ಮನೋರಂಜನೆ

ಟ್ಯಾಟೂ ಮೋಡಿಗೆ ನಟಿ ಹರಿಪ್ರಿಯಾಗೆ ಮೂಡಿದ ಚಿತ್ತಾರ ಯಾವುದು ಗೊತ್ತಾ?!

Pinterest LinkedIn Tumblr

ಸ್ಯಾಂಡಲ್ ವುಡ್ ನ ಸಾಲು ಸಾಲು ಚಿತ್ರಗಳಲ್ಲಿ ಮಿಂಚುತ್ತಿರುವ ನಟಿ ಹರಿಪ್ರಿಯ ಸದ್ಯ ಚಿತ್ರೀಕರಣದಿಂದ ಕೊಂಚ ಬ್ರೇಕ್ ಪಡೆದಿದ್ದು, ವಿದೇಶಿ ಪ್ರವಾಸ ಮಾಡುವುದರ ಮೂಲಕ ಜಾಲಿ ಮೂಡ್ ನಲ್ಲಿದ್ದಾರೆ. ಈ ಹಿಂದೆ ಪ್ರವಾಸಕ್ಕೆ ಹೋಗುವುದಾಗಿ ಅಭಿಮಾಣಿಗಳೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಹರಿಪ್ರಿಯ ಇದೀಗಾ ಇಂಡೋನೇಶಿಯದ ಸುಂದರ ತಾಣಗಳಿಗೆ ಭೇಟಿ ನೀಡಿ ಟ್ರಿಪ್ ನನ್ನು ಎಂಜಾಯ್ ಮಾಡುತ್ತಿದ್ದಾರೆ. ಇನ್ನೂ ಈ ಸುಂದರ ಕ್ಷಣಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯುವುದರ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.

ಸದ್ಯ ಕುಟುಂಬದ ಜೊತೆ ಬಾಲಿಯಲ್ಲಿ ಜಾಲಿ ಮಾಡುತ್ತಿರುವ ಹರಿಪ್ರಿಯಾ ಸುಂದರ ತಾಣಗಳನ್ನು ಸುತ್ತಾಡುತ್ತಾ, ಅಲ್ಲಿನ ವೆರೈಟಿ ಫುಡ್ ಗಳನ್ನು ಟೆಸ್ಟ್ ಮಾಡುತ್ತಾ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಜೊತೆಗೆ ಅಲ್ಲಿನ ಸುಂದರ ತಾಣಗಳಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾಗಳೊಂದಿಗೆ ಫೋಟೊಗಳನ್ನು ಅಪ್ ಡೇಟ್ ಮಾಡುವ ಮೂಲಕ ಶೇರ್ ಮಾಡಿಕೊಂಡಿದ್ದಾರೆ.

ಇನ್ನೂ ಈ ಎಲ್ಲದರ ಮಧ್ಯೆ ವಿಶೇಷ ಅಂದರೆ ಇಂಡೋನೇಶಿಯಾದಲ್ಲಿ ಹರಿಪ್ರಿಯಾ ತಮ್ಮ ಎಡ ಗೈಗೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಅಲ್ಲದೆ ಟ್ಯಾಟೂ ಹಾಕಿಕೊಳ್ಳುತ್ತಿರುವ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಜೊತೆಗೆ ಅಭಿಮಾನಿಗಳಿಗೆ ತಾವು ಹಾಕಿಕೊಂಡಿರುವ ಟ್ಯಾಟೂ ಎನೆಂದು ಊಹಿಸುವುದಾಗಿ ಅಭಿಮಾನಿಗಳಿಗೆ ಹೇಳಿದ್ದಾರೆ. ಹಾಗಾಗಿ ಟ್ಯಾಟೂ ಎನಾಗಿರಬಹುದು ಎಂದು ಅಭಿಮಾನಿಗಳಿಗೆ ಬಾರಿ ಕುತೂಹಲಕರವಾಗಿದ್ದು, ಟ್ಯಾಟೂ ಏನಾಗಿರಹುದು ಎಂದು ಅಭಿಮಾನಿಗಳು ಕಮೆಂಟ್ಸ್ ಮಾಡತೊಡಗಿದ್ದಾರೆ.

ಕೆಲವರು ಹರಿಪ್ರಿಯಾ ಅಮ್ಮ ಅಂತ ಹಾಕಿಸಿಕೊಂಡಿದ್ದಾರೆ ಎಂದರೆ, ಇನ್ನೂ ಕೆಲವರು ಹರಿಪ್ರಿಯಾ ಅಂತ ಹಾಕಿಸಿಕೊಂಡಿದ್ದಾರೆ ಎಂದು ಹೇಳುತ್ತಿದ್ದಾರೆ. ಆದ್ರೆ ಹರಿಪ್ರಿಯಾ ಮಾತ್ರ ಟ್ಯಾಟೂ ಯಾವುದೆಂದು ಮಾತ್ರ ಇನ್ನೂ ರಿವೀಲ್ ಮಾಡಿಲ್ಲ.

ಈ ಹಿಂದೆ ಬೆಲ್ ಬಾಟಂ ಚಿತ್ರದಲ್ಲಿ ನಟಿಸಿ ಚಿತ್ರ 150 ದಿನಗಳ ಪ್ರದರ್ಶನ ಕಾಣುವ ಮೂಲಕ ಸಕ್ಸಸ್ ಕಂಡಿದ್ದ ಹರಿಪ್ರಿಯರ ಎಲ್ಲಿದ್ದೆ ಇಲ್ಲಿ ತನಕ, ಕನ್ನಡ್ ಗೊತ್ತಿಲ್ಲ, ಕಥಾಸಂಗಮ ಚಿತ್ರಗಳು ಸಾಲು ಸಾಲಾಗಿ ರಿಲೀಸ್ ಗೆ ರೆಡಿಯಾಗಿದೆ. ಅಲ್ಲದೆ ಹರಿಪ್ರಿಯರ ಹಲವು ಚಿತ್ರಗಳ ರಿಲೀಸ್ ಮುಂಚೂಣಿಯಲ್ಲಿ ಮೊದಲಿಗೆ ಬಹುನಿರೀಕ್ಷಿತ ಚಾಲೇಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ.

Comments are closed.