ಕರಾವಳಿ

ಜಾನುವಾರು ಸಾಗಾಟಕಾರರ ಜೊತೆ ಶಾಮೀಲು : ನಾಲ್ವರು ಪೊಲೀಸರು ಅಮಾನತು

Pinterest LinkedIn Tumblr

ಕುಂದಾಪುರ: ಕೋಣ ಹಾಗೂ ಎಮ್ಮೆ ಅಕ್ರಮ ಸಾಗಾಟಗಾರರ ಜತೆ ಶಾಮೀಲಾದ ಆರೋಪದಲ್ಲಿ ನಾಲ್ವರು ಪೊಲೀಸರ ಅಮಾನತು ಮಾಡಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಶಾ ಜೇಮ್ಸ್ ಆದೇಶ ಮಾಡಿದ್ದಾರೆ.

ಕೋಟ ಠಾಣೆಯ ಹೆಡ್ ಕಾನ್‌ಸ್ಟೇಬಲ್ ರಾಘವೇಂದ್ರ, ಉಡುಪಿ ಜಿಲ್ಲಾ ಶಸಸ್ತ್ರ ಮೀಸಲು ಪಡೆಯ ಎ‌ಎಸ್‌ಐ ಬಾಲಸುಬ್ರಮಣ್ಯ, ಹೆಡ್ ಕಾನ್‌ಸ್ಟೇಬಲ್ ಪ್ರಶಾಂತ್, ಕಾನ್‌ಸ್ಟೇಬಲ್ ಚಂದ್ರಶೇಖರ್ ಅಮಾನತು ಆದ ಪೊಲೀಸರು.

ಸಾಸ್ತಾನ ಟೋಲ್ ಗೇಟ್ ಬಳಿ ಕೋಟ ಠಾಣಾಧಿಕಾರಿ ಎಸೈ ನಿತ್ಯಾನಂದ ಗೌಡ ವಾಹನ ತಪಾಸಣೆ ಮಾಡಿದಾಗ ೧೩ ಕೋಣ ಹಾಗೂ ೭ ಎಮ್ಮೆಗಳನ್ನು ಅಕ್ರಮವಾಗಿ ಮಾರಾಟಕ್ಕೆ ಸಾಗಿಸಲಾಗುತ್ತಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಆರು ಜನರ ಬಂಧಿಸದಿ, ಆರೋಪಿಗಳ ತೀವ್ರ ವಿಚಾರಣೆಗೊಳಪಡಿಸಿದಾಗ ಇಡೀ ಅಕ್ರಮ ಜಾನುವಾರು ಸಾಗಾಟ ಪ್ರಕರಣದಲ್ಲಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯ ಕೆಲವು ಪೊಲೀಸರು ಭಾಗಿಯಾಗಿರುವ ಆತಂಕಕಾರಿ ಅಂಶ ಬೆಳಕಿಗೆ ಬಂದಿತ್ತು.

ಇದನ್ನೂ ಓದಿರಿ:

ಕೋಣಗಳ ಅಕ್ರಮ ಸಾಗಾಟ ಪ್ರಕರಣದಲ್ಲಿ ಶಾಮೀಲು: ಇಬ್ಬರು ಪೊಲೀಸರು ಅರೆಸ್ಟ್, ನಾಲ್ವರು ಎಸ್ಕೇಪ್!

Comments are closed.