ರಾಷ್ಟ್ರೀಯ

ಅತ್ಯಾಚಾರದ ವಿಡಿಯೋ ತೋರಿಸಿ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ!

Pinterest LinkedIn Tumblr


ನವದೆಹಲಿ(ಆಗಸ್ಟ್​​​​​.16): ಅತ್ಯಾಚಾರದ ವಿಡಿಯೋ ತುಣುಕೊಂದನ್ನು ತೋರಿಸಿ ಬಾಲಕಿಯೋರ್ವಳ ಮೇಲೆ ಸತತ 4 ವರ್ಷಗಳ ಕಾಲ ಲೈಂಗಿಕ ಕಿರುಕಿಳ ನೀಡಿರುವ ಘಟನೆ ಹೈದರಾಬಾದ್​​ನಲ್ಲಿ ನಡೆದಿದೆ. 16 ವರ್ಷದ ಬಾಲಕಿಗೆ ಎಂಟು ಮಂದಿ ಪಾಪಿಗಳು, ಲೈಂಗಿಕ ಕಿರುಕುಳ ನೀಡಿ ಅತ್ಯಚಾರ ಎಸಗಿರುವ ಕೃತ್ಯವೀಗ ಬೆಳಕಿಗೆ ಬಂದಿದೆ.

ಕಳೆದ ನಾಲ್ಕು ವರ್ಷಗಳ ಹಿಂದೆ ಬಾಲಕಿ ಮೇಲೆ ಆಕೆಯ ಕುಟುಂಬಸ್ಥನೋರ್ವ ಅತ್ಯಾಚಾರ ಎಸಗಿದ್ದ. ಇದನ್ನು ವಿಡಿಯೋ ಮಾಡಿ ತನ್ನ ಸ್ನೇಹಿತರಿಗೂ ಕಳಿಸಿದ್ದ. ಇದೇ ವಿಡಿಯೋ ತುಣುಕು ತೋರಿಸಿ, ಆತನ ಸ್ನೇಹಿತರು ಕೂಡ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದಾರೆ. ಅಲ್ಲದೇ ಯಾರಿಗೂ ಹೇಳದಂತೆ ಕಿರುಕುಳ ನೀಡುತ್ತಾ, ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಪೊಲೀಸ್​​ ಮೂಲಗಳು ತಿಳಿಸಿವೆ.

ವಿಡಿಯೋ ಮೂಲಕ ಬೆದರಿಕಿ ನಾಲ್ಕು ವರ್ಷಗಳ ಕಾಲ ಲೈಂಗಿಕ ಕಿರುಕುಳ ನೀಡಿದ ಪಾಪಿಗಳಿಂದ ಬಾಲಕಿ ಬೇಸತ್ತು ಹೋಗಿದ್ದಾಳೆ. ಬೇಸತ್ತ ಕೂಡಲೇ ಕಳೆದ ತಿಂಗಳು ಹೈದರಾಬಾದ್‍ನ ಭರೋಸಾ ಕೇಂದ್ರಕ್ಕೆ ತೆರಳಿ ತನ್ನ ಅಳಲನ್ನು ತೋಡಿಕೊಂಡಿದ್ದಾಳೆ. ಇದೀಗ ಬಾಲಕಿಯ ದೂರಿನ ಮೇರೆಗೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ತನ್ನ ಸಂಬಂಧಿಯೊಬ್ಬ ಆಕೆಯನ್ನು ಮನೆಯ ಮೇಲಿನ ಮಹಡಿಗೆ ಕರೆದೊಯ್ದಿದ್ದಾನೆ. ಅಲ್ಲದೇ ಕುಡಿಯುವ ಜ್ಯೂಸ್‍ನಲ್ಲಿ ಬರುವ ಮಿಶ್ರಣವನ್ನು ಬೆರೆಸಿ ಕೊಟ್ಟಿದ್ದಾನೆ. ಇದನ್ನು ಕುಡಿದ ಈಕೆ ಪ್ರಜ್ಙೆತಪ್ಪಿ ಬಿದ್ದಿದ್ದಾಳೆ. ಇದೇ ವೇಳೆ ಅತ್ಯಾಚಾರ ಎಸಗಿದ ಸಂಬಂಧಿ, ವಿಡಿಯೋ ಮಾಡಿ ಸ್ನೇಹಿತರಿಗೆ ಕಳಿಸಿದ್ಧಾನೆ ಎಂದು ದೂರಿನಲ್ಲಿ ಬಾಲಕಿ ಉಲ್ಲೇಖ ಮಾಡಿದ್ದಾಳೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು, ಮೂವರನ್ನು ಬಂಧಿಸಿದ್ದಾರೆ. ಹಾಗೆಯೇ ಇನ್ನುಳಿದ ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ.

Comments are closed.