ಮನೋರಂಜನೆ

ಶಿವರಾಜ್ ಕುಮಾರ್ ನಟನೆಯ ‘ರುಸ್ತುಂ’ ಕಲೆಕ್ಷನ್ ಬಗ್ಗೆ ನಿರ್ಮಾಪಕರು ಫುಲ್ ಖುಷ್

Pinterest LinkedIn Tumblr


‘ರುಸ್ತುಂ’ ಸಿನಿಮಾ ನೋಡಿದ ಪ್ರತಿಯೊಬ್ಬರೂ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಎಂದು ಖುಷಿ ವ್ಯಕ್ತಪಡಿಸಿದ್ದಾರೆ ನಿರ್ದೇಶಕ ರವಿವರ್ಮಾ. ಇದು ಅವರ ನಿರ್ದೇಶನದ ಪ್ರಥಮ ಚಿತ್ರವೂ ಹೌದು. ‘ನಾನು ಇಷ್ಟು ದಿನ ಸಾಹಸ ನಿರ್ದೇಶಕನಾಗಿ ಎಲ್ಲರ ಬಳಿಯೂ ಕೆಲಸ ಮಾಡಿದ್ದೆ. ಮೊದಲ ಬಾರಿಗೆ ಒಂದು ಸಿನಿಮಾವನ್ನು ನಿರ್ದೇಶನ ಮಾಡುತ್ತೇನೆ ಎಂದಾಗ ನಿರ್ಮಾಪಕರಾದ ಜಯಣ್ಣ ಮತ್ತು ನಾಯಕನಟ ಶಿವರಾಜ್‌ಕುಮಾರ್‌ ಇಬ್ಬರೂ ಪ್ರೋತ್ಸಾಹ ನೀಡಿದರು” ಎಂದಿದ್ದಾರೆ.

“ಜತೆಗೆ ನನ್ನ ತಂಡ ನನ್ನ ಬೆನ್ನೆಲುಬಾಗಿ ನಿಂತಿತು. ಇವೆಲ್ಲದರ ಪರಿಣಾಮ ಜನ ಇಂದು ಸಿನಿಮಾವನ್ನು ಮುಗಿಬಿದ್ದು ನೋಡುತ್ತಿದ್ದಾರೆ. ಸಿನಿಮಾದಲ್ಲಿರುವ ಕಂಟೆಂಟ್‌ ಜನರಿಗೆ ಇಷ್ಟವಾಗಿದೆ. ಮಾಸ್‌ ಪ್ರೇಕ್ಷಕರಿಗೆ ಮತ್ತು ಫ್ಯಾಮಿಲಿ ಪ್ರೇಕ್ಷಕರಿಬ್ಬರಿಗೂ ಸಿನಿಮಾ ಇಷ್ಟವಾಗುತ್ತಿದೆ. ಚಿತ್ರಮಂದಿರದೊಳಗೆ ಬರುವ ಪ್ರೇಕ್ಷಕ ವಾಪಸ್‌ ಹೋಗುತ್ತಾ ಒಳ್ಳೆ ಸಿನಿಮಾ ನೋಡಿದ್ದೇನೆ ಎಂಬ ಭಾವನೆಯಲ್ಲಿ ಹೋಗುತ್ತಿದ್ದಾನೆ” ಎನ್ನುತ್ತಾರೆ ನಿರ್ದೇಶಕ ರವಿವರ್ಮಾ. [ ರುಸ್ತುಂ ಚಿತ್ರ ವಿಮರ್ಶೆ]

“ನಮ್ಮ ಪ್ರೊಡಕ್ಷನ್‌ ಹೌಸ್‌ನಲ್ಲಿ ಇದುವರೆಗೂ ಒಳ್ಳೊಳ್ಳೆ ಸಿನಿಮಾಗಳು ಬಂದಿವೆ. ಆ ಸಾಲಿಗೆ ರುಸ್ತುಂ ಸಹ ಸೇರಿಕೊಂಡಿದೆ. ಸಿನಿಮಾ ನೋಡಿದ ಸಾಕಷ್ಟು ಮಂದಿ ನನಗೆ ಕರೆ ಮಾಡಿ ಪ್ರಾಮಾಣಿಕ ಅಧಿಕಾರಿಗಳ ಫ್ಯಾಮಿಲಿಯಲ್ಲಿ ಆಗುವ ಸಮಸ್ಯೆಗಳನ್ನು ಚೆನ್ನಾಗಿ ತೋರಿಸಿದ್ದೀರಾ. ಅದು ನಮಗೆ ಇಷ್ಟವಾಗಿದೆ ಎಂದಿದ್ದಾರೆ. ಇಂತಹ ಫ್ಯಾಮಿಲಿ ಕಂಟೆಂಟ್‌ ಸಾಕಷ್ಟು ಜನರಿಗೆ ಇಷ್ಟವಾಗಿದೆ. ಇನ್ನು ಆ್ಯಕ್ಷನ್‌ ದೃಶ್ಯಗಳನ್ನಂತೂ ಜನ ಎಂಜಾಯ್‌ ಮಾಡಿಕೊಂಡು ನೋಡುತ್ತಿದ್ದಾರೆ” ಎನ್ನುತ್ತಾರೆ ನಿರ್ಮಾಪಕ ಜಯಣ್ಣ.

ಜಯಣ್ಣ ಫಿಲಂಸ್‌ ಬ್ಯಾನರ್‌ನಡಿ ಈ ಚಿತ್ರವನ್ನು ಜಯಣ್ಣ-ಭೋಗೇಂದ್ರ ನಿರ್ಮಾಣ ಮಾಡಿದ್ದಾರೆ. ಶಿವರಾಜ್‌ಕುಮಾರ್‌, ಶ್ರದ್ಧಾ ಶ್ರೀನಾಥ್‌, ರಚಿತಾ ರಾಮ್‌, ವಿವೇಕ್‌ ಒಬೆರಾಯ್‌, ಮಯೂರಿ ನಟಿಸಿದ್ದಾರೆ.

Comments are closed.