ಕರ್ನಾಟಕ

ದೇಶವೇ ಥೂ, ಛೀ ಅಂತ ಉಗಿಯುತ್ತಿದೆ, ಶಾಸಕರು ಬರುವವರೆಗೂ ವಿಶ್ವಾಸ ಮತಯಾಚನೆ ಬೇಡ

Pinterest LinkedIn Tumblr


ಬೆಂಗಳೂರು: ದೇಶವೇ ಥೂ, ಛೀ ಅಂತ ಉಗಿಯುತ್ತಿದೆ ಹೀಗಾಗಿ ಶಾಸಕರು ಬರುವ ವರೆಗೂ ವಿಶ್ವಾಸ ಮತಯಾಚನೆ ಬೇಡ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪೀಕರ್ ರಮೇಶ್ ಕುಮಾರ್​​ಗೆ ಮನವಿ ಮಾಡಿದರು.

ವಿಧಾನಸೌಧದಲ್ಲಿಂದು ಮಾತನಾಡಿದ ಅವರು, ಸಂವಿಧಾನದ ಉಲ್ಲಂಘನೆಯಾಗುವುದರಿಂದ ವಿಶ್ವಾಸ ಮತಯಾಚನೆಯನ್ನು ಮುಂದೂಡಿ, ವಿಪ್ ಅನ್ವಯವಾಗುತ್ತದೆಯೋ ಇಲ್ಲವೋ ಎಂಬುದು ಇತ್ಯರ್ಥವಾಗುವರೆಗೆ ವಿಶ್ವಾಸಮತದ ನಿರ್ಣಯದ ಮೇಲಿನ ಚರ್ಚೆ ಹಾಗೂ ಮತ ಹಾಕುವುದು ಬೇಡ ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದರು. ಈ ಸಂಬಂಧ ರೂಲಿಂಗ್ ಕೊಡುವಂತೆ ಸಿದ್ದರಾಮಯ್ಯ ಸ್ಪೀಕರ್ ಅವರನ್ನು ಕೇಳಿದರು.

ಶಾಸಕಾಂಗ ಪಕ್ಷದ ನಾಯಕನಿಗೆ ವಿಪ್‌ ನೀಡಲು ಅವಕಾಶವಿಲ್ಲ ಎಂದು ನ್ಯಾಯಾಲಯದ ತೀರ್ಪಿನಲ್ಲಿ ಉಲ್ಲೇಖವಾಗಿದೆ. ಆದರೆ, ಪಕ್ಷಾಂತರ ನಿಷೇಧಿಸುವ 10ನೇ ಶೆಡ್ಯೂಲ್‌ ಸಂವಿಧಾನದಲ್ಲಿ ಇನ್ನೂ ಅಸ್ತಿತ್ವದಲ್ಲಿದೆ. ಇದಿದ್ದಾಗಲೂ ಸುಪ್ರೀಂ ಕೋರ್ಟ್‌ನಿಂದ ಬಂದಿರುವ ಆದೇಶ ನನ್ನ ಹಕ್ಕಿನ ಚ್ಯುತಿ ಮಾಡಿದೆ ಎಂದರು.

ಶಾಸಕರು ಸಾಮೂಹಿಕವಾಗಿ ರಾಜೀನಾಮೆ ನೀಡಿತ್ತಿರುವುದು ಒಂದು ಕುಟಿಲ ತಂತ್ರ ಎಂದರು. ಸಂವಿಧಾನಕ್ಕೆ ತಿದ್ದುಪಡಿ ತಂದು ಪಕ್ಷಾಂತರ ನಿಷೇಧ ಕಾಯಿದೆ ತಂದ ಕೀರ್ತಿ ರಾಜೀವ್‌ ಗಾಂಧಿ ಅವರಿಗೆ ಸಲ್ಲಬೇಕು. ಪಕ್ಷಾಂತರ ನಿಷೇಧ ಕಾಯಿದೆ ಜಾರಿಯಾದಾಗ ಅಂದು ಎಲ್ಲ ಪಕ್ಷಗಳೂ ಸ್ವಾಗತ ಮಾಡಿದ್ದವು ಎಂದು ಸಿದ್ದರಾಮಯ್ಯ ತಿಳಿಸಿದರು.

Comments are closed.