ಕರ್ನಾಟಕ

ಯಡಿಯೂರಪ್ಪ ಸರ್ಕಾರ ರಚಿಸುವಂತೆ ಚಾಮುಂಡೇಶ್ವರಿಗೆ ಹರಕೆ ಇಟ್ಟ ಶೋಭಾ ಕರಂದ್ಲಾಜೆ !

Pinterest LinkedIn Tumblr

ಮೈಸೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ರಾಜ್ಯದಲ್ಲಿ ಸರ್ಕಾರ ರಚಿಸಲಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಚಾಮುಂಡೇಶ್ವರಿ ದೇವಿ ಬಳಿ ಬೇಡಿಕೊಂಡಿದ್ದಾರೆ.

ಆಷಾಢ ಶುಕ್ರವಾರದ ಅಂಗವಾಗಿ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ನಾನು ಇಲ್ಲಿಯವರೆಗೆ ಈ ರೀತಿ ತಾಯಿಗೆ ಯಾವ ಬೇಡಿಕೆಯನ್ನೂ ಇಟ್ಟಿರಲಿಲ್ಲ. ರಾಜ್ಯದಲ್ಲಿ ಜನವಿರೋಧಿ, ಶಾಸಕ ವಿರೋಧಿ ಸರ್ಕಾರ ನಿರ್ಮಾಣವಾಗಿದೆ ಹೀಗಾಗಿ ಯಡಿಯೂರಪ್ಪ ಅವರು ಸರ್ಕಾರ ರಚಿಸುವಂತೆ ಚಾಮುಂಡೇಶ್ವರಿಗೆ ಬೇಡಿಕೆ ಇಟ್ಟಿರುವುದಾಗಿ ಹೇಳಿದ್ದಾರೆ.

ಕಳೆದ ಒಂದು ವರ್ಷದಿಂದ ಆಡಳಿತ ವ್ಯವಸ್ಥೆ ಕುಸಿದು ಬಿದ್ದಿದೆ. ಬರದಿಂದ ರೈತಾಪಿ ವರ್ಗ ಸಂಕಷ್ಟಕ್ಕೆ ಸಿಲುಕಿದೆ. ಆದರೆ ಇದ್ಯಾವುದೇ ಕಷ್ಟವನ್ನು ಸರ್ಕಾರ ಕೇಳುತ್ತಿಲ್ಲ. ಈ ರೀತಿಯ ಸರ್ಕಾರವನ್ನು ತೊಲಗಿಸಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಬರಲಿ ಎಂದು ಕೇಳಿಕೊಳ್ಳುತ್ತೇನೆ ಎಂದು ಹೇಳಿದರು.

ಮುಖ್ಯಮಂತ್ರಿ ಮೊದಲಿಗೆ ಬಹುಮತ ಸಾಬೀತು ಮಾಡುವುದಾಗಿ ಪ್ರಸ್ತಾಪ ಮಾಡಿದ್ದರು. ಈಗ ಬಹುಮತ ಸಾಬೀತು ಮಾಡದೆ ಕಾಲಹರಣ ಮಾಡುತ್ತಿದ್ದಾರೆ. ಆದರೆ ಎಷ್ಟು ದಿನ ಈ ಡ್ರಾಮಾ ಮಾಡಲು ಸಾಧ್ಯ. ಸುಪ್ರೀಂಕೋರ್ಟ್ ಗೂ ಬೆಲೆ ಕೊಡುತ್ತಿಲ್ಲ, ರಾಜ್ಯಪಾಲರಿಗೂ ಬೆಲೆ ಕೊಡುತ್ತಿಲ್ಲ ಎಂದು ಶೋಭಾ ಕರಂದ್ಲಾಜೆ ಕಿಡಿ ಕಾರಿದ್ದಾರೆ.

Comments are closed.