
ಬೆಂಗಳೂರು: ಮುಖ್ಯಮಂತ್ರಿ ವಿಶ್ವಾಸ ಮತಯಾಚನೆ ಎಂದು ಅಧಿವೇಶನ ಆರಂಭಿಸಿ ಸಮಯ ಮುಂದೂಡುವ ಕೆಲಸ ಮಾಡುತ್ತಿದ್ದಾರೆ ಎಂದು ಚಿಕ್ಕಮಗಳೂರು-ಉಡುಪಿ ಕ್ಷೇತ್ರದ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರು ಹೇಳಿದರು.
ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ಮಾಧ್ಯಮದ ಜೊತೆ ಮಾತನಾಡಿದ ಅವರು, ಸ್ಪೀಕರ್ ಪ್ರಜಾಪ್ರಭುತ್ವ, ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಅವರು ಸ್ಪೀಕರ್ ವಿರುದ್ಧ ಆರೋಪ ಮಾಡಿದರು.
ಇನ್ನು ಒಂದು ಕಡೆ ರಾಜೀನಾಮೆಯನ್ನು ಸ್ಪೀಕರ್ ಅಂಗೀಕಾರ ಮಾಡುತ್ತಿಲ್ಲ, ಮತ್ತೊಂದೆಡೆ ವಿಶ್ವಾಸ ಮತಯಾಚನೆಗೂ ಅವಕಾಶ ನೀಡುತ್ತಿಲ್ಲ. ಸ್ಪೀಕರ್ ಅವರು ಕಾಂಗ್ರೆಸ್ ಏಜೆಂಟ್ರಂತೆ ವರ್ತಿಸುತ್ತಿದ್ದಾರೆ. ಮುಖ್ಯಮಂತ್ರಿ ಮೇಲೆ ಜನರಿಗೆ ಮತ್ತು ಶಾಸಕರಿಗೆ ವಿಶ್ವಾಸವಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಅವರು ನುಡಿದರು.
ಜುಲೈ 18ರಂದು ಮೈತ್ರಿ ಸರ್ಕಾರ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ವಿಶ್ವಾಸ ಮತಯಾಚನೆ ಮಾಡುತ್ತೇನೆ ಎಂದು ಸ್ಪೀಕರ್ ಬಳಿ ಒಂದು ವಾರದ ಹಿಂದೆ ಕೇಳಿಕೊಂಡಿದ್ದರು ಅದರಂತೆ ಇಂದು ಬೆಳಗ್ಗೆಯಿಂದ ಸದನ ಆರಂಭವಾಗಿದೆ ಆದರೆ ಇನ್ನು ಸಹ ವಿಶ್ವಾಸ ಮತಯಾಚನೆ ಮಾಡಿಲ್ಲವಾದರಿಂದ ಶೋಭಾ ಕರಂದ್ಲಾಜೆ ಅವರು ಮೇಲಿನ ಹೇಳಿಕೆಯನ್ನು ನೀಡಿದ್ದಾರೆ.
Comments are closed.