ಮನೋರಂಜನೆ

ಕೆಜಿಎಫ್ ಶೂಟಿಂಗ್​​​​ ಮುಗಿಯೋಕ್ಕೆ ಇನ್ನೆರಡೇ ದಿನ ಬಾಕಿ ಇತ್ತು..!

Pinterest LinkedIn Tumblr


ಒಂದೊಂದು ಸಲ ಹಿಂಗೆಲ್ಲ ಅನ್ಸಿಬಿಡುತ್ತೆ ; ಸಿನಿಮಾ ದೊಡ್ಡದಾ..? ಸ್ಟಾರ್ ದೊಡ್ಡೋರಾ ಅಂತ. ಯಾಕೆಂದ್ರೆ ಒಂದು ಸಿನಿಮಾ ಏನೆನೆಲ್ಲಾ ಮಾಡ್ಸುತ್ತೆ ನೋಡಿ. ಕನ್ನಡ ಸಿನಿಮಾಗಳು ನಾಡಿನ ಗಡಿದಾಟೋದಕ್ಕೆ ಪರದಾಡುತ್ತಿದ್ದ ಕಾಲದಲ್ಲಿ ಏಳು ಸಮುದ್ರ ದಾಟಿ ಸದ್ದು ಮಾಡಿತು ಕನ್ನಡದ ಕೆಜಿಎಫ್​​. ಕೆಜಿಎಫ್ ಸಾಧನೆಯಿಂದ ರಾಕಿಂಗ್ ಸ್ಟಾರ್​​​ಗೆ ಮಗದೊಂದು ಪ್ರಶಸ್ತಿ ದಕ್ಕಿದೆ. ಜೊತೆಗೆ ಇದೆ ಕೆಜಿಎಫ್​​​​​ಗೆ ಸಂಕಷ್ಟವೂ ಎದುರಾಗಿದೆ.

ಇದು ಸಿಹಿ ಮತ್ತು ಕಹಿ ಮಿಶ್ರಿತ ; ಸಂಭ್ರಮ ಮತ್ತು ಸಂಕಷ್ಟದ ಸ್ಟೋರಿ. ‘ಕೆಜಿಎಫ್’​ ಅನ್ನೊ ಚಿನ್ನದ ಕನ್ನಡ ಸಿನಿಮಾಗೆ ಸಾಲು ಸಾಲು ಪ್ರತಿಷ್ಠಿತ ಪ್ರಶಸ್ತಿಗಳು ನಾ ಮುಂದು ತಾ ಮುಂದು ಎಂದುಕೊಂಡು ಬರುತ್ತಿವೆ. ಎರಡು ರಾಷ್ಟ್ರ ಪ್ರಶಸ್ತಿ , ನಾಲ್ಕು ಫಿಲ್ಮ್ ಫೇರ್​​ನ ನಂತರ ಈಗ ‘ಕೆಜಿಎಫ್’​ ಬಳಗಕ್ಕೆ ಮಗದೊಂದು ಹೆಮ್ಮೆಯ ಪ್ರಶಸ್ತಿ ಸಂದಿದೆ.

‘ಕೆಜಿಎಫ್’​ ಅನ್ನೋ ವಾವ್ ಫ್ಯಾಕ್ಟರ್ ಗಾಂಧಿನಗರದಿಂದ ಹಿಡಿದು ದೇಶದ ಮಾಯಾನಗರಿಯಲ್ಲಿಯೂ ಸದ್ದು ಗದ್ದಲ ಮಾಡಿದ್ದ ಮತ್ತು ಮಾಡುತ್ತಿರುವ ಸಿನಿಮಾ. ಈ ಗೋಲ್ಡನ್​​ ಮೂವಿಯ ಸೆಂಟರ್​​ಆಫ್​ ದಿ ಫೇಸ್​​ ರಾಕಿಂಗ್ ಸ್ಟಾರ್ ಯಶ್​​. ರಾಕಿ ಭಾಯ್ ಈಗ ನ್ಯಾಷನಲ್ ಸ್ಟಾರ್​​​. ಒಂದೇ ಜಿಗಿತದಲ್ಲಿ ಆಕಾಶದ ಹೊಳೆಯುವ ನಕ್ಷತ್ರವಾಗಿ ಬಿಟ್ರು. ಈಗ ಈ ಸಾಧನೆಯನ್ನು ಮೆಚ್ಚಿ ದಕ್ಷಿಣ ಭಾರತದ ‘ದಾದಾ ಸಾಹೇಬ್ ಅಕಾಡಮಿ’ ಸಂಸ್ಥೆ ಯಶ್​ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಸೌತ್​ ಇಂಡಿಯಾ 2019 ಪ್ರಶಸ್ತಿ ಘೋಷಿಸಿದೆ.

