
ಬೆಂಗಳೂರು: ಗಾಂಜಾ ಮಾರಾಟಗಾರರ ಸಂಖ್ಯೆ ಏನೂ ಕಮ್ಮಿ ಇಲ್ಲ, ನಶೆಯಲ್ಲಿ ನಡೆಯೋ ಕ್ರೈಮ್‌ಗಳೂ ಅಷ್ಟೇ ಹೆಚ್ಚಿವೆ. ಇದೇ ರೀತಿ ಗಾಂಜಾ ಗ್ಯಾಂಗ್‌ನ ಅರೆಸ್ಟ್ ಮಾಡಲು ಹೋದ ಪೊಲೀಸರು ಏಟ್ ತಿಂದು ವಾಪಸ್ ಆಗಿದ್ದಾರೆ.
ಇದು ನಗರದ ಬೊಮ್ಮನಹಳ್ಳಿ ಪೊಲೀಸ್ ಸ್ಟೇಷನ್. ಎರಡು ದಿನಗಳ ಹಿಂದೆ ತಮಿಳುನಾಡು ಮೂಲದ ಜೋನಪ್ಪ ಎಂಬ ಆರೋಪಿಯನ್ನು ಪೊಲೀಸರು ಕರೆತಂದಿದ್ದರು. ಆತನ ಕೈಯಲ್ಲಿ ಹದಿನೈದು ಕೆ.ಜಿ.ಯಷ್ಟು ಗಾಂಜಾ ಸಿಕ್ಕಿತ್ತು. ಹೊಂಗಸಂದ್ರದ ಗಲ್ಲಿಯಲ್ಲಿ ಗಾಂಜಾ ಮಾರಾಟಕ್ಕೆ ಬಂದಿದ್ದ ವೇಳೆ ಜೋನಪ್ಪ ಸಿಕ್ಕಿಬಿದ್ದಿದ್ದನಂತೆ. ಆರೋಪಿಯ ಬಳಿಯೇ ಇಷ್ಟು ಪ್ರಮಾಣದ ಗಾಂಜಾ ಸಿಕ್ಕಿದೆ ಅಂದರೆ ಆತನ ಬ್ಯಾಕ್ ಗ್ರೌಂಡ್ ಏನಿರಬಹುದು ಅಂತ ಸಬ್ ಇನ್ಸ್‌ಪೆಕ್ಟರ್ ಶಿವಪ್ಪ ಲೆಕ್ಕಾಚಾರ ಹಾಕಿದ್ದರು.
ಅದರಂತೆ ಜೋನಪ್ಪನನ್ನು ಕರೆದುಕೊಂಡು ಏಳು ಜನರ ಕ್ರೈಂ ಟೀಂ ನೇರವಾಗಿ ಹೊಸೂರಿನ ಬೇರಿಕೆ ಬಳಿಯ ತೀರ್ಥಂ ಎಂಬ ಹಳ್ಳಿಗೆ ಎಂಟ್ರಿ ಕೊಟ್ಟಿತ್ತು. ಇದೇ ವೇಳೆ ಜೋನಪ್ಪನ ಇನ್ನೊಬ್ಬ ಪಾರ್ಟರ್‌ನ ಹೆಡೆಮುರಿ ಕಟ್ಟಲು ಪೊಲೀಸರು ಮುಂದಾಗಿದ್ದರು. ಅದರಂತೆ ಕ್ರೈಂ ಸಿಬ್ಬಂದಿ ಆರೋಪಿಗಳನ್ನು ಕರ್ಕೊಂಡು ಬೆಂಗಳೂರಿನತ್ತ ಬರ್ತಿದರು.
ಈ ವೇಳೆ ಪೊಲೀಸರು ತಮ್ಮ ಗ್ಯಾಂಗ್‌ನ ಮೆಂಬರ್‌ಗಳನ್ನು ಅರೆಸ್ಟ್ ಮಾಡಿ ಕರೆದೊಯ್ತಾರೆ ಅನ್ನೋ ವಿಚಾರ ಅಲ್ಲಿದ್ದ ಗಾಂಜಾ ಗ್ಯಾಂಗ್‌ಗೆ ತಿಳಿದಿದೆ. ತಕ್ಷಣ ದೊಣ್ಣೆ ಹಿಡಿದು ಬಂದ ನಟೋರಿಯಸ್ ಗಾಂಜಾ ಗ್ಯಾಂಗ್‌ನ ವ್ಯಕ್ತಿಗಳು ಏಕಾಏಕಿ ಬೊಮ್ಮನಹಳ್ಳಿ ಪೊಲೀಸರ ಮೇಲೆ ದಾಳಿಯನ್ನು ನಡೆಸಿದೆ. ಏಳು ಮಂದಿ ಪೊಲೀಸರ ಮೇಲೆ ಐವತ್ತಕ್ಕೂ ಹೆಚ್ಚು ನಟೋರಿಯಸ್ ವ್ಯಕ್ತಿಗಳು ಹಲ್ಲೆ ನಡೆಸಿದ್ದರು.
ಗಾಂಜಾ ಗ್ಯಾಂಗ್‌ನ ಅಟ್ಯಾಕ್‌ನಲ್ಲಿ ಮುಖ್ಯಪೇದೆಗಳಾದ ರಾಮಚಂದ್ರ ಜಾಗೂ ರಾಮಲಿಂಗೇಗೌಡ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹೀಗಾಗಿ ಸಬ್ ಇನ್ಸ್‌ಪೆಕ್ಟರ್ ಶಿವಪ್ಪ ಗಾಳಿಯಲ್ಲಿ ಗುಂಡು ಹಾರಿಸಿ ಗಾಂಜಾ ಗ್ಯಾಂಗನ್ನು ಹೆದರಿಸಿ ಓಡಿಸಿದರು. ನಂತರ ಬಂದ ದಾರಿಗೆ ಸುಂಕವಿಲ್ಲ ಅನ್ನೋ ರೀತಿ ಬೆಂಗಳೂರಿಗೆ ಬಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿದ್ದಾರಂತೆ.
ಕಾನೂನು ಕಾಪಾಡೋ ಪೊಲೀಸರ ಮೇಲೆಯೇ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಸರ್ಕಾರ ಕೆಳ ಹಂತದ ಪೊಲೀಸ್ ಸಿಬ್ಬಂದಿಯ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರಿಂದಲೇ ಪೊಲೀಸ್ ಸಿಬ್ಬಂದಿಗೆ ರಕ್ಷಣೆಯೇ ಇಲ್ಲದಂತಾಗಿದೆ. ಮುಂದಾದರು ಸರ್ಕಾರ ಕೆಳಹಂತಹ ಪೊಲೀಸರಿಗೆ ಲಾಠಿ ಬದಲು ರಿವಾಲ್ವಾರ್ ನೀಡಿದರೆ ಕ್ರೈಂ ರೇಟ್ ಕಡಿಮೆಯಾಗೋದರೆ ಜೊತೆ ಪೊಲೀಸರು ಸೇಫಾಗಿ ಇರ್ತಾರೆ.
Comments are closed.