ಕರ್ನಾಟಕ

ಮೈತ್ರಿ ಸರ್ಕಾರ ಪತನಕ್ಕೆ ಜಾರಕಿಹೊಳಿ ಕುಟುಂಬ ಅಲ್ಲ, ಒಂದು ವಸ್ತು ಕಾರಣ; ಸತೀಶ್​ ಜಾರಕಿಹೊಳಿ

Pinterest LinkedIn Tumblr


ಬೆಂಗಳೂರು (ಜು.26): ಮೈತ್ರಿ ಸರ್ಕಾರ ಪತನಕ್ಕೆ ಜಾರಕಿಹೊಳಿ ಕುಟುಂಬ ಎಂಬ ಮಾತು ಕೇಳಿ ಬರುತ್ತಿದೆ. ಆದರೆ, ಸರ್ಕಾರ ಪತನಕ್ಕೂ ಜಾರಕಿಹೊಳಿ ಕುಟುಂಬಕ್ಕೂ ಸಂಬಂಧವಿಲ್ಲ. ಇದಕ್ಕೆ ಕಾರಣ ಒಂದು ವಸ್ತು. ಅದರಿಂದಲೇ ಹೀಗೆ ಆಗಿದ್ದು ಎಂದು ಹೊಸ ಬಾಂಬ್​ವೊಂದನ್ನು ಸತೀಶ್​ ಜಾರಕಿಹೊಳಿ ಸಿಡಿಸಿದ್ದಾರೆ.

ರಾಜ್ಯದ ಬೆಳವಣಿಗೆ ಕುರಿತು ಮಾತನಾಡಿದ ಅವರು, ಜಾರಕಿಹೊಳಿ ಕುಟುಂಬದ ಒಳಜಗಳ, ರಮೇಶ್​ ಜಾರಕಿಹೊಳಿ ಅಸಮಾಧಾನದಿಂದ ಸರ್ಕಾರ ಪತನವಾಗಿದೆ, ಮೈತ್ರಿ ಸರ್ಕಾರ ಬೀಳಲು ರಮೇಶ್​ ಜಾರಕಿಹೊಳಿಯೇ ಕಾರಣ ಎಂಬ ಮಾತು ಕೇಳಿಬರುತ್ತಿದೆ. ಆದರೆ, ಇದು ಸುಳ್ಳು. ಈ ರೀತಿಯ ಕೆಟ್ಟ ಹೆಸರು ನಮ್ಮ ಕುಟುಂಬಕ್ಕೆ ಬರಬಾರದು ಎಂದರು.

ಇನ್ನು ಯಾವ ವಸ್ತುವಿನಿಂದಾಗಿ ಈ ಸರ್ಕಾರ ಪತನವಾಗಿದೆ ಎಂಬುದನ್ನು ಶೀಘ್ರದಲ್ಲಿಯೇ ಬಹಿರಂಗಪಡಿಸುತ್ತೇನೆ. ಯಾವ ಕಾರಣದಿಂದ ಸರ್ಕಾರ ಬಿದ್ದಿದೆ ಎಂಬುದು ಜನರಿಗೆ ಆದಷ್ಟು ಬೇಗ ತಿಳಿಸಲಿದ್ದೇನೆ ಎಂದರು.

ಅನರ್ಹತೆ ಕ್ರಮಕ್ಕೆ ಸ್ವಾಗತ:

ಮೂವರು ಶಾಸಕರನ್ನು ಸ್ಪೀಕರ್​ ಅನರ್ಹಗೊಳಿಸಿರುವ ಪ್ರಕಾರ ಸ್ವಾಗತ. ಈ ಹಿಂದೆಯೇ ಶಾಸಕರನ್ನು ಅನರ್ಹ ಮಾಡುವಂತೆ ನಾನು ತಿಳಿಸಿದ್ದೆ. ನಾನು ಈ ಹಿಂದೆ ಆಪರೇಷನ್​ ಕಮಲದ ಬಗ್ಗೆ ಹೇಳಿದೆ. ಆದರೆ ಹೈ ಕಮಾಂಡ್​ ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಈ ಹಿಂದೆಯೇ ಈ ಕ್ರಮ ನಡೆದಿದ್ದರೆ ನಮ್ಮ ಸರ್ಕಾರ ಉಳಿಯುತ್ತಿತ್ತು. ಪಕ್ಷವಿರೋಧಿ ಚಟುವಟಿಕೆ ಮಾಡಿದ ಉಳಿದವರನ್ನು ಅನರ್ಹಗೊಳಿಸಬೇಕು. ಉಳಿದ ಶಾಸಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.

ಅನರ್ಹ ಪ್ರಕರಣ ಇತ್ಯರ್ಥಕ್ಕೆ ಒಂದು ವರ್ಷ ಬೇಕು. ಕೋರ್ಟ್​ನಲ್ಲಿ ನಮ್ಮ ಪರ ತೀರ್ಪು ಬಂದ್ರೆ ಅವರು ಕೋರ್ಟ್ ಹೋಗುತ್ತಾರೆ. ಅವರ ಪರ ತೀರ್ಪು ಬಂದರೆ ನಾವು‌ ಕೋರ್ಟ್ ಹೋಗುತ್ತೇವೆ.

Comments are closed.