ಈ ಪ್ರಶಸ್ತಿ ಸಮಾರಂಭ ಮುಂದಿನ ತಿಂಗಳು ಅಂದ್ರೆ ಸೆಪ್ಟೆಂಬರ್ 20ನೇ ತಾರಿಕು ಹೈದ್ರಾಬಾದ್​​ನಲ್ಲಿ ಜರುಗಲಿದೆ. ದಾದಾ ಸಾಹೇಬ್ ಫಾಲ್ಕೆ ಸೌತ್ ಇಂಡಿಯಾ 2019 ಅವಾರ್ಡ್​​ಗೆ ಯಶ್ ಮುತ್ತಿಡಲಿದ್ದಾರೆ.

ಇದು ರಾಕಿಂಗ್ ಸ್ಟಾರ್ ಯಶ್ ಡೈಹಾರ್ಡ್ ಫ್ಯಾನ್ಸ್​ಗಳಿಗೆ ನಿಜಕ್ಕೂ ಹೆಮ್ಮೆಯ ಮತ್ತು ಸಂಭ್ರಮದ ವಿಚಾರ. ಆದ್ರೆ ಅದೇ ಅಭಿಮಾನಿಗಳಿಗೆ ಕೊಂಚ ಬೇಸರದ ಸಮಾಚಾರವು ಇದೆ. ಅದೇ ಕೆಜಿಎಫ್ -2 ಚಿತ್ರೀಕರಣಕ್ಕೆ ಸ್ಟೇ ಸಿಕ್ಕಿರುವುದು.

ನೈಜವಾಗಿ ಚಿತ್ರೀಕರಣ ಮಾಡಿದ್ದಕ್ಕೆ ಕೆಜಿಎಫ್ ಸಿನಿಮಾ ದೇಶವ್ಯಾಪಿ ಖ್ಯಾತಿಗಳಿಸಿದ್ದು. ಕೆಜಿಎಫ್ ಗಣಿಗಾರಿಕೆಯ ಪ್ರದೇಶದಲ್ಲಿಯೇ ಸ್ಪೆಷಲ್ ಸೆಟ್​ ಹಾಕಿ ಹೊಸ ಲೋಕವನ್ನೇ ಸೃಷ್ಟಿಸಿ ಬಿಡ್ತು ಕೆಜಿಎಫ್ ಫಿಲ್ಮ್ ಟೀಮ್​​​. ಇನೇನು ಎರಡು ದಿನ ಶೂಟಿಂಗ್ ಮುಗಿದು ಹೋಗಿದ್ರೆ ಕೆಜಿಎಫ್ ಎರಡನೇ ಭಾಗದ ಕೆಜಿಎಫ್​​ನ ಚಿತ್ರೀಕರಣ ಮುಗಿದು ಬಿಡುತ್ತಿತ್ತಂತೆ. ಆದ್ರೆ ನ್ಯಾಯಲಯ ತಕ್ಷಣವೇ ಶೂಟಿಂಗ್ ನಿಲ್ಲಿಸುವಂತೆ ಆದೇಶ ಕೊಟ್ಟಿದೆ.

ಕೆಜಿಎಫ್ ಶೂಟಿಂಗ್​​ಗೆ ತಡೆಯಾಜ್ಞೆ ಕಾರಣವೇನು ಅನ್ನೋದಕ್ಕೆ ಉತ್ತರ ಶ್ರೀನಿವಾಸ್ ಎಂಬುವವರು. ಶ್ರೀನಿವಾಸ್ ಅನ್ನೋರು ಕೆಜಿಎಫ್​ ಶೂಟಿಂಗ್ ನಿಲ್ಲಿಸಲು ತಡೆಯಾಜ್ಞೆಯನ್ನು ತಂದಿದ್ದಾರೆ.

ಸೈನೆಡ್ ಗುಡ್ಡ. ಇದು ಕೋಲಾರ ಗೋಲ್ಡ್ ಫಿಲ್ಡ್​​ನ ಒಂದು ಜಾಗ. ಈ ಜಾಗದಲ್ಲಿಯೇ ಕೆಜಿಎಫ್ ಸೆಟ್ ಹಾಕಿರೋದು. ಈ ಜಾಗದಲ್ಲಿ ಯೂರೇನಿಯಮ್ ಅಂಶದ ಮಣ್ಣಿದೆ. ಈ ಸೈನೆಡ್ ಗುಡ್ಡವನ್ನು ಅಗೆದ್ದಿದಾರೆ , ಗಿಡಗಳನ್ನು ಹಾಳು ಮಾಡಿದ್ದಾರೆ ಮತ್ತು ಕೆಜಿಎಫ್ ಅಂತ ಬೇರೆ ಯಾವ್ದೊ ಕಥೆಯನ್ನು ಜಗತ್ತಿಗೆ ಹೇಳುತ್ತಿದ್ದಾರೆ ಅನ್ನೋ 3 ಕಾರಣಗಳನ್ನು ಕೊಟ್ಟು ಶ್ರೀನಿವಾಸ್ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ.

ಕೋರ್ಟ್‌ನಿಂದ ಸ್ಟೇ ಆರ್ಡರ್​​​ ಬಂದಿರೋದ್ರಿಂದ ಕೆಜಿಎಫ್-2 ಶೂಟಿಂಗ್ ನಿಂತಿದೆ. ಆದ್ರೆ ಸ್ಥಳೀಯ ಕೂಲಿ ಕಾರ್ಮಿಕರಿಗೆ ಇದರಿಂದ ದೊಡ್ಡ ಹೊಡೆತ ಬಿದಿದೆ. ಇಷ್ಟು ದಿನ ಶೂಟಿಂಗ್ ಇದ್ದ ಕಾರಣ ನಮಗೆ ಮೂರೊತ್ತು ಊಟ ಮತ್ತು ಸಂಬಳ ಸಿಗುತ್ತಿತ್ತು , ಶೂಟಿಂಗ್ ನಿಂತರೆ ನಮಗ್ಯಾರು ಕೆಲಸ ಕೋಡೋರು ಎಂದು ಪ್ರತಿಭಟಿಸಿದ್ದಾರೆ ಅಲ್ಲಿನ ಸ್ಥಳೀಯರು.

ಇನ್ನು ಎರಡು ದಿನ ಶೂಟಿಂಗ್ ಇತ್ತು ಎಂದು ಹೇಳಿಕೊಂಡಿರುವ ಚಿತ್ರತಂಡ ಮುಂದೇನು ಮಾಡುತ್ತದೆ..? ಸ್ಥಳೀಯರ ಪ್ರತಿಭಟನೆಗೆ ಜಯ ಸಿಗುತ್ತಾ..? ಕೆಜಿಎಫ್ ಚಿತ್ರತಂಡ ತಡೆಯಾಜ್ಞೆಯನ್ನು ಪ್ರಶ್ನಿಸಿ ಕೋರ್ಟ್ ಮೋರೆ ಹೋಗುತ್ತಾ..? ಇವೆಲ್ಲ ಪ್ರಶ್ನೆಗಳಿಗೆ ಕಾಲವೇ ಉತ್ತರ ಕೊಡಬೇಕು.

Comments are closed.