ಕುಂದಾಪುರ: ಅಕ್ರಮಗಳ ತಡೆಗೆ ಗಂಗೊಳ್ಳಿಯಲ್ಲಿ ಪೊಲೀಸ್ ಇಲಾಖೆ ಮುಂದಾಗಿದ್ದು ಮೇಲ್ ಗಂಗೊಳ್ಳಿ ಎಂಬಲ್ಲಿ ದಿನದ ಇಪ್ಪತ್ತ ನಾಲ್ಕು ಗಂಟೆ ಕಾರ್ಯಾಚರಿಸುವ ಚೆಕ್ ಪೋಸ್ಟ್ ನಿರ್ಮಿಸಲಾಗಿದೆ.

ಅಕ್ರಮ ವ್ಯವಹಾರ , ಗೋಸಾಗಾಟ, ಮರಳು ಸಾಗಾಟ, ಅಪ್ರಾಪ್ತರ ವಾಹನ ಚಾಲನೆ,ಸರಿಯಾದ ದಾಖಲೆ ಇಲ್ಲದೆ ವಾಹನ ಚಾಲನೆ, ವೇಗದ ಚಾಲನೆ, ರಿಕ್ಷಾ,ಶಾಲಾ ಬಸ್ಸು ಹಾಗೂ ಖಾಸಗಿ ಬಸ್ಸುಗಳಲ್ಲಿ ಮಿತಿಗಿಂತ ಹೆಚ್ಚು ಪ್ರಮಾಣದಲ್ಲಿ ವಿದ್ಯಾರ್ಥಿಗಳ ಹಾಗೂ ಪ್ರಯಾಣಿಕರ ಸಾಗಾಟ ದ ಬಗ್ಗೆ ಆರೋಪ ಬಂದ ಹಿನ್ನೆಲೆಯಲ್ಲಿ, ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಆದೇಶದ ಅನ್ವಯ ಕುಂದಾಪುರ ಉಪವಿಭಾಗದ ಡಿವೈಎಸ್ಪಿ , ಬೈಂದೂರು ವೃತ್ತ ನಿರೀಕ್ಷಕ ಹಾಗೂ ಗಂಗೊಳ್ಳಿ ಠಾಣಾಧಿಕಾರಿ ನೇತ್ರದ್ವದಲ್ಲಿ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದೆ.
Comments are closed.