ಆರೋಗ್ಯ

ಬಿಸಿ ನೀರಿಗಿಂತ ತಣ್ಣೀರು ಸ್ನಾನ ಹೆಚ್ಚು ಉಪಯೋಗಕಾರಿ ಯಾಕೆ?

Pinterest LinkedIn Tumblr

ಚಳಿಗಾಲದಲ್ಲಿ ತಣ್ಣೀರ ಸ್ನಾನ ಮಾಡಲು ಆಗದಿದ್ದರೆ ಬೆಚ್ಚಗಿನ ನೀರಿನಿಂದ ಸ್ನಾನ ಮಾಡುವುದು ಉತ್ತಮ ಯಾಕೆಂದರೆ ಕೆಲವರಿಗೆ ಅಭ್ಯಾಸ ಇರೋದಿಲ್ಲ, ಇದರಿಂದ ದೇಹಕ್ಕೆ ಬೇರೆ ರೀತಿಯ ಪರಿಣಾಮವಾಗಬಹುದು. ಆದ್ದರಿಂದ ವಾತಾವರಣಕ್ಕೆ ತಕ್ಕಂತೆ ಯಾವ ನೀರನ್ನು ಬಳಸಿ ಸ್ನಾನ ಮಾಡಿದರೆ ಒಳ್ಳೆಯದು ಅನ್ನೋದನ್ನ ತಿಳಿದುಕೊಳ್ಳಬೇಕು ಅಷ್ಟೇ.

ತಣ್ಣೀರ ಸ್ನಾನದಿಂದ ಸಿಗುವಂತ ಉಪಯೋಗಗಳು: ತಣ್ಣೀರು ಸ್ನಾನ ಮಾಡುವುದರಿಂದ ಶೀತ, ಜ್ವರ ಸೋಂಕು ಇತ್ಯಾದಿಗಳಿಂದ ದೂರ ಇರಬಹುದು, ಅಷ್ಟೇ ಅಲ್ಲದೆ ಕ್ಯಾನ್ಸರ್ ರೋಗಕ್ಕೆ ರಾಮಬಾಣವಾಗಿದೆ ತಣ್ಣೀರು.

ಬಿಸಿ ನೀರು ಹಾಗೂ ತಣ್ಣೀರನಿಂದ ಸ್ನಾನ ಮಾಡುವುದರಿಂದ ದೇಹದಲ್ಲಿನ ರಕ್ತ ಸಂಚಲನಕ್ಕೆ ಹೆಚ್ಚು ಸಹಕಾರಿಯಾಗುತ್ತದೆ ಅಷ್ಟೇ ಅಲ್ಲದೆ ಹೃದಯದ ಆರೋಗ್ಯಕ್ಕೆ ತಣ್ಣೀರು ಹೆಚ್ಚು ಪೂರಕವಾಗಿದೆ. ತಣ್ಣೀರು ಸ್ನಾನ ದೇಹದ ಆಂತರಿಕ ಉಷ್ಣತೆಯನ್ನು ನಿಯಂತ್ರಿಸುತ್ತದೆ, ಹೆಚ್ಚು ಬೆವರುತ್ತಿದ್ದರೆ ತಣ್ಣೀರು ಸ್ನಾನ ಮಾಡುವುದು ಒಳ್ಳೆಯದು.

ಖಿನ್ನತೆಯನ್ನು ನಿವಾರಿಸುತ್ತದೆ ಹಾಗೂ ಉಸಿರಾಟದ ಸಮಸ್ಯೆ ನಿವಾರಿಸುವುದು ಅಷ್ಟೇ ಅಲ್ಲದೆ ದೇಹದ ತೂಕ ಕಳೆದುಕೊಳ್ಳಲು ತಣ್ಣೀರ ಸ್ನಾನ ಕೂಡ ಹೆಚ್ಚು ಪರಿಣಾಮಕಾರಿಯಾಗಿದೆ. ಒಟ್ಟಾರೆಯಾಗಿ ಪ್ರತಿದಿನ ತಣ್ಣೀರ ಸ್ನಾನ ಮಾಡದಿದ್ದರೂ ವಾರದಲ್ಲಿ ೨-೩ ಬಾರಿಯಾದರೂ ತಣ್ಣೀರು ಬಳಸುವುದರಿಂದ ದೇಹಕ್ಕೆ ಉತ್ತಮವಾದ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು.

Comments are closed.