ಕರ್ನಾಟಕ

ಅತೃಪ್ತರ ವಿರುದ್ಧ ರೊಚ್ಚಿಗೆದ್ದ ಮಾಲೂರು ಶಾಸಕ

Pinterest LinkedIn Tumblr


ಕೋಲಾರ: ಕಳ್ಳರು ಕೋಟಿ ಕೋಟಿ ಲೂಟಿ ಮಾಡಿ ಹೋಗಿದ್ದಾರೆ ಎಂದು ಕಾಂಗ್ರೆಸ್ ಅತೃಪ್ತ ಶಾಸಕರ ವಿರುದ್ದ ಕೆ.ವೈ ನಂಜೇಗೌಡ ಅವರು ವಾಗ್ದಾಳಿ ನಡೆಸಿದ್ದಾರೆ.

ಮೈತ್ರಿ ಸರ್ಕಾರದ ವಿರುದ್ಧ ಅತೃಪ್ತ ಶಾಸಕರು ರಾಜೀನಾಮೆ ಸಲ್ಲಿಸಿ ಬಾಂಬೆಯಲ್ಲಿ ವಾಸ್ತವ್ಯ ಹೂಡಿರುವ ಬಗ್ಗೆ ಕೋಲಾರದ ನರಸಾಪುರ ಕೆರೆ ಬಳಿ ಸೋಮವಾರ ಮಾಧ್ಯಮದ ಜೊತೆ ಮಾತನಾಡಿದ ಅವರು, ರಾಜಿನಾಮೆ ನೀಡಿರೋ ಎಲ್ಲ ಅತೃಪ್ತ ಶಾಸಕರಿಗೆ ತೆಲುಗು ಭಾಷೆಯಲ್ಲಿ ಬೈಯುವ ಮೂಲಕ ಆಕ್ರೋಶಗೊಂಡರು.

ಇನ್ನು ಮಾನ-ಮರ್ಯಾದೆ ಇದ್ದಿದ್ದರೆ ಶಾಸಕರು ರಾಜಿನಾಮೆ ನೀಡ್ತಿರಲಿಲ್ಲ, ರಾಜೀನಾಮೆಯಿಂದ ಎಲ್ಲರಿಗೂ ಮಾನ ಮರ್ಯಾದೆ ಹೋಗುತ್ತಿದೆ. ಚುನಾವಣೆ ಬಂದಲ್ಲಿ ಯಾವ ಮುಖ ಇಟ್ಟು ವೋಟು ಕೇಳೋಕೆ ಹೋಗೊದು, ಜನ ಉಗೀತಾರೆ ಎಂದು ಕೋಲಾರ ಜಿಲ್ಲೆಯ ಮಾಲೂರು ಕ್ಷೇತ್ರದ ಕಾಂಗ್ರೆಸ್​​ ಶಾಸಕ ಕೆ.ವೈ ನಂಜೇಗೌಡ ಅವರು ಪ್ರತಿಕ್ರಿಯೆ ನೀಡಿದ್ದಾರೆ

ಅಷ್ಟೇ ಅಲ್ಲದೇ ಹೆಚ್​.ಡಿ ರೇವಣ್ಣ ಸರಿಯಿಲ್ಲ, ತುಂಬಾ ತೊಂದರೆ ಕೊಡುತ್ತಾರೆ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ ರೇವಣ್ಣ ವಿರುದ್ಧ ಮಾಲೂರು ಕ್ಷೇತ್ರದ ಕಾಂಗ್ರೆಸ್​ ಶಾಸಕ ಕೆ.ವೈ ನಂಜೇಗೌಡ ವಾಗ್ದಾಳಿ ನಡೆಸಿದರು.

ಕೋಲಾರದ ನರಸಾಪುರ ಕೆರೆ ಬಳಿ ಸೋಮವಾರ ಮಾಧ್ಯಮದ ಜೊತೆ ಮಾತನಾಡಿದ ಅವರು, ಸರ್ಕಾರದಲ್ಲಿ ರೇವಣ್ಣ ದೊಡ್ಡ ಮನುಷ್ಯರಲ್ಲ, ನಮ್ಗು ತೊಂದರೆ ಕೊಟ್ಟಿದ್ದಾರೆ. ರೇವಣ್ಣ ಯಾರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ವಿರುದ್ದವಾಗಿ ಕೆಲವೊಂದು ಕೆಲಸ ಮಾಡುತ್ತಾರೆ. ಆದರೆ, ಎಂಟಿಬಿ ನಾಗರಾಜ್ ಅವರು ಇದೇ ಕಾರಣದಿಂದ ರಾಜಿನಾಮೆ ನೀಡಬಾರದಿತ್ತು ಎಂದು ಅವರು ನುಡಿದರು.

Comments are closed.