ಮನೋರಂಜನೆ

ಟಿಕ್ ಟಾಕ್ ಬಾಲ ಕಲಾವಿದೆಯ ಬಲಿ ಪಡೆದ ಮೆದುಳಿನ ಕಾಯಿಲೆ!!

Pinterest LinkedIn Tumblr

ಟಿಕ್ ಟಾಕ್ ದೇಶದಲ್ಲಿ ಅತೀ ಹೆಚ್ಚು ಸಂಚಲನ ಮೂಡಿಸಿದ ಆ್ಯಪ್. ಈ ಆ್ಯಪ್ ಜನಜೀವನದ ಮೇಲೆ ಎಷ್ಟು ಪ್ರಭಾವ ಬೀರಿದೆ ಎಂದರೆ ಹಿರಿಯರಿಂದ ಹಿಡಿದು ಕಿರಿಯರವರೆಗೂ ಜನ ಕುಂತಲ್ಲಿ ನಿಂತಲ್ಲಿ, ಎಲ್ಲಿದ್ದರು ಟಿಕ್ ಟಾಕ್ ಮಾಡುವುದರಲ್ಲಿ ಬ್ಯುಸಿಯಾಗಿರುತ್ತಾರೆ. ಅಲ್ಲದೆ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಈ ಆ್ಯಪ್ ಮೂಲಕ ಸ್ಟಾರ್ ಆಗಿ ಹೋಗಿರುತ್ತಾರೆ. ಆದರೀಗಾ ಟಿಕ್ ಟಾಕ್ ನಿಂದಲೇ ಫೆಮಸ್ ಆದ ಬಾಲ ನಟಿಯೊಬ್ಬರು ದುರ್ಮರಣ ಹೊಂದಿದ್ದಾರೆ.

ಹೌದು ಮಲಯಾಳಂ ಭಾಷೆಯಲ್ಲಿ ಟಿಕ್ ಟಾಕ್ ವೀಡಿಯೋ ಮಾಜುವ ಮೂಲಕ ಭಾರಿ ಜನಪ್ರಿಯಳಾಗಿದ್ದ ಬಾಲಕಿ ಅರುಣಿ ಕುರುಪ್ ಎಂಬ ಬಾಲ ನಟಿ ಸಾವನ್ನಪ್ಪಿದ್ದಾರೆ. ಹಲವು ದಿನಗಳಿಂದ ಆಕೆಯನ್ನು ಕಾಡುತ್ತಿದ್ದ ಕಾಯಿಲೆಯಿಂದ ಮೆದುಳಿನ ಮೇಲೆ ಪರಿಣಾಮವಾಗಿತ್ತು ಎಂದು ಹೇಳಲಾಗುತ್ತಿದೆ.

ಆಕೆಗೆ ತೀವ್ರ ತಲೆ ನೋವು ಕಾಣಿಸಿಕೊಂಡ ಪರಿಣಾಮು ಆಕೆಯನ್ನು ಕೂಡಲೇ ತಿರುವನಂತಪುರಂನ ಎಸ್.ಐ.ಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅರುಣಿ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಕಳೆದ ವರ್ಷವಷ್ಟೇ ಅರುಣಿ ತಂದೆ ಸೌದಿ ಅರೇಬಿಯಾದ ಅಪಘಾತದಲ್ಲಿ ಒಂದರಲ್ಲಿ ಮೃತಪಟ್ಟಿದ್ದರು. ಇದೀಗಾ ಅದರೆ ಬೆನ್ನಿಗೆ ಅರುಣಿ ಸಾವು ಕುಟುಂಬಕ್ಕೆ ಮತ್ತೊಂದು ಬಹುದೊಡ್ಡ ಆಘಾತ ತಂದಿದೆ.

ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದ ಅರುಣಿಗೆ ಸಾಮಾಜಿಕ ಜಾಲತಾಣಗಳಲ್ಲಿ 14ಸಾವಿರ ಫೋಲೊವರ್ಸ್ ನ ಬಹುದೊಡ್ಡ ಅಭಿಮಾನಿ ಬಳಗವನ್ನೆ ಹೊಂದಿದ್ದರು. ಇನ್ನೂ ಈಕೆ ಸಾವಿಗೆ ಹಲವರು ಸಂತಾಪ ಸೂಚಿಸುತ್ತಿದ್ದಾರೆ.

ಇನ್ನೂ ಇದೀಗಾ ಈಕೆಯ ಟಿಕ್ ಟಾಕ್ ಖಾತೆಯಲ್ಲಿ ಆಕೆಯ ” ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು, ದೀರ್ಘ ವಿರಾಮವನ್ನು ತೆಗೆದುಕೊಳ್ಳುತ್ತಿದ್ದೇನೆ”. ಎಂದು ಬರೆಯಲಾಗಿದೆ.

Comments are closed.