ಮನೋರಂಜನೆ

ಆಸ್ತಿಯನ್ನು ಎರಡು ಪಾಲು ಮಾಡ್ತಾರಂತೆ ಅಮಿತಾಬ್ ಬಚ್ಚನ್​!

Pinterest LinkedIn Tumblr


ತಂದೆಯ ಸಮಸ್ತ ಆಸ್ತಿ ಗಂಡು ಮಗನ ಪಾಲಾಗೋದು ಸಾಮಾನ್ಯವಾದ ನಿಯಮ. ಆದರೆ ಬಾಲಿವುಡ್​ ಬಿಗ್​ ಬೀ ಅಮಿತಾಬ್ ಬಚ್ಚನ್​ ಮಾತ್ರ ತಮ್ಮ ಸಮಸ್ತ ಆಸ್ತಿಯನ್ನು ಎರಡು ಪಾಲು ಮಾಡ್ತಿದ್ದಾರಂತೆ. ಹೌದು ಈ ವಿಚಾರವನ್ನು ಸ್ವತಃ ಬಿಗ್ ಬಿ ಹೇಳಿಕೊಂಡಿದ್ದಾರೆ. ಇಷ್ಟಕ್ಕೂ ಇನ್ನೊಂದು ಪಾಲು ಯಾರಿಗೆ ಅಂದ್ರಾ ಇಲ್ಲಿದೆ ಇಂಟ್ರಸ್ಟಿಂಗ್ ಸ್ಟೋರಿ.

ಬಾಲಿವುಡ್​ನ ಬಿಗ್​ ಬಿಯಾಗಿ ದಶಕಗಳ ಕಾಲ ಹಿಂದಿಚಿತ್ರರಂಗದ ಅನಭಿಷಿಕ್ತ ದೊರೆಯಾಗಿ ಮೆರೆದ ಬಿಗ್ ಬಿ ನೂರಾರು ಯಶಸ್ವಿ ಚಿತ್ರಗಳಿಂದ ಕೋಟ್ಯಾಂತರ ರೂಪಾಯಿ ಆಸ್ತಿ ಗಳಿಸಿದ್ದಾರೆ. ಈ ಆಸ್ತಿ ಎಲ್ಲ ಬಿಗ್ ಬಿ ಬಳಿಕ ಅಭಿಷೇಕ್ ಬಚ್ಚನ್​ ಪಾಲಾಗುತ್ತೆ ಅಂತ ಎಲ್ಲರೂ ಮಾತಾಡಿಕೊಳ್ತಿದ್ದರು. ಆದರೆ ಇದೀಗ ನನ್ನ ಆಸ್ತಿಯಲ್ಲಿ ಸಮಾನವಾದ ಎರಡು ಪಾಲಿದೆ ಎನ್ನುವ ಮೂಲಕ ಬಿಗ್ ಬಿ ಅಮಿತಾಬ್ ಬಚ್ಚನ್​ ಅಚ್ಚರಿ ಮೂಡಿಸಿದ್ದಾರೆ.

ಅಮಿತಾಬ್ ಬಚ್ಚನ್​ ಗೆ, ಅಭಿಷೇಕ್​ ಬಚ್ಚನ್ ಜೊತೆ ಶ್ವೇತಾ ಎಂಬ ಮಗಳಿದ್ದಾರೆ. ಮಗ ಹಾಗೂ ಮಗಳು ಇಬ್ಬರೂ ಸಮಾನರು ಎಂದಿರುವ ಬಿಗ್ ಬಿ ತಮ್ಮ ಸಮಸ್ತ ಆಸ್ತಿಯನ್ನು ಎರಡು ಭಾಗ ಮಾಡಲು ನಿರ್ಧರಿಸಿದ್ದಾರಂತೆ.

ಶ್ವೇತಾ ಬರೆದ ಮೊದಲ ಕಾದಂಬರಿ ಪ್ಯಾರಡೈಸ್​ ಟವರ್ಸ್ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಬಿಗ್ ಬಿ ಅಭಿಷೇಕ್ ಒಬ್ಬರೇ ನನ್ನ ಆಸ್ತಿಗೆ ಒಡೆಯರಲ್ಲ. ಅದರಲ್ಲಿ ಶ್ವೇತಾಗೂ ಸಮಾನವಾದ ಪಾಲಿದೆ ಎಂದಿದ್ದಾರೆ. ಅಲ್ಲದೇ ಹೆಣ್ಣುಮಕ್ಕಳು ಮಾಡೋ ಸಾಧನೆಗಳಿಗಿಂತ ಹೆಮ್ಮೆಯ ಸಂಗತಿ ತಂದೆಗೆ ಬೇರೆ ಇಲ್ಲ ಎಂದಿದ್ದಾರೆ.

Comments are closed.