
ಹೊಸದಿಲ್ಲಿ: ಮುಘಲ್ ದೊರೆ ಬಾಬರ್ ಅಯೋಧ್ಯೆಯಲ್ಲಿ 1528ರಲ್ಲಿ ರಾಮ ಮಂದಿರವನ್ನು ಕೆಡವಿ ಮಸೀದಿಯನ್ನು ನಿರ್ಮಿಸಿಲ್ಲ. ಹೀಗಾಗಿ ಮಸೀದಿ ನಮ್ಮದು ಎಂಬ ಮುಸ್ಲಿಂ ದಾವೆದಾರರ ವಾದವೇ ಹುಸಿ ಎಂದು ಅಖೀಲ ಭಾರತೀಯ ಶ್ರೀ ರಾಮ ಜನ್ಮಭೂಮಿ ಪುನರುದ್ಧಾರ ಸಮಿತಿಯ ಪರ ವಕೀಲ ಪಿ.ಎನ್.ಮಿಶ್ರಾ ಸುಪ್ರೀಂಕೋರ್ಟ್ ನಲ್ಲಿ ಬುಧವಾರ ವಾದಿಸಿದ್ದಾರೆ.
ಅಯೋಧ್ಯೆ ರಾಮಜನ್ಮಭೂಮಿ ಪ್ರಕರಣದಲ್ಲಿ ವಾದ ಮಂಡಿಸಿದ ಅವರು, ಪಿ.ಎನ್ ಮಿಶ್ರಾ, ಬಾಬರ್‌ನಾಮಾ, ಹೂಮಾಯೂನ್‌ನಾಮಾ ಹಾಗೂ ಅಕºರ್‌ನಾಮಾ ಸೇರಿದಂತೆ ಹಲವು ಪುಸ್ತಕಗಳನ್ನು ಉಲ್ಲೇಖೀಸಿದರು. ಬಾಬರ್‌ನಾಮಾ ಪುಸ್ತಕದಲ್ಲಿ ದೇಗುಲವನ್ನು ಧ್ವಂಸಗೊಳಿಸಿರುವುದಾಗಲೀ ಅಥವಾ ಬಾಬ್ರಿ ಮಸೀದಿಯನ್ನು ನಿರ್ಮಿಸಿರುವುದಾಗಲೀ ಉಲ್ಲೇಖವಾಗಿಲ್ಲ. ಅಷ್ಟೇ ಅಲ್ಲ, ಬಾಬರ್‌ನಿಗೆ ಮೀರ್ ಬಾಕಿ ಎಂಬ ಕಮಾಂಡರ್ ಇರಲಿಲ್ಲ ಎಂದೂ ಅವರು ಹೇಳಿದ್ದಾರೆ. ಬದಲಿಗೆ ಅಯೋಧ್ಯೆಯನ್ನು ಧ್ವಂಸಗೊಳಿಸಿದ್ದು ಹಾಗೂ ಬಾಬ್ರಿ ಮಸೀದಿಯನ್ನು ನಿರ್ಮಿಸಿದ್ದು ಔರಂಗಜೇಬ ಎಂದು ಮಿಶ್ರಾ ವಾದಿಸಿದ್ದಾರೆ. ಔರಂಗಜೇಬ ಕಾಶಿ, ಮಥುರಾ ದೇಗುಲಗಳನ್ನು ಧ್ವಂಸಗೊಳಿಸಿದ ರೀತಿಯಲ್ಲೇ ಅಯೋಧ್ಯೆಯನ್ನೂ ಧ್ವಂಸಗೊಳಿಸಿದ್ದಾನೆ. ಹೀಗಾಗಿ ಮುಸ್ಲಿಂ ಸಮುದಾಯದ ದಾವೆಯಲ್ಲೇ ದೋಷವಿದ್ದು, ಅದನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
Comments are closed.