ಕುಂದಾಪುರ : ಬೀಜಾಡಿ ಕಡಲ ಕಿನಾರೆಯಲ್ಲಿ ಗಂಭೀರ ಗಾಯಗೊಂಡು ಅರೆಜೀವವಾಗಿ ಬಿದ್ದಿದ್ದ ಕಡಲಾಮೆಯನ್ನು ಕ್ಲೀನ್ ಕುಂದಾಪುರ ಪ್ರೊಜೆಕ್ಟ್ ಸದಸ್ಯರು ರಕ್ಷಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಸಮುದ್ರ ತೀರಗಳ ಸ್ವಚ್ಛತಾ ಅಭಿಯಾನ ನಡೆಸುತ್ತಿರುವ ಕ್ಲೀನ್ ಪೊಜೆಕ್ಟ್ ಸದಸ್ಯರು ಬೀಜಾಡಿ ಬೀಜ್ ಬಳಿ ಸ್ವಚ್ಛತಾ ಕಾರ್ಯ ನಡೆಸುತ್ತಿರುವಾಗ ಗಾಯಗೊಂಡ ಆಮೆ ಕಣ್ಣಿಗೆ ಬಿದ್ದಿದೆ.

ಪ್ರೊಜೆಕ್ಟ್ ತಂಡದ ಸದಸ್ಯೆ ಡಾ.ರಶ್ಮಿ ಆಮೆಗೆ ಪ್ರಥಮ ಚಿಕಿತ್ಸೆ ನೀಡಿದ್ದು ಕೃತಕ ನೀರಿನ ತೊಟ್ಟಿ ನಿರ್ಮಿಸಿ ಆಮೆ ಅದರಲ್ಲಿ ಬಿಟ್ಟು ನಂಜು ನಾಶಕ ಔಷಧ ನೀಡಲಾಗಿದೆ. ಕುಂದಾಪುರ ಪಶು ವೈದ್ಯಾಧಿಕಾರಿ ಡಾ.ಮಹೇಶ್ ಸ್ಥಳಕ್ಕೆ ಭೇಟಿ ನೀಡಿ ಆಮೆ ಪರೀಕ್ಷೆ ನಡೆಸಿದ್ದಾರೆ. ಕುಂದಾಪುರ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಆಮೆ ಚಿಕಿತ್ಸೆಗೆ ಒಪ್ಪಿಗೆ ಸೂಚಿಸಿದ್ದಾರೆ. ಕ್ಲೀನ್ ಕುಂದಾಪುರ ಸದಸ್ಯೆ ಗೋಪಾಡಿ ಗ್ರಾಪಂ ಅಧ್ಯಕ್ಷೆ ಸರಸ್ವತಿ ಜಿ.ಪುತ್ರನ್ ಆಮೆ ಸಂಪೂರ್ಣ ಚೇತರಿಸಿಕೊಂಡ ನಂತರ ಅರಣ್ಯ ಇಲಾಖೆ ಹಸ್ತಾಂತರ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಕ್ಲೀನ್ ಕುಂದಾಪುರ ಸದಸ್ಯರು ಆಮೆ ರಕ್ಷಣೆಯಲ್ಲಿ ಕೈ ಜೋಡಿಸಿದ್ದರು.
Comments are closed.