ಕರ್ನಾಟಕ

ಡಿಕೆಶಿ ಇಡಿ ಸಂಕಷ್ಟ ಕುರಿತು ಕುಮಾರಸ್ವಾಮಿ ಹೇಳಿದ್ದು ಹೀಗೆ..?

Pinterest LinkedIn Tumblr


ಬೆಂಗಳೂರು: ಮಾಜಿ ಸಚಿವ ಡಿ.ಕೆ ಶಿವಕುಮಾರ್ ಇಡಿ ಅಧಿಕಾರಿಗಳ ಬಳಿ ಹಬ್ಬಕ್ಕೆ ಅನುಮತಿ ಕೇಳಿದ್ದರು ಆದರೆ ಇಡಿ ಅಧಿಕಾರಿಗಳು ಬಿಟ್ಟಿಲ್ಲ ಎಂದು ಅಧಿಕಾರಿಗಳ ವಿರುದ್ದ ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಆಕ್ರೋಶ ಹೊರಹಾಕಿದರು.

ಶಿವಕುಮಾರ್​ ಪರ ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಡಿದ್ದು, ಗೌರಿ ಗಣೇಶ ಹಬ್ಬ ಹಿಂದೂಗಳ ಅತ್ಯಂತ ಮುಖ್ಯ ಹಬ್ಬಇಂತಹ ಹಬ್ಬಕ್ಕೆ ಅನುಮತಿ ಕೇಳಿದರು ಅವರನ್ನು ಬಿಟ್ಟಿಲ್ಲ, ಹಬ್ಬಕ್ಕೆ ಕಳಿಸಲು ನಿರಾಕರಿಸಿದ್ದಾರೆ. ಇದು ದ್ವೇಷದ ಮನೋಭಾವವಲ್ಲದೆ ಇನ್ನೇನು? ಎಂದು ಅಧಿಕಾರಿಗಳನ್ನು ಪ್ರಶ್ನೆ ಮಾಡಿದ್ದಾರೆ.

ನಂತರ ಇದೇ ವೇಳೆ ತಮ್ಮ ಟ್ವೀಟರ್​​ನಲ್ಲಿ ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. ಪರಿಸರ ಸ್ನೇಹಿಯಾಗಿ ಹಬ್ಬವನ್ನು ಆಚರಿಸುವ ಮೂಲಕ ಎಲ್ಲರಿಗೂ ಮಾದರಿಯಾಗೋಣ. ವಿಘ್ನ ವಿನಾಶಕ ಎಲ್ಲರ ಬಾಳಲ್ಲೂ ಸುಖ, ಸಂತೋಷ, ಸಮೃದ್ಧಿಯನ್ನು ತರಲಿ ಎಂದು ನಾಡಿನ ಜನತೆಗೆ ಶುಭಾಶಯವನ್ನು ತಿಳಿಸಿದ್ದಾರೆ.

Comments are closed.