ಕರ್ನಾಟಕ

ಸದನದಲ್ಲೇ ಅಹೋರಾತ್ರಿ ಧರಣಿಗೆ ಬಿಜೆಪಿ ನಿರ್ಧಾರ!!

Pinterest LinkedIn Tumblr


ಇಂದಿನ ಅಧಿವೇಶನದಲ್ಲಿ ವಿಶ್ವಾಸಮತ ಮಂಡನೆಯಾದರೂ ಚರ್ಚೆ ಹಾಗೂ ಮತದಾನ ಪ್ರಕ್ರಿಯೆಗೆ ಅವಕಾಶ ಕಲ್ಪಿಸದ ಆಡಳಿತ ಪಕ್ಷದ ವರ್ತನೆ ಹಾಗೂ ಸ್ಪೀಕರ್​ ಕ್ರಮ ವಿರೋಧಿಸಿ ಬಿಜೆಪಿ ಅಹೋರಾತ್ರಿ ಧರಣಿಗೆ ನಿರ್ಧರಿಸಿದೆ.

ಬೆಳಗ್ಗೆ ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಮಂಡಿಸಿ ಭಾಷಣ ಆರಂಭಿಸಿದ್ರೂ ಕೂಡ ಮಧ್ಯ ಪ್ರವೇಶಿಸಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ಧರಾಮಯ್ಯ ಹಾಗೂ ಇತರ ಸಚಿವರುಗಳು ಕ್ರಿಯಾಲೋಪದ ವಿಚಾರ ಪ್ರಸ್ತಾಪಿಸಿ ಚರ್ಚೆಗೆ ಹಾಗೂ ಸ್ಪೀಕರ್ ರೂಲಿಂಗ್​ಗೆ ಆಗ್ರಹಿಸಿದರು.

ಇದಕ್ಕೆ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದರು ಕೂಡ ಸ್ಪೀಕರ್ ಚರ್ಚೆಗೆ ಅವಕಾಶ ಕಲ್ಪಿಸಿದ್ದು, ಬಿಜೆಪಿಗರ ಕೆಂಗಣ್ಣಿಗೆ ಗುರಿಯಾಯಿತು. ಬಿಜೆಪಿ ನಾಯಕರು ಇಂದು ರಾತ್ರಿಯೊಳಗೆ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಮುಂದುವರೆಸಲೇ ಬೇಕು ಎಂದು ಒತ್ತಾಯಿಸಿದರು.

ಆದರೆ ಇದಕ್ಕೆ ಬೆಲೆ ಸಿಗದ ಹಿನ್ನೆಲೆಯಲ್ಲಿ ಬಿಜೆಪಿ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿತು. ಕೊನೆಯಲ್ಲಿ ರಾಜ್ಯಪಾಲರ ಆದೇಶಕ್ಕೂ ಬೆಲೆ ಸಿಗದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಬಿಎಸ್​ಯಡಿಯೂರಪ್ಪ ಮತ್ತು ಶಾಸಕರ ತಂಡ ಅಹೋರಾತ್ರಿ ಸದನದಲ್ಲೇ ಧರಣಿ ನಡೆಸಲು ನಿರ್ಧರಿಸಿದೆ.

Comments are closed.