
ಬೆಂಗಳೂರು: ಡಾಲರ್ಸ್ ಕಾಲೋನಿ ಮನೆಯಲ್ಲಿ ಮಾತನಾಡಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮುಂಬೈಯಲ್ಲಿ ಇರುವ ರಾಜೀನಾಮೆ ನೀಡಿರುವ ಶಾಸಕರು ಮರಳಿ ಬರುವ ಮಾತಿಲ್ಲ. ಅವರ ನಿರ್ಧಾರ ಅಚಲವಾಗಿದೆ. ಮುಂದಿನ ಮೂರು ದಿನಗಳಲ್ಲಿ ಎಲ್ಲವೂ ಒಳ್ಳೆಯದೇ ನಡೆಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನೆರಡು ದಿನಗಳಲ್ಲಿ ನ್ಯಾಯಾಲಯದ ತೀರ್ಪು ಬರುತ್ತದೆ. ಪರಿಸ್ಥಿತಿ ನಮಗೆ ಅನುಕೂಲವಾಗಿದೆ. ನಾಡಿನ ಜನರ ಸೇವೆ ಮಾಡುವ ಭಾಗ್ಯ ಸಿಕ್ಕರೆ ನಮ್ಮ ಭಾಗ್ಯ ಎಂದಿದ್ದಾರೆ. ಮುಂಬೈನಲ್ಲಿರುವ ಶಾಸಕರು ವಾಪಸ್ ಬರಲ್ಲ ಅಂತ ಹೇಳಿದ್ದಾರೆ. ಇದು ಬಹಳ ಸಂತೋಷದ ಸಂಗತಿ. ರಾಜಕೀಯ ಬೆಳವಣಿಗೆಗಳು ಬಹಳ ಅನುಕೂಲಕರವಾಗಿ ನಡೆಯುತ್ತಿವೆ. ಇದರಿಂದ ಬಹಳ ಸಂತೋಷವಾಗಿ, ನೆಮ್ಮದಿಯಿಂದ ಇದ್ದೇವೆ ಎಂದಿದ್ದಾರೆ.
ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ್ ನೇಮಕವಾಗಿದ್ದಾರೆ. ಸಂಘಪರಿವಾರದ ಹಿನ್ನೆಲೆಯಿಂದ ಬಂದವರಿಗೆ ಈ ಸ್ಥಾನ ನೀಡಿದ್ದು ಸಂತಸವಾಗಿದೆ. ಕರ್ನಾಟಕಕ್ಕೆ ಈ ಸ್ಥಾನ ಸಿಕ್ಕಿರುವುದು ಬಹಳ ಸಂತೋಷ ವಾಗಿದೆ. ಬಿಎಲ್.ಸಂತೋಷ್ ಗೆ ಚಿಕ್ಕ ವಯಸ್ಸಿನಲ್ಲಿ ಇಂತಹ ಉನ್ನತ ಹುದ್ದೆ ಸಿಕ್ಕಿರುವುದಕ್ಕೆ ಅವ್ರನ್ನ ಅಭಿನಂದಿಸುತ್ತೇನೆ. ಈ ಮೂಲಕ ಕರ್ನಾಟಕದಲ್ಲಿ ಪಕ್ಷ ಬಲಪಡಿಸುವ ಕಾರ್ಯಕ್ಕೆ ಸಹಾಯವಾಗಲಿದೆ ಎಂದು ಬಿ.ಎಲ್.ಸಂತೋಷ್ಗೆ ಮಾಜಿ ಸಿಎಂ ಯಡಿಯೂರಪ್ಪ ಅಭಿನಂದಿಸಿದ್ದಾರೆ.
Comments are closed.