ಕರಾವಳಿ

ಗಂಗೊಳ್ಳಿಯಲ್ಲಿ ಗೋವಿನ ತಲೆ, ಕಾಲುಗಳನ್ನು ಎಸೆದ ದುಷ್ಕರ್ಮಿಗಳು!

Pinterest LinkedIn Tumblr

ಕುಂದಾಪುರ: ಗೋವಿನ ತಲೆ ಹಾಗೂ ಕಾಲುಗಳನ್ನು ಚೀಲದಲ್ಲಿ ತುಂಬಿ ಎಸೆದು ಹೋದ ಘಟನೆ ಗಂಗೊಳ್ಳಿ ಬಸ್ ನಿಲ್ದಾಣದ ಬಳಿ ಸಿಕ್ಕಿದೆ.

ಗಂಗೊಳ್ಳಿಯಲ್ಲಿ ಪೊಲೀಸ್ ನಾಕಾಬಂಧಿ 24/7 ನಿರ್ವಹಿಸುತ್ತಿದ್ದರು ಕೂಡ ಗೋಕಳ್ಳರ ಅಟ್ಟಹಾಸ ಮುಂದುವರಿದ ಬಗ್ಗೆ ಹಿಂದೂ ಪರ ಸಂಘಟನೆ ತೀವೃ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಭಾಗದಲ್ಲಿ ಶಾಂತಿ ಕದಡಿ ಕೋಮು ಸಾಮರಸ್ಯ ಹಾಳುಗೈಯಲಾಗುತ್ತಿದ್ದು ಈ ಬಗ್ಗೆ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕೆಮ್ದು ಆಗ್ರಹಿಸಿದ್ದಾರೆ. ಸಮುದ್ರದಲ್ಲಿ ತೇಲಿಬಂದ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಗಂಗೊಳ್ಳಿಯ ಠಾಣಾಧಿಕಾರಿ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಹಿಂದೂ ಪರ ಸಂಘಟನೆಯವರು ಈ ಬಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Comments are closed.