ಕ್ರೀಡೆ

ಟೀಂ ಇಂಡಿಯಾದ ಪ್ರಧಾನ ನೂತನ ಕೋಚ್ ಆಯ್ಕೆ

Pinterest LinkedIn Tumblr


ಟೀಂ ಇಂಡಿಯಾದ ಪ್ರಧಾನ ಕೋಚ್ ಆಗಿ ರವಿಶಾಸ್ತ್ರಿ ಅವರನ್ನೇ ಮರು ಆಯ್ಕೆ ಮಾಡಲಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ತಿಳಿಸಿದೆ. ಕಪೀಲ್ ದೇವ್ ನೇತೃತ್ವದಲ್ಲಿ ಇಂದು ನಡೆದ ಸಭೆಯಲ್ಲಿ ಹಾಲಿ ಕೋಚ್​ನ್ನೇ ಮುಂದುವರೆಸಲು ನಿರ್ಧರಿಸಲಾಗಿದೆ. ಮುಖ್ಯ ಕೋಚ್ ಹುದ್ದೆಗೆ ಒಟ್ಟು 6 ಜನರ ಹೆಸರನ್ನು ಶಾರ್ಟ್​ಲಿಸ್ಟ್ ಮಾಡಲಾಗಿದ್ದು, ಫೈನಲ್ ಆಗಿ ರವಿಶಾಸ್ತ್ರಿಯನ್ನು ಮುಂದುವರೆಸಲು ಬಿಸಿಸಿಐ ತೀರ್ಮಾನಿಸಿದೆ.

ನ್ಯೂಜಿಲ್ಯಾಂಡ್​ನ ಮಾಜಿ ಕೋಚ್​​ ಮೈಕ್​ ಹಸ್ಸನ್, ಆಸ್ಟ್ರೇಲಿಯಾದ ಮಾಜಿ ಆಲ್​ರೌಂಡರ್​ ಹಾಗೂ ಶ್ರೀಲಂಕಾ ಕೋಚ್​ ಟಾಮ್​ ಮೂಡಿ, ಆಫ್ಘಾನಿಸ್ತಾನದ ಕೋಚ್​​ ಸಿಮನ್ಸ್​​, ಟೀಂ ಇಂಡಿಯಾ ಮಾಜಿ ಮ್ಯಾನೇಜರ್​ ಲಾಲ್​ಚಂದ್​ ರಜಪೂತ್​, ರಾಬಿನ್​​ ಸಿಂಗ್​​ ಹೆಸರುಗಳು ಪಟ್ಟಿಯಲ್ಲಿದ್ದವು. ಇವರೆಲ್ಲರನ್ನು ಹಿಂದಿಕ್ಕಿ ಮತ್ತೊಮ್ಮೆ ತಂಡದ ತರಬೇತುದಾರರಾಗಿ ರವಿಶಾಸ್ತ್ರಿ ಆಯ್ಕೆಯಾಗಿದ್ದಾರೆ. ಹೊಸ ಕೋಚ್​ನ ಅವಧಿ 2021 ವಿಶ್ವಕಪ್ ಟಿ-20 ವರೆಗೆ ಇರಲಿದ್ದು, ಆ ಬಳಿಕ ಮತ್ತೆ ಮರು ನೇಮಕಾತಿ ಪ್ರಕ್ರಿಯೆ ನಡೆಯಲಿದೆ’ ಎಂದು ಬಿಸಿಸಿಐ ತಿಳಿಸಿದೆ.

ಈ ಹಿಂದೆ ನಾಯಕ ವಿರಾಟ್ ಕೊಹ್ಲಿ, ‘ರವಿಶಾಸ್ತ್ರಿ ಅವರೇ ಭಾರತ ತಂಡದ ಕೋಚ್ ಆಗಿ ಮುಂದುವರಿದರೆ ಉತ್ತಮ’ ಎಂದು ಹೇಳಿದ್ದರು. ಅಲ್ಲದೆ ಇನ್ನೊಂದು ಅವಧಿಗೆ ಶಾಸ್ತ್ರಿ ಅರವನ್ನೇ ಕೋಚ್​ ಆಗಿ ಮುಂದುವರಿಸುವ ಇರಾದೆ ಬಿಸಿಸಿಐಗೆ ಇದೆ ಎನ್ನಲಾಗಿತ್ತು. ಇದಕ್ಕೆ ಟೀಂ ಇಂಡಿಯಾ ಆಟಗಾರರು ಕೂಡ ಒಪ್ಪಿಗೆ ನೀಡಿದ್ದಾರೆ ಎಂದು ಸುದ್ದಿಗಳು ಕೇಳಿ ಬಂದಿದ್ದವು. ಇವೆಲ್ಲವನ್ನು ಪರಿಗಣಿಸಿ ಇದೀಗ ಮತ್ತೊಂದು ಅವಧಿಗೆ ಶಾಸ್ತ್ರಿಯನ್ನೇ ಕೋಚ್​ ಆಗಿ ಆರಿಸಲಾಗಿದೆ.

2017ರಲ್ಲಿ ಕೋಚ್ ಹುದ್ದೆಗೇರಿರುವ ರವಿಶಾಸ್ತ್ರಿ ಅತ್ಯುತ್ತಮ ದಾಖಲೆಯನ್ನು ಹೊಂದಿದ್ದಾರೆ. ಇವರು ಕೋಚ್ ಆದ ಬಳಿಕ ಭಾರತ ತಂಡದಲ್ಲಿ ಸಾಕಷ್ಟು ಬದಲಾವಣೆ ಆಗಿದ್ದು, ಅನೇಕ ಪ್ರಮುಖ ಸರಣಿಗಳಲ್ಲಿ ಗೆದ್ದು ಬೀಗಿದೆ. ಇನ್ನು ವಿಶ್ವಕಪ್ ಸೆಮಿಫೈನಲ್​ನಲ್ಲಿ ಭಾರತ ಹೊರಬಿದ್ದಿದ್ದರಿಂದ ಕೋಚ್​ ವಿರುದ್ಧ ಟೀಕೆಗಳು ಕೇಳಿ ಬಂದಿದ್ದವು. ಹೀಗಾಗಿ ಈ ಬಾರಿಯ ಕೋಚ್ ಆಯ್ಕೆಯಲ್ಲಿ ಭಾರೀ ಚರ್ಚೆಗಳಾಗಿತ್ತು.

ಕಪಿಲ್ ದೇವ್ ಅಲ್ಲದೆ, ಮಾಜಿ ಆಟಗಾರ ಅಂಶುಮಾನ್ ಗಾಯಕ್ವಾಡ್ ಹಾಗೂ ಶಾಂತಾ ರಂಗ್ವಸಾಮಿ ಕೂಡ ಕ್ರಿಕೆಟ್ ಸಲಹಾ ಸಮಿತಿಯಲ್ಲಿದ್ದರು. ಇವರ ಅಂತಿಮ ನಿರ್ಧಾರದಂತೆ ರವಿಶಾಸ್ತ್ರಿಯವರ ಸೇವೆಯನ್ನು ಮುಂದುವರೆಸುವ ತೀರ್ಮಾನ ಕೈಗೊಳ್ಳಲಾಯಿತು.

Comments are closed.