
ಬೆಂಗಳೂರು: ನಾನು ರೆಸಾರ್ಟ್ನಿಂದ ಹೊರಗೆ ಹೋಗುವ ಪ್ರಯತ್ನ ಮಾಡಿಲ್ಲ, ಮಾಧ್ಯಮಗಳಲ್ಲಿ ತಪ್ಪು ಸುದ್ದಿ ಹಾಕಬೇಡಿ ಎಂದು ಭದ್ರಾವತಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಸಂಗಮೇಶ್ ಹೇಳಿದರು.
ಖಾಸಗೀ ರೆಸಾರ್ಟ್ನಲ್ಲಿ ಮಂಗಳವಾರ ಮಾಧ್ಯಮದ ಜೊತೆ ಮಾತನಾಡಿದ ಅವರು, ನಾನು ಬಿಜೆಪಿಗೆ ಹೋಗುವವನಲ್ಲ, ನಾನು ಕಾಂಗ್ರೆಸ್ನಲ್ಲಿಯೇ ಇದ್ದೇನೆ, ಇರ್ತೇನೆ ಎಂದು ಅವರು ತಿಳಿಸಿದರು.
ಇನ್ನು ಕ್ಷೇತ್ರದ ಜನರಿಗೆ ಸಮಸ್ಯೆಯಾಗದಂತೆ ವ್ಯವಸ್ಥೆ ಮಾಡಿದ್ದೇನೆ ನಮ್ಮ ಪಕ್ಷದ ಸೂಚನೆಯಂತೆ ಇಲ್ಲಿ ಉಳಿಯಬೇಕಿದೆ ಈ ಪರಿಸ್ಥಿತಿಗೆ ಕಾರಣ ಬಿಜೆಪಿ ನಾಯಕರು ಎಂದರು.
ಅಲ್ಲದೇ ಸರ್ಕಾರ ಯಾವುದೇ ಸಮಸ್ಯೆಯಿಲ್ಲದೆ ಹೋಗುತ್ತಿತ್ತು ಅದನ್ನ ಈ ಪರಿಸ್ಥಿತಿಗೆ ತಂದಿದ್ದು ಬಿಜೆಪಿಯವರು ನನಗೆ ಬಿಜೆಪಿಯಿಂದ ಯಾವುದೇ ಕರೆ ಬಂದಿಲ್ಲ, ಗುರುವಾರ ಬೆಳಿಗ್ಗೆ ೯ ಗಂಟೆ ವರೆಗೆ ಇಲ್ಲಿಯೇ ಇರ್ತೇವೆ ಎಂದು ಭದ್ರಾವತಿ ಕಾಂಗ್ರೆಸ್ ಶಾಸಕ ಸಂಗಮೇಶ್ ಸ್ಪಷ್ಟಪಡಿಸಿದ್ದಾರೆ.
ಮಧ್ಯಾಹ್ನ ಶಾಸಕ ಸಂಗಮೇಶ್ ಅವರು ರೆಸಾರ್ಟ್ನಿಂದ ಎಸ್ಕೇಪ್ ಆಗಲು ಪ್ರಯತ್ನ ಮಾಡಿದ್ದಾರೆ ಎಂದು ಮಾಧ್ಯಮದಲ್ಲಿ ಸುದ್ದಿ ಪ್ರಸಾರವಾಗಿತ್ತು. ಈ ಹಿನ್ನಲೆಯಲ್ಲಿ ಭದ್ರಾವತಿ ಕಾಂಗ್ರೆಸ್ ಶಾಸಕ ಸಂಗಮೇಶ್ ಅವರು ಮೇಲಿನ ಹೇಳಿಕೆ ನೀಡಿದ್ದಾರೆ.
Comments are closed.