ರಾಷ್ಟ್ರೀಯ

ಉತ್ತರಪ್ರದೇಶದಲ್ಲಿ ಶಿವ ದೇವಾಲಯದಲ್ಲಿ ಪೂಜೆ ನಿರ್ವಹಿಸಿದ ಮುಸ್ಲಿಂ ಪೊಲೀಸ್ ಅಧಿಕಾರಿ !

Pinterest LinkedIn Tumblr

ಬರೇಲಿ: ಮುಸ್ಲಿಂ ಸಮುದಾಯದ ಪೊಲೀಸ್ ಅಧಿಕಾರಿಯೊಬ್ಬರು ಸಂಪ್ರದಾಯ ಮುಂದುವರಿಕೆಗಾಗಿ ಶಿವ ದೇವಾಲಯದಲ್ಲಿ ಪೂಜೆ ನಿರ್ವಹಿಸಿದ್ದಾರೆ.

ಉತ್ತರ ಪ್ರದೇಶದ ಬರೇಲಿ ಜಿಲೆಯ ಭಮೋರಾ ಪೊಲೀಸ್ ಠಾಣಾ ವ್ಯಾಪ್ತಿಯ ಸ್ಟೇಷನ್ ಹೌಸ್ ಅಧಿಕಾರಿಯಾಗಿರುವ ಜಾವೇದ್ ಖಾನ್(40) ದೇವಾಲಯದಲ್ಲಿ ಶಿವನ ವಿಗ್ರಹಕ್ಕೆ ಸಂಪ್ರದಾಯದಂತೆ ಭಕ್ತಾದಿಗಳಿಗೂ ಮುನ್ನ ಸ್ವತಃ ಪೂಜೆ ನಿರ್ವಹಿಸಿರುವ ಅಧಿಕಾರಿ.

ಇಲ್ಲಿ ನಡೆದುಬಂದಿರುವ ಸಂಪ್ರದಾಯದ ಪ್ರಕಾರ ಔನ್ಲಾ ಸರ್ಕಲ್ ಆಫೀಸರ್ ಭಕ್ತಾದಿಗಳಿಗಿಂತಲೂ ಮುನ್ನ ಪೂಜೆ ಸಲ್ಲಿಸಬೇಕು, ಆದರೆ ಈ ಅಧಿಕಾರಿ ಕಾರಣಾಂತರಗಳಿಂದ ಬರಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಖಾನ್ ಸ್ವತಃ ಅಭಿಷೇಕ ನೆರವೇರಿಸಿ ಸಂಪ್ರದಾಯವನ್ನು ಪಾಲಿಸಿದ್ದಾರೆ.

ದೇವಾಲಯದ ಪ್ರಧಾನ ಅರ್ಚಕ ಅಶೋಕ್ ಶರ್ಮ ಈ ಬಗ್ಗೆ ಮಾತನಾಡಿದ್ದು, “ಖಾನ್ ಅವರನ್ನು ಪೂಜೆ ಮಾಡಲು ಕೇಳುವುದಕ್ಕೆ ಹಿಂಜರಿಕೆ ಇತ್ತು. ಆದರೆ ಪರಿಸ್ಥಿತಿ ಕಂಡು ಪೂಜೆ ನೆರವೇರಿಸಲು ಅವರೇ ಮುಂದಾದದ್ದು ಆಶ್ಚರ್ಯ. ಶಿವ ಶುದ್ಧ ಮನಸ್ಸಿನಿಂದ ಮಾಡುವ ಪೂಜೆಯನ್ನು ಸ್ವೀಕರಿಸುತ್ತಾನೆ. ಅದ್ಭುತ ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿದ್ದೇನೆ ಎಂದು ಹೇಳಿದ್ದಾರೆ.

ಇನ್ನು ಅಧಿಕಾರಿ ಜಾವೇದ್ ಖಾನ್ ಈ ಬಗ್ಗೆ ಮಾತನಾಡಿದ್ದು, ಕರ್ತವ್ಯ ನಿರ್ವಹಣೆ ಎಲ್ಲಾ ಧರ್ಮಕ್ಕಿಂತಲೂ ಮಿಗಿಲಾದದ್ದು, ನಾನು ಎಸ್ ಹೆಚ್ ಒ ನಿರ್ವಹಿಸಬೇಕಿದ್ದ ಕರ್ತವ್ಯವನ್ನು ಪಾಲಿಸಿದ್ದೇನೆ ಎಂದು ಹೇಳಿದ್ದಾರೆ.

Comments are closed.