋರ್ಟ್​ ನೀಡಿರುವ ತಡೆಯಾಜ್ಞೆಯ ವಿಚಾರಣೆಯನ್ನು ಜೆಎಂಎಫ್​ ಕೋರ್ಟ್​​ನ ನ್ಯಾಯಾಧೀಶರು ಸೆಪ್ಟಂಬರ್​ 5ಕ್ಕೆ ಮುಂದೂಡಲಾಗಿದೆ.

ಕೋಲಾರದ ಸೈನಡ್​ ಗುಡ್ಡದ ಮೇಲೆ ರಾಕಿಂಗ್ ಸ್ಟಾರ್​ ಯಶ್​ ಅಭಿನಯದ ಕೆ.ಜಿ.ಎಫ್​ ಪಾರ್ಟ್​-2 ಸಿನಿಮಾ ಚಿತ್ರಿಕರಣ ಮಾಡಲಾಗುತ್ತಿದೆ. ಚಿತ್ರದ ಶೂಟಿಂಗ್​ಗಾಗಿ ಬೃಹತ್​ ಗಾತ್ರದ ಸೆಟ್​ಗಳನ್ನು ನಿರ್ಮಿಸಲಾಗಿತ್ತು. ಆದರೆ, ಇತ್ತೀಚೆಗೆ ಸುರಿದ ಭಾರೀ ಮಳೆಗೆ ಶೂಟಿಂಗ್​ಗಾಗಿ ನಿರ್ಮಿಸಲಾಗಿದ್ದ ಸೆಟ್​ ನಾಶವಾಗಿದೆ. ಇದರಿಂದಾಗಿ ಅಲ್ಲಿನ ಗಿಡ, ಮರಗಳಿಗೆ ಹಾನಿಯಾಗಿದ್ದು, ಆ ಭಾಗದ ಜನರಿಗೆ ತೊಂದರೆಯುಂಟಾಗಿದೆ ಎಂದು ರಾಷ್ಟ್ರೀಯ ಪ್ರಜಾ ಚಕ್ರವ್ಯೂಹ ಪಕ್ಷದ ಅಧ್ಯಕ್ಷ್ಯ ಶ್ರೀನಿವಾಸ್ ಸಿವಿಲ್​ ನ್ಯಾಯಾಲಯಕ್ಕೆ ದೂರು ನೀಡಿದ್ದರು.

ಕೆ.ಜಿ.ಎಫ್​ ಚಿತ್ರ ತಂಡದ ಪರವಾಗಿ ವಕೀಲರಾದ ಎಚ್​. ಶಾಂತಿಭೂಷಣ್​ ಅವರು ಶನಿವಾರದಂದು ವಾದ ಮಂಡಿಸಿದ್ದಾರೆ. ಚಿತ್ರಿಕರಣಕ್ಕೆ ಸಂಬಂಧಿಸುವಂತೆ ವಿಚಾರಣೆಯನ್ನು ನಡೆಸುವ ಅಧಿಕಾರ ಸಿವಿಲ್​ ನ್ಯಾಯಾಲಯಕ್ಕೆ ಇಲ್ಲ ಎಂದು ಹೇಳಿದ್ದಾರೆ.

ಈ ಪ್ರಕರಣ ಸಾರ್ವಜನಿಕ ಹಿತಾಸಕ್ತಿಗೆ ಒಳಪಡುವುದರಿಂದ ಬೇರೆ ನ್ಯಾಯಪೀಠದಲ್ಲಿ ವಿಚಾರಣೆ ನಡೆಸಬೇಕಾಗಿತ್ತು. ಚಿತ್ರತಂಡವು ಚಿತ್ರೀಕರಣ ನಡೆಸಿದ ಸ್ಥಳ ಭಾರತ್​ ಗೋಲ್ಡ್​ ಮೈನ್ಸ್​ ಲಿಮಿಟೆಡ್​ಗೆ ಸೇರಿದೆ. ಹೊಂಬಾಳೆ ಚಿತ್ರತಂಡಕ್ಕೆ ​ಬಿಜಿಎಂಎಲ್​ ಮುಖ್ಯ ಭದ್ರತಾ ಅಧಿಕಾರಿ ಚಿತ್ರೀಕರಣ ನಡೆಸಲು ಅನುಮತಿಯನ್ನು ನೀಡಿದ್ದಾರೆ. ಕಂಪನಿ ಆಸ್ತಿ ನಷ್ಟವಾದರೆ, ಅದನ್ನು ಭರಿಸಲು ಚಿತ್ರತಂಡ ತಯಾರಿಗೆ. ಅದಕ್ಕಾಗಿ 5 ಲಕ್ಷ ರೂ ಠೇವಣೆ ಇಡಲಾಗಿದೆ ಎಂದರು.

ನಿರ್ಜನ ಪ್ರದೇಶದಲ್ಲಿ ಚಿತ್ರಿಕರಣವನ್ನು ನಡೆಸಲಾಗುತ್ತಿದೆ. ಯಾವುದೇ ಮರಗಳನ್ನು ಕಡಿದಿಲ್ಲ. ದಿನದ ಬಾಡಿಗೆ ಆಧಾರದಲ್ಲಿ ಚಿತ್ರಿಕರಣ ಮಾಡಲಾಗುತ್ತಿದೆ. ಅರ್ಜಿದಾರರು ನ್ಯಾಯಾಲಯವನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ ಎಂದು ಚಿತ್ರತಂಡದ ಪರ ವಕೀಲರು ಆರೋಪಿಸಿದ್ದಾರೆ.

ಕಾನೂನು ಉಲ್ಲಂಘಿಸದೆ ಚಿತ್ರಿಕರಣವನ್ನು ಮಾಡಿದ್ದೇವೆ. ಪೋಲಿಸ್​ ಇಲಾಖೆಗೆ ರೂ. 1,20,500 ನೀಡಲಾಗಿದೆ. ಅರ್ಜಿದಾರರು ಹಣ ಕೀಳುವುದಕ್ಕಾಗಿ ಈ ರೀತಿಯ ತಂತ್ರವನ್ನು ರೂಪಿಸಿದ್ದಾರೆ ಎಂದು ದೂರಿದ್ದಾರೆ.

Comments are closed